ಆಸ್ಕರ್ 2024 : ಓಪನ್‌ಹೈಮರ್ ಗೆ 7 ಪ್ರಶಸ್ತಿ
x

ಆಸ್ಕರ್ 2024 : 'ಓಪನ್‌ಹೈಮರ್' ಗೆ 7 ಪ್ರಶಸ್ತಿ


ಲಾಸ್ ಏಂಜಲೀಸ್‌, ಮಾ.10-ʻಓಪನ್‌ಹೈಮರ್ʼ 96 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ ಸೇರಿದಂತೆ ಏಳು ಪ್ರಶಸ್ತಿ ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಿತು.

ಅತ್ಯುತ್ತಮ ನಟ ಸಿಲಿಯನ್ ಮರ್ಫಿ, ರಾಬರ್ಟ್ ಡೌನಿ ಜೂನಿಯರ್‌ ಅತ್ಯುತ್ತಮ ಪೋಷಕ ನಟ ಮತ್ತು ಕ್ರಿಸ್ಟೋಫರ್ ನೋಲನ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಜನ ವ್ಯಾಪಕವಾಗಿ ನೋಡಿದ, ದೊಡ್ಡ ಬಜೆಟ್ ಚಲನಚಿತ್ರಕ್ಕೆ ಅತ್ಯುನ್ನತ ಬಹುಮಾನ ನೀಡಿರುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್, ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಾಡದ ಕೆಲಸವನ್ನು ಮಾಡಿದೆ.

ಕಪ್ಪುಮುಖವಾಡ, ಡೈನೋಸಾರ್ ಅಥವಾ ಟಾಮ್ ಕ್ರೂಸ್ ಅಗತ್ಯವಿರುವ ಚಲನಚಿತ್ರೋದ್ಯ ಮದಲ್ಲಿ ವಿಜ್ಞಾನಿ ರಾಬರ್ಟ್ ಒಪನ್‌ಹೈಮರ್, ಪರಮಾಣು ಬಾಂಬ್‌ ಕುರಿತ ಈ ಸಂಕೀರ್ಣ ಚಲನಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ತಂದಿತು.

ಸಮಾರಂಭದಲ್ಲಿ ಮಾತನ್ನಾಡಿದ ಮರ್ಫಿ, ʻಒಳ್ಳೆಯದೋ ಅಥವಾ ಕೆಟ್ಟದ್ದೋ, ನಾವೆಲ್ಲರೂ ರಾಬರ್ಟ್ ಒಪನ್‌ಹೈಮರ್ ನ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ನಾನು ಪುರಸ್ಕಾರವನ್ನು ಶಾಂತಿ ಗಾಗಿ ಕೆಲಸ ಮಾಡುತ್ತಿರುವವರಿಗೆ ಅರ್ಪಿಸಲು ಬಯಸುತ್ತೇನೆ,ʼ ಎಂದರು.

ಸಾಮೂಹಿಕ ವಿನಾಶದ ಮಾನವ ಸಾಮರ್ಥ್ಯ ಕುರಿತ ನಿರಾಶಾದಾಯಕ ಚಿತ್ರವಾದ ʻಓಪೆನ್‌ಹೈಮರ್ʼ, ಮಾನವ ನಿರ್ಮಿತ ಅಥವಾ ದುರಂತಮಯ ಸಮಯಕ್ಕೆ ಮುನ್ಸೂಚನೆಯ ಚಲನಚಿತ್ರವಾಗಿದೆ.

ʻಪೂರ್ ಥಿಂಗ್ಸ್ʼ ನಲ್ಲಿ ಬೆಲ್ಲಾ ಬಾಕ್ಸ್ಟರ್‌ನ ಅಭಿನಯಕ್ಕಾಗಿ ಎಮ್ಮಾ ಸ್ಟೋನ್‌(35) ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ʻಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್ʼ ನ ಪಾತ್ರಕ್ಕಾಗಿ ಲಿಲಿ ಗ್ಲಾಡ್‌ ಸ್ಟೋನ್ ಪ್ರಶಸ್ತಿ ಗಳಿಸಿದರು. ಗ್ಲಾಡ್‌ಸ್ಟೋನ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಸ್ಥಳೀಯ ಅಮೆರಿಕನ್. ʻಲಾ ಲಾ ಲ್ಯಾಂಡ್ʼ ಗಾಗಿ 2019 ರಲ್ಲಿ ಪ್ರಶಸ್ತಿ ಪಡೆದ ಬಳಿಕ ಸ್ಟೋನ್ ಇದು ಎರಡನೇ ಅತ್ಯುತ್ತಮ ನಟಿ ಪುರಸ್ಕಾರ. ಕ್ಯಾಥರೀನ್ ಹೆಪ್‌ಬರ್ನ್, ಫ್ರಾನ್ಸಿಸ್ ಮೆಕ್‌ಡೋ ರ್ಮಾಂಡ್, ಇಂಗ್ರಿಡ್ ಬರ್ಗ್‌ಮನ್ ಮತ್ತು ಬೆಟ್ಟೆ ಡೇವಿಸ್ ಸೇರಿದಂತೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರಲ್ಲಿ ಒಬ್ಬರು. ʻಇನ್ಸೆಪ್ಶನ್,ʼ ʻಡನ್ಕಿರ್ಕ್ʼ ಮತ್ತು ʻದಿ ಡಾರ್ಕ್ ನೈಟ್ʼ ಸೇರಿದಂತೆ ಆಸ್ಕರ್‌ ನಲ್ಲಿ ನೋಲನ್(53) ಹಲವು ಬಾರಿ ಪುರಸ್ಕೃತರಾಗಿದ್ದಾರೆ. ಆದರೆ, ಇದು ನಿರ್ಮಾಪಕರಾಗಿ ಮೊದಲ ಅಕಾಡೆಮಿ ಪ್ರಶಸ್ತಿ.

ಸ್ವೀಕಾರ ಭಾಷಣದಲ್ಲಿ, ನೋಲನ್,ʻ ಈ ಅದ್ಭುತ ಪ್ರಯಾಣ ಇಲ್ಲಿಂದ ಎಲ್ಲಿಗೆ ಹೋಗುತ್ತಿದೆ ಎಂದು ನಮಗೆ ತಿಳಿದಿಲ್ಲ. ಆದರೆ, ನಾನು ಅದರ ಅರ್ಥಪೂರ್ಣ ಭಾಗ ಎಂದು ಯೋಚಿಸುವುದು ಸಂತಸಕರ ಅನುಭವʼ ಎಂದರು.

ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನ ಹೊರಗೆ ಗಾಜಾ ದಾಳಿ ವಿರೋಧಿಸಿ ಪ್ರತಿಭಟನೆ ನಡೆದಿದ್ದು, ರಾಜಕೀಯ ಮಧ್ಯಪ್ರವೇಶಿಸಿತು. ʻಓಪನ್‌ಹೈಮರ್,ʼ ʻದಿ ಝೋನ್ ಆಫ್ ಇಂಟರೆಸ್ಟ್ʼ ಮತ್ತು ʻ20 ಡೇಸ್ ಇನ್ ಮಾರಿಯುಪೋಲ್ʼ ಗೆ [ಪುರಸ್ಕಾರ ಸಂದಿತು. ಜಿಮ್ಮಿ ಕಿಮ್ಮೆಲ್ ಕಾರ್ಯಕ್ರಮ ಆಯೋಜನೆ, ರಯಾನ್ ಗೋಸ್ಲಿಂಗ್‌ ಹಾಡು ಮತ್ತು ನೃತ್ಯ ನಿರೂಪಣೆ ಇದ್ದಿತ್ತು.

ಆಸ್ಕರ್ 2024 ವಿಜೇತರ ಸಂಪೂರ್ಣ ಪಟ್ಟಿ:


ಅತ್ಯುತ್ತಮ ಚಿತ್ರ- ಒಪನ್‌ಹೈಮರ್ . ಅತ್ಯುತ್ತಮ ನಿರ್ದೇಶಕ- ಕ್ರಿಸ್ಟೋಫರ್ ನೋಲನ್ ( ಒಪನ್‌ಹೈಮರ್ )‌. ಅತ್ಯುತ್ತಮ ನಟಿ- ಎಮ್ಮಾ ಸ್ಟೋನ್ (ಪೂರ್‌ ಥಿಂಗ್ಸ್).‌ ಅತ್ಯುತ್ತಮ ನಟ-ಸಿಲಿಯನ್ ಮರ್ಫಿ (ಓಪನ್‌ಹೈಮರ್). ಅತ್ಯುತ್ತಮ ಪೋಷಕ ನಟ- ರಾಬರ್ಟ್ ಡೌನಿ ಜೂನಿಯರ್ (ಓಪನ್‌ಹೈಮರ್). ಅತ್ಯುತ್ತಮ ಪೋಷಕ ನಟಿ- ಡೇವಿನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡೋವರ್ಸ್). ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ- ʻದ ಝೋನ್‌ ಆಫ್‌ ಇಂಟೆರೆಸ್ಟ್‌ʼ (ಜೊನಾಥನ್ ಗ್ಲೇಜರ್, ಯುನೈಟೆಡ್ ಕಿಂಗ್‌ಡಮ್). ಅತ್ಯುತ್ತಮ ಛಾಯಾಗ್ರಹಣ- ಹೋಯ್ಟೆ ವ್ಯಾನ್ ಹೊಯ್ಟೆಮಾ (ಒಪನ್‌ಹೈಮರ್). ಅತ್ಯುತ್ತಮ ಅಳವಡಿಸಿದ ಚಿತ್ರಕಥೆ- ಕಾರ್ಡ್ ಜೆಫರ್ಸನ್ (ಅಮೆರಿಕನ್ ಫಿಕ್ಷನ್). ಅತ್ಯುತ್ತಮ ಮೂಲ ಚಿತ್ರಕಥೆ: ಅರ್ಥರ್ ಹರಾರಿ ಮತ್ತು ಜಸ್ಟಿನ್ ಟ್ರೈಟ್ (ಅನಾಟಮಿ ಆಫ್ ಎ ಫಾಲ್). ಅತ್ಯುತ್ತಮ ಅನಿಮೇಟೆಡ್ ಚಿತ್ರ- ದಿ ಬಾಯ್ ಅಂಡ್ ದಿ ಹೆರಾನ್. ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್- ಗಾಡ್ಜಿಲ್ಲಾ ಮೈನಸ್ ಒನ್(ತಕಾಶಿ ಯಮಜಾಕಿ, ಯೋಕೊ ಶಿಬುಯಾ, ಮಸಾಕಿ ತಕಹಶಿ ಮತ್ತು ತತ್ಸುಜಿ ನೊಜಿಮಾ). ಅತ್ಯುತ್ತಮ ಎಡಿಟಿಂಗ್-ಜೆನ್ನಿಫರ್ ಲೇಮ್(ಓಪನ್‌ಹೈಮರ್). ಅತ್ಯುತ್ತಮ ನಿರ್ಮಾಣ ವಿನ್ಯಾಸ- ಶೋನಾ ಹೀತ್, ಸ್ಜುಸ್ಜಾ ಮಿಹಾಲೆಕ್ ಮತ್ತು ಜೇಮ್ಸ್ ಪ್ರೈಸ್ (ಪೂರ್‌ ಥಿಂಗ್ಸ್).‌ ಮೇಕಪ್ ಮತ್ತು ಕೇಶವಿನ್ಯಾಸ- ಮಾರ್ಕ್ ಕೌಲಿಯರ್, ನಾಡಿಯಾ ಸ್ಟೇಸಿ ಮತ್ತು ಜೋಶ್ ವೆಸ್ಟನ್ (ಪೂರ್‌ ಥಿಂಗ್ಸ್).‌ ಅತ್ಯುತ್ತಮ ವಸ್ತ್ರ ವಿನ್ಯಾಸ- ಹಾಲಿ ವಾಡಿಂಗ್ಟನ್ (ಪೂರ್‌ ಥಿಂಗ್ಸ್‌ ). ಅತ್ಯುತ್ತಮ ಧ್ವನಿ- ʻದ ಝೋನ್‌ ಆಫ್‌ ಇಂಟೆರೆಸ್ಟ್‌ʼ ; ಜಾನಿ ಬರ್ನ್ ಮತ್ತು ಟಾರ್ನ್ ವಿಲ್ಲರ್ಸ್. ಅತ್ಯುತ್ತಮ ಸಾಕ್ಷ್ಯಚಿತ್ರ ವೈಶಿಷ್ಟ್ಯ- 20 ಡೇಸ್ ಇನ್ ಮಾರಿಯುಪೋಲ್. ಅತ್ಯುತ್ತಮ ಸಾಕ್ಷ್ಯಚಿತ್ರ ಕಿರು ವಿಷಯ- "ದ ಲಾಸ್ಟ್‌ ರಿಪೇರ್‌ ಶಾಪ್‌ʼ. ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ- ʻದ ವಂಡರ್‌ ಫುಲ್‌ ಸ್ಟೋರಿ ಆಫ್‌ ಹೆನ್ರಿ ಶುಗರ್‌ʼ. ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ- ʻವಾರ್‌ ಈಸ್‌ ಓವರ್.‌ ಜಾನ್ ಮತ್ತು ಯೊಕೊ ಅವರ ಸಂಗೀತ. ಅತ್ಯುತ್ತಮ ಹಾಡು- ವಾಟ್‌ ವಾಸ್‌ ಐ ಮೇಡ್‌ ಫಾರ್‌ - ಬಿಲ್ಲಿ ಎಲಿಶ್ ಮತ್ತು ಫಿನ್ನಿಯಾಸ್ (ಬಾರ್ಬಿ). ಅತ್ಯುತ್ತಮ ಸಂಗೀತ -ಲುಡ್ವಿಗ್ ರಾನ್ಸನ್ (ಓಪನ್‌ಹೈಮರ್).

Read More
Next Story