ಈ ವಯಸ್ಸಿನವರಿಗೆ ಇನ್ಮುಂದೆ ಸಿಗಲ್ಲ ಸಿಗರೆಟ್‌ !
x
ಸಿಗರೇಟ್‌

ಈ ವಯಸ್ಸಿನವರಿಗೆ ಇನ್ಮುಂದೆ ಸಿಗಲ್ಲ ಸಿಗರೆಟ್‌ !

ಹುಕ್ಕಾ ಬಾರ್‌ ನಿಷೇಧ ಮಸೂದೆ ಮಂಡನೆ


ರಾಜ್ಯದಲ್ಲಿ ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೆಟ್‌ ಸೇರಿದಂತೆ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸರ್ಕಾರ ನಿಷೇಧ ವಿಧಿಸಿದೆ.

ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಹುಕ್ಕಾ ಬಾರ್‌ಗಳ ಮೇಲೆ ಸಂಪೂರ್ಣ ನಿಷೇಧ ವಿಧಿಸಿದೆ. ಅಲ್ಲದೇ ನಿಯಮ ಉಲ್ಲಂಘನೆ ಮಾಡುವವರಿಗೆ 1 ಲಕ್ಷ ರೂ.ವರೆಗೆ ದಂಡವನ್ನು ವಿಧಿಸಲಿದೆ.

ಇನ್ನು 21ಕ್ಕಿಂತ ಕಡಿಮೆ ವಯಸ್ಸಿನವರಿಗೆ ಹುಕ್ಕಾ ಬಾರ್, ಸಿಗರೆಟ್ ಮಾರಾಟ ನಿಷೇಧಿಸಲು ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರವು ಬುಧವಾರ ರಾಜ್ಯಾದ್ಯಂತ ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿದೆ.

ಈ ಮಸೂದೆಯ ಪ್ರಕಾರ, ಹುಕ್ಕಾ ಬಾರ್‌ ನಿಯಮ ಉಲ್ಲಂಘಿಸಿದವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ಸೇರಿದಂತೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದು ಹಾಗೂ ತಂಬಾಕು ಸೇವನೆಯಿಂದ ಎದುರಾಗುವ ರೋಗಗಳ ತಡೆಗಟ್ಟುವ ಉದ್ದೇಶದಿಂದ ಸಿಗರೆಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ(COTPA)ಗೆ ತಿದ್ದುಪಡಿ ತರಲಾಗಿದೆ.

ಇದರೊಂದಿಗೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೆಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಮಾರಾಟವನ್ನು ಸಹ ನಿಷೇಧಿಸಲಾಗಿದೆ.

ಸರ್ಕಾರವು ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೆಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದೆ. ನಿಯಮ ಉಲ್ಲಂಘಿಸಿದರೆ 1,000 ರೂ. ದಂಡ ವಿಧಿಸುವ ಅವಕಾಶ ಇದೆ.

ʻರಾಜ್ಯ ಸರ್ಕಾರವು ಹದಿಹರೆಯದವರ ಆರೋಗ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದೆʼ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವರದಿ ಆಧರಿಸಿ ಕ್ರಮ:

ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸಮೀಕ್ಷೆ: 2016-17 ವರದಿ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಹಲವು ಆತಂಕಕಾರಿ ಅಂಶಗಳು ಇದ್ದವು.

ಮುಖ್ಯವಾಗಿ, ಕರ್ನಾಟಕದಲ್ಲಿ ಶೇ.22.8 ರಷ್ಟು ವಯಸ್ಕರು ತಂಬಾಕು ಬಳಸುತ್ತಾರೆ ಮತ್ತು ಶೇ.8.8 ರಷ್ಟು ಧೂಮಪಾನಿಗಳು ಇದ್ದಾರೆ ಎಂದು ವರದಿಯಲ್ಲಿ

ಉಲ್ಲೇಖಿಸಲಾಗಿತ್ತು.

Read More
Next Story