ಮತ್ತೆ ಆರಂಭವಾಗಲಿದೆ ಶಾಲಾ ಮಕ್ಕಳ ಕಲರವ!
x
ಇಂದಿನಿಂದ ಅಧಿಕೃತವಾಗಿ ಶಾಲೆಗಳು ಆರಂಭಗೊಂಡಿವೆ.

ಮತ್ತೆ ಆರಂಭವಾಗಲಿದೆ ಶಾಲಾ ಮಕ್ಕಳ ಕಲರವ!

ಮೇ 30 ರವರೆಗೆ ಶಾಲೆಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಪ್ರಾರಂಭೋತ್ಸವಕ್ಕೆ ಎರಡು ದಿನ ಸಿದ್ದತೆ ಮಾಡಿಕೊಳ್ಳಬೇಕು. ಮೇ 31 ರಂದು ಶಾಲಾ ಆರಂಭೋತ್ಸವವನ್ನು ವಿಜೃಂಭಣೆಯಿಂದ ಮಾಡಬೇಕು. ಮೇ 31ರಿಂದ ಶಾಲೆಗಳನ್ನು ಆರಂಭಿಸಬೇಕು ಎಂದು ಇಲಾಖೆ ಸೂಚನೆ ನೀಡಿದೆ.


Click the Play button to hear this message in audio format

ಬೇಸಿಗೆ ರಜೆ ಮುಗಿದಿದ್ದು, ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಂಡಿವೆ. ಬುಧವಾರದಿಂದ ( ಮೇ 29) 2024-2025ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ.

ಕಳೆದ 2 ತಿಂಗಳಿಂದ ಬೇಸಿಗೆ ರಜೆಯಿಂದ ಬಂದ್ ಆಗಿದ್ದ ಶಾಲೆಗಳ ಹೊಸ ಶೈಕ್ಷಣಿಕ ವರ್ಷ ಮತ್ತೆ ಅಧಿಕೃತವಾಗಿ ಆರಂಭವಾಗಿವೆ.

ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಬಗ್ಗೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದ್ದು, ಮೇ 30 ರವರೆಗೆ ಶಾಲೆಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ಪ್ರಾರಂಭೋತ್ಸವಕ್ಕೆ ಎರಡು ದಿನ ಸಿದ್ದತೆ ಮಾಡಿಕೊಳ್ಳಬೇಕು. ಮೇ 31 ರಂದು ಶಾಲಾ ಆರಂಭೋತ್ಸವವನ್ನು ವಿಜೃಂಭಣೆಯಿಂದ ಮಾಡಬೇಕು. ಸರ್ಕಾರಿ, ಖಾಸಗಿ, ಅನುದಾನ ಹಾಗೂ ಅನುದಾನ ರಹಿತ ಶಾಲೆಗಳೆಲ್ಲಾ ಮೇ 31ರಿಂದ ಶಾಲೆಗಳನ್ನು ಆರಂಭಿಸಬೇಕು.ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರಿಗೆ ಹೂವು, ಚಾಕೊಲೇಟ್ ಸೇರಿದಂತೆ ಯಾವುದಾದರೂ ಸಿಹಿ ನೀಡಿ ಸ್ವಾಗತಿಸುವಂತೆ ಸಲಹೆ ನೀಡಲಾಗಿದೆ.

ಈಗಾಗಲೇ ಸಮವಸ್ತ್ರ ಪೂರ್ಣ ಪ್ರಮಾಣದಲ್ಲಿ ತಾಲೂಕು ಮಟ್ಟಕ್ಕೆ ರವಾನೆಯಾಗಿದ್ದು, ಪಠ್ಯಪುಸ್ತಕಗಳನ್ನು ಕೂಡ ಶೇ.75ರಿಂದ 80ರಷ್ಟು ಸರಬರಾಜು ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಉಳಿದ ಪಠ್ಯಪುಸ್ತಕಗಳ ಪೂರೈಕೆ ಮಾಡಲಾಗುವುದು. ಬಿಇಒ, ಡಿಡಿಪಿಐಗಳು ಶಾಲೆಗಳಿಗೆ ಅವುಗಳನ್ನು ತಲುಪಿಸಿ ಪ್ರಾರಂಭೋತ್ಸವದ ದಿನವೇ ವಿತರಣೆಗೆ ಕ್ರಮ ವಹಿಸಬೇಕೆಂದು ಕಳಪೆ ಗುಣಮಟ್ಟದ ವಸ್ತುಗಳಿಗೆ ಸಂಬಂಧಿಸಿದಂತೆ ಅಥವಾ ಶಾಲೆಯ ದುರಸ್ತಿ ಕಾರ್ಯಗಳು ಪೂರ್ಣಗೊಳ್ಳದಿದ್ದರೆ ವರದಿ ಮಾಡಬೇಕು ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಶಾಲಾ ಆರಂಭವೋತ್ಸವಕ್ಕೆ ಶಿಕ್ಷಕರು ತಯಾರಿಯನ್ನು ಮಾಡಿಕೊಳ್ಳಬೇಕು. ತಳಿರು ತೋರಣಗಳನ್ನು ಶಾಲೆಗಳಲ್ಲಿ ಕಟ್ಟಿಸಬೇಕು. ಈಗಾಗಲೇ ಶಾಲೆಗೆ ಬಂದಿರುವ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಮೊದಲನೇ ದಿನವೇ ವಿತರಿಸಬೇಕು. ಮಕ್ಕಳು ಇದರಿಂದ ಶಾಲೆಗೆ ಬರಲು ಸಹಕಾರಿಯಾಗಲಿದೆ. ಅಂದು ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಕರೆಯಿಸಿ ಅವರಿಂದಲೇ ಪುಸ್ತಕ, ಸಮವಸ್ತ್ರ ವಿತರಿಸಬೇಕು ತಿಳಿಸಿದೆ.

ಸಮವಸ್ತ್ರದಲ್ಲಿ ಕೆಲವು ಬದಲಾವಣೆ

ಸಮವಸ್ತ್ರದಲ್ಲಿ ಕೆಲವು ಬದಲಾವಣೆಗಳನ್ನು ಈ ವರ್ಷ ಶಿಕ್ಷಣ ಇಲಾಖೆ ಮಾಡಿದೆ. 8, 9 ಮತ್ತು 10ನೇ ಕ್ಲಾಸ್‌ ವಿದ್ಯಾರ್ಥಿನಿಯರಿಗೆ ನೀಡುತ್ತಿದ್ದ ಚೂಡಿದಾರ್ ಸಮವಸ್ತ್ರವನ್ನು ಈ ವರ್ಷದಿಂದ 6 ಮತ್ತು 7 ನೇ ಕ್ಲಾಸ್ ವಿದ್ಯಾರ್ಥಿನಿಯರಿಗೂ ನೀಡಲು ಮುಂದಾಗಿದೆ ಶಿಕ್ಷಣ ಇಲಾಖೆ. ಶಾಲಾರಂಭದಲ್ಲಿಯೇ 2 ಜೊತೆ ಸಮವಸ್ತ್ರವನ್ನು 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಸಜ್ಜಾಗಿದೆ ಇಲಾಖೆ. ಕಳೆದ ವರ್ಷ ಒಂದೇ ಜೊತೆ ಸಮವಸ್ತ್ರ ವಿತರಣೆ ಮಾಡಿತ್ತು. ಆದರೆ, ಈ ಬಾರಿ ಆರಂಭದಲ್ಲಿಯೇ ಎರಡೂ ಜೊತೆಯನ್ನೂ ವಿತರಣೆ ಮಾಡಿದೆ. ತಿಳಿ ನೀಲಿ ಬಣ್ಣದ ಟಾಪ್‌ ಮತ್ತು ಕಡು ನೀಲಿ ಬಣ್ಣದ ದುಪ್ಪಟವನ್ನು ವಿತರಣೆ ಮಾಡಲಾಗಿದೆ. ಉಳಿದಂತೆ 1 ರಿಂದ 7ನೇ ತರಗತಿ ಬಾಲಕರಿಗೆ ಚಡ್ಡಿ ಮತ್ತು ಅಂಗಿ, 6ನೇ ತರಗತಿ ಮೇಲ್ಪಟ್ಟವರಿಗೆ ಪ್ಯಾಂಟ್ ಸಮವಸ್ತ್ರ ನೀಡಲಾಗಿದೆ.

Read More
Next Story