ಹತ್ತು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ
ಮಾ.12- ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 10 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ಸೇರಿದಂತೆ 85,000 ಕೋಟಿ ರೂ.ಮೌಲ್ಯದ ರೈಲ್ವೆ ಯೋಜನೆಗಳಿಗೆ ಅಡಿಗಲ್ಲು ಹಾಕಿದರು.
ಅಹಮದಾಬಾದ್-ಮುಂಬೈ ಸೆಂಟ್ರಲ್, ಸಿಕಂದರಾಬಾದ್-ವಿಶಾಖಪಟ್ಟಣಂ, ಮೈಸೂರು-ಡಾ. ಎಂಜಿಆರ್ ಸೆಂಟ್ರಲ್ (ಚೆನ್ನೈ), ಪಟ್ನಾ-ಲಕ್ನೋ, ನ್ಯೂ ಜಲಪೈಗುರಿ-ಪಟ್ನಾ, ಪುರಿ-ವಿಶಾಖಪಟ್ಟಣಂ, ಲಕ್ನೋ-ಡೆಹ್ರಾಡೂನ್, ಕಲಬುರಗಿ-ಬೆಂಗಳೂರು, ರಾಂಚಿ-ವಾರಣಾಸಿ ಮತ್ತು ಖಜುರಾಹೊ- ದೆಹಲಿ (ನಿಜಾಮುದ್ದೀನ್) ನಡುವೆ 10 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು.
ಅಹಮದಾಬಾದ್-ಜಾಮ್‌ನಗರ ವಂದೇ ಭಾರತ್ ರೈಲನ್ನು ದ್ವಾರಕಾವರೆಗೆ, ಅಜ್ಮೀರ್-ದೆಹಲಿ ಸರೈ ರೋಹಿಲ್ಲಾ ವಂದೇ ಭಾರತ್ ಚಂಡೀಗಢದವರೆಗೆ, ಗೋರಖ್‌ಪುರ-ಲಖನೌ ವಂದೇ ಭಾರತ್ ಅನ್ನು ಪ್ರಯಾಗರಾಜ್‌ವರೆಗೆ ಮತ್ತು ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಅನ್ನು ಮಂಗಳೂರಿನವರೆಗೆ ವಿಸ್ತರಿಸಲಾಗುತ್ತಿದೆ. ಅಹಮದಾಬಾದ್‌ನ ಸಾಬರಮತಿಯಿಂದ ಈ ಎಲ್ಲ ಯೋಜನೆಗಳಿಗೆ ಚಾಲನೆ ನೀಡಿದರು.
ಪೂರ್ವ ಡಿಎಫ್ಸಿಯ ನ್ಯೂ ಖುರ್ಜಾದಿಂದ ಸಾಹ್ನೆವಾಲ್ ವಿಭಾಗ ಮತ್ತು ಪಶ್ಚಿಮ ಡಿಎಫ್ಸಿಯ ನ್ಯೂ ಮಕರಪುರದಿಂದ ನ್ಯೂ ಘೋಲ್ವಾಡ್ ವಿಭಾಗ ನಡುವಿನ ಕಾರಿಡಾರ್‌ನ ಎರಡು ಹೊಸ ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಅಸನ್ಸೋಲ್ ಮತ್ತು ಹಟಿಯಾ ಮತ್ತು ತಿರುಪತಿ ಮತ್ತು ಕೊಲ್ಲಂ ನಿಲ್ದಾಣಗಳ ನಡುವೆ ಎರಡು ಹೊಸ ಪ್ಯಾಸೆಂಜರ್ ರೈಲುಗಳಿಗೆ ಚಾಲನೆ ನೀಡಿದರು. ನ್ಯೂ ಖುರ್ಜಾ ಜಂಕ್ಷನ್, ಸಾಹ್ನಿವಾಲ್, ನ್ಯೂ ರೆವಾರಿ, ನ್ಯೂ ಕಿಶನ್‌ಗಢ್, ನ್ಯೂ ಘೋಲ್ವಾಡ್ ಮತ್ತು ನ್ಯೂ ಮಕರ್‌ಪುರದಿಂದ ವಿವಿಧ ಸ್ಥಳಗಳಿಗೆ ಸರಕು ಸಾಗಣೆ ರೈಲುಗಳನ್ನು ಹಸಿರು ನಿಶಾನೆ ತೋರಿಸಿದರು.
ವಿವಿಧ ರೈಲು ನಿಲ್ದಾಣಗಳಲ್ಲಿ 50 ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಲೋಕಾರ್ಪಣೆ ಮಾಡಿದರು. 51 ಮಲ್ಟಿ ಮೋಡಲ್ ಕಾರ್ಗೋ ಟರ್ಮಿನಲ್‌ಗಳನ್ನು ಸಮರ್ಪಿಸಿದರು.