ರಾಜಸ್ಥಾನ: ಪ್ರಮುಖ ಜಾಟ್ ನಾಯಕ ಕಾಂಗ್ರೆಸ್ ಸೇರ್ಪಡೆ
x

ರಾಜಸ್ಥಾನ: ಪ್ರಮುಖ ಜಾಟ್ ನಾಯಕ ಕಾಂಗ್ರೆಸ್ ಸೇರ್ಪಡೆ


ರಾಜಸ್ಥಾನದ ಚುರುವಿನ ಹಾಲಿ ಬಿಜೆಪಿ ಸಂಸದ ರಾಹುಲ್ ಕಸ್ವಾನ್ ಅವರು ಮಾ.11 ರಂದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಇವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರಿದ ಎರಡನೇ ಪ್ರಮುಖ ಜಾಟ್ ನಾಯಕ.

ಕಸ್ವಾನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷಕ್ಕೆ ಸೇರ್ಪಡೆಗೊಳಿಸಿ ಕೊಂಡಿದ್ದು,ಅವರು ಚುರು ಲೋಕಸಭೆ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ.ಇದೇ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ.

ಕಸ್ವಾನ್ ಬಂಡಾಯ:

ಈ ಕ್ಷೇತ್ರದಿಂದ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ದೇವೇಂದ್ರ ಝಜಾರಿಯಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಕಳೆದ ಹಲವು ದಿನಗಳಿಂದ ಈ ಜಾಟ್ ನಾಯಕ ಕ್ಷೇತ್ರದಾದ್ಯಂತ ಸಭೆ ನಡೆಸಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ಚುರು ಕಸ್ವಾನ್ ಕುಟುಂಬದ ಭದ್ರಕೋಟೆಯಾಗಿದ್ದು, ಅವರ ತಂದೆ ದಿವಂಗತ ರಾಮ್ ಸಿಂಗ್ ಕಸ್ವಾನ್ ನಾಲ್ಕು ಬಾರಿ (1991, 1999, 2004 ಮತ್ತು 2009) ಬಿಜೆಪಿಯಿಂದ ಗೆದ್ದಿದ್ದರು. ರಾಹುಲ್‌ 2014ರಲ್ಲಿ 2.94 ಲಕ್ಷ ಮತ್ತು 2019 ರಲ್ಲಿ 3.34 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ರಾಹುಲ್ ಅವರ ತಾಯಿ ಕಮಲಾ, 2008 ರಲ್ಲಿ ಚುರು ಕ್ಷೇತ್ರದ ಸಾದಲ್ಪುರ್ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿದ್ದರು.

Read More
Next Story