ಆಸ್ಕರ್ 2024: ಟು ಕಿಲ್ ಎ ಟೈಗರ್ ಗೆ ನಿರಾಶೆ
x

ಆಸ್ಕರ್ 2024: 'ಟು ಕಿಲ್ ಎ ಟೈಗರ್' 'ಗೆ ನಿರಾಶೆ


ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ನಡೆದ ಘಟನೆ ಆಧರಿಸಿದ ಭಾರತೀಯ ಸಾಕ್ಷ್ಯಚಿತ್ರ ʻಟು ಕಿಲ್ ಎ ಟೈಗರ್ʼ, ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.

ಉಕ್ರೇನಿಯನ್ ನಿರ್ಮಾಪಕ ಮತ್ತು ಯುದ್ಧ ವರದಿಗಾರ ಮಿಸ್ಟೈಸ್ಲಾವ್ ಚೆರ್ನೋವ್ ನಿರ್ದೇಶಿಸಿದ ʻ20 ಡೇಸ್ ಇನ್ ಮಾರಿಯುಪೋಲ್ʼ ಆಯ್ಕೆದಾರರಿಂದ ಮನ್ನಣೆಗೆ ಪಾತ್ರವಾಗಿದೆ. 2022 ರಲ್ಲಿ ಉಕ್ರೇನ್ ಮೇಲೆ ರಶಿಯಾ ಆಕ್ರಮಣದ ಆರಂಭಿಕ ದಿನಗಳ ಕುರಿತ ವೈಯಕ್ತಿಕ ಅನುಭವದ ಕಥನ ಇದಾಗಿದೆ.

ನಟಿ ಪ್ರಿಯಾಂಕಾ ಚೋಪ್ರಾ ʻಟು ಕಿಲ್ ಎ ಟೈಗರ್ʼ ಅನ್ನು ಬೆಂಬಲಿಸಿದ್ದರು.ʻ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಗಂಭೀರ ವಿಷಯʼ ಎಂದು ಪ್ರಿಯಾಂಕಾ ಅವರು ಇತ್ತೀಚೆಗೆ ಪೀಪಲ್ ಮ್ಯಾಗಜೀನ್‌ಗೆ ತಿಳಿಸಿದ್ದರು.

ʻಭಾರತದ ಮೂರನೇ ಒಂದು ಭಾಗದಷ್ಟು ಮಹಿಳೆಯರು ಲೈಂಗಿಕ ದೌರ್ಜನ್ಯ ಅನುಭವಿಸುತ್ತಾರೆ. ಪ್ರಕರಣಗಳ ಕಡಿಮೆ ವರದಿಯಿಂದಾಗಿ ಅಂಕಿಅಂಶ ಹೆಚ್ಚಿರಬೇಕು.ಸಾಕ್ಷ್ಯ ಚಿತ್ರ ಬದುಕುಳಿದವರ ಬಗ್ಗೆ ಮಾತನಾಡುವುದಿಲ್ಲ. ಅವರ ಮಿತ್ರರು, ಮಹಿಳೆಯರನ್ನು ಬೆಂಬಲಿಸುವ ಪುರುಷರು, ತಂದೆಯೊಬ್ಬ ಇಡೀ ಸಮುದಾಯದ ವಿರುದ್ಧ ಹೇಗೆ ಹೋರಾಡುತ್ತಾನೆ ಎಂಬುದನ್ನು ಹೇಳುತ್ತದೆʼ ಎಂದು ಪ್ರಿಯಾಂಕಾ ಹೇಳಿದ್ದರು.

ಚೆರ್ನೋವ್‌ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಭಾವುಕರಾಗಿ,ʻ ರಷ್ಯಾ ತನ್ನ ತಾಯ್ನಾಡಿನ ಮೇಲಿನ ಆಕ್ರಮಣವನ್ನು ನಿಲ್ಲಿಸಬೇಕುʼ ಎಂದು ಒತ್ತಾಯಿಸಿದರು.

Read More
Next Story