
ರೇಣುಕಾಸ್ವಾಮಿ ಕೊಲೆ ಪ್ರಕರಣ | ಮತ್ತೊಬ್ಬ ಸ್ಯಾಂಡಲ್‌ವುಡ್ ನಟ ಅರೆಸ್ಟ್!
ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿರುವ ಈತ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಬಂಧಿತನನ್ನು ಪ್ರದೋಶ್ ಎಂದು ಗುರುತಿಸಲಾಗಿದ್ದು, ಈತ ಕೂಡ ಸ್ಯಾಂಡಲ್ ವುಡ್ ನಟನಾಗಿದ್ದಾನೆ. ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿರುವ ಈತ, ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ.
ರೇಣುಕಾಸ್ವಾಮಿ ಮೃತಪಟ್ಟ ಬಳಿಕ ಗಾಬರಿಗೊಂಡ ದರ್ಶನ್ 30 ಲಕ್ಷ ರೂ. ನೀಡಿ ಬಾಡಿಯನ್ನು ಎಲ್ಲಾದರು ಬಿಸಾಕುವಂತೆ ಹೇಳುತ್ತಾರೆ. ಆಗ ತನ್ನ ಆಪ್ತ, ಹೋಟೆಲ್ ಉದ್ಯಮಿ ಪ್ರದೋಶ್ ಮತ್ತಿತರರು ದೇಹವನ್ನು ಸ್ಕಾರ್ಪಿಯೋ ಕಾರಿನಲ್ಲಿ ಒಯ್ದು ಸುಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಒಂದರ ಮುಂಭಾಗದ ಮೋರಿ ಬಳಿ ಎಸೆದು ಹೋಗಿದ್ದಾರೆ.
ʼಬೃಂದಾವನʼ, ʻಬುಲ್ ಬುಲ್ʼ ಚಿತ್ರಗಳಲ್ಲಿ ಪ್ರದೋಶ್, ದರ್ಶನ್ ಜೊತೆ ನಟಿಸಿದ್ದಾನೆ. ಇದಲ್ಲದೆ ಬಿಜೆಪಿ ಸಚಿವರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೂಡ ಕೆಲಸ ಮಾಡಿದ್ದು, ಮಾತ್ರವಲ್ಲದೇ ಬಿಜೆಪಿ ಐಟಿ ವಿಭಾಗದಲ್ಲಿಯೂ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ.