ಪ್ರಧಾನಿಯಿಂದ 6 ಏಮ್ಸ್‌ಗಳ ಉದ್ಘಾಟನೆ
x

ಪ್ರಧಾನಿಯಿಂದ 6 ಏಮ್ಸ್‌ಗಳ ಉದ್ಘಾಟನೆ


ಹೊಸದಿಲ್ಲಿ, ಫೆ.19- ಮುಂದಿನ ಆರು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಮತ್ತು ಉತ್ತರ ಪ್ರದೇಶದ ರಾಯ್‌ಬರೇಲಿ ಸೇರಿದಂತೆ ಆರು ಹೊಸ ಏಮ್ಸ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಮಂಗಳವಾರ ಜಮ್ಮುವಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾಂಬಾ ಜಿಲ್ಲೆಯ ಏಮ್ಸ್, ಫೆಬ್ರವರಿ 25 ರಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್‌ಕೋಟ್, ಮಂಗಳಗಿರಿ, ಬಟಿಂಡಾ, ರಾಯ್ ಬರೇಲಿ ಮತ್ತು ಕಲ್ಯಾಣಿಯಲ್ಲಿ ಇತರ ಐದು ಏಮ್ಸ್‌ ಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ 2019 ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿಯವರು ಶಿಲಾನ್ಯಾಸ ಮಾಡಿದ ಏಮ್ಸ್‌ 1,660 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ 227 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿದೆ. 11,391.79 ಕೋಟಿ ವೆಚ್ಚದ ಈ ಎಲ್ಲಾ ಆರೋಗ್ಯ ಯೋಜನೆಗಳು ದೇಶದ ಆರೋಗ್ಯ ಕ್ಷೇತ್ರವನ್ನು ಪರಿವರ್ತಿಸುತ್ತವೆ.

2013-14ರಲ್ಲಿ ಯುಪಿಎ ಅವಧಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ ನಲ್ಲಿ 37,330 ಕೋಟಿ ರೂ. ಮೀಸಲಿಡಲಾಗಿತ್ತು. ಎನ್‌ಡಿಎ ಅಡಿಯಲ್ಲಿ 2024-25ರಲ್ಲಿ 90,658.63 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story