ಸಲಿಂಗ ವಿವಾಹ: ಅಧಿಕೃತವಾಗಿ ನೋಂದಾಯಿಸಿದ ನೇಪಾಳ
x

ಸಲಿಂಗ ವಿವಾಹ: ಅಧಿಕೃತವಾಗಿ ನೋಂದಾಯಿಸಿದ ನೇಪಾಳ

ನೇಪಾಳ ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ಮೊದಲ ದಕ್ಷಿಣ ಏಷ್ಯಾದ ದೇಶವಾಗಿದೆ.


ಸಲಿಂಗ ವಿವಾಹವನ್ನು ನೇಪಾಳದ ಸುಪ್ರೀಂ ಕೋರ್ಟ್‌ ಕಾನೂನುಬದ್ಧಗೊಳಿಸಿದ 5 ತಿಂಗಳ ನಂತರ ಮೊದಲ ಸಲಿಂಗ ವಿವಾಹ ನೋಂದಣಿಯಾಗಿದೆ. ಆ ಮೂಲಕ ನೇಪಾಳ ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ಮೊದಲ ದಕ್ಷಿಣ ಏಷ್ಯಾದ ದೇಶವಾಗಿದೆ.

ʼʼ35 ವರ್ಷದ ಲಿಂಗ ಪರಿವರ್ತಿತ ಮಹಿಳೆ ಮಾಯಾ ಗುರುಂಗ್ ಹಾಗೂ 27 ವರ್ಷದ ಸುರೇಂದ್ರ ಪಾಂಡೆ (27) ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಅವರ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ' ಎಂದು ಬ್ಲೂ ಡೈಮಂಡ್ ಸೊಸೈಟಿಯ ಅಧ್ಯಕ್ಷ ಸಂಜಿಬ್ ಗುರುಂಗ್ (ಪಿಂಕಿ) ತಿಳಿಸಿದ್ದಾರೆ. 'ಬ್ಲೂ ಡೈಮಂಡ್ ಸೊಸೈಟಿ ಎನ್ನುವುದು ನೇಪಾಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾಗಿದೆ.

ಈ ಮೂಲಕ ನೇಪಾಳದ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ನೇಪಾಳ ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ಮೊದಲ ದಕ್ಷಿಣ ಏಷ್ಯಾದ ದೇಶವಾಗಿದೆ.

2007 ರಲ್ಲಿ, ನೇಪಾಳದ ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ಸಲಿಂಗ ವಿವಾಹಕ್ಕೆ ಅನುಮತಿಯನ್ನು ನೀಡಿತ್ತು, 2015ರಲ್ಲಿ ಅಂಗೀಕರಿಸಲ್ಪಟ್ಟ ಕಾಯಿದೆ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತದೆ.

2023ರ ಜೂನ್ 27ರಂದು ಗುರುಂಗ್ ಸೇರಿದಂತೆ ಅನೇಕರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ ನೇಪಾಳದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತು. ಆದರೆ ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಾಯಿಸುವ ಐತಿಹಾಸಿಕ ಆದೇಶದ ಹೊರತಾಗಿಯೂ, 4 ತಿಂಗಳ ಹಿಂದೆ ಕಲ್ಮಂಡು ಜಿಲ್ಲಾ ನ್ಯಾಯಾಲಯ ಅಗತ್ಯ ಕಾನೂನುಗಳ ಕೊರತೆಯನ್ನು ಉಲ್ಲೇಖಿಸಿ ಈ ಕ್ರಮವನ್ನು ತಿರಸ್ಕರಿಸಿತು.

ಆ ವೇಳೆ ಸುರೇಂದ್ರ ಪಾಂಡೆ ಮತ್ತು ಮಾಯಾ ಅವರ ವಿವಾಹ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಬಳಿಕ ಬುಧವಾರ (ಡಿ.29) ಔಪಚಾರಿಕವಾಗಿ ವಿವಾಹವನ್ನು ಇದೇ ಮೊದಲ ಬಾರಿಗೆ ನೋಂದಾಯಿಸಲಾಗಿದೆ.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ಬ್ಲೂ ಡೈಮಂಡ್ ಸೊಸೈಟಿಯ ಅಧ್ಯಕ್ಷ ಸಂಜಿಬ್ ಗುರುಂಗ್ (ಪಿಂಕಿ) ಅವರು, ʼʼಸಲಿಂಗ ವಿವಾಹದ ನೋಂದಣಿ ಮಾಡಿಸಿಕೊಂಡಿರುವ ವಿಷಯವನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಇದು ನೇಪಾಳದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ದೊಡ್ಡ ಸಾಧನೆ. ನೇಪಾಳ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಪ್ರಕರಣವಾಗಿದ್ದು, ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆʼʼ ಎಂದು ಅವರು ಹೇಳಿದ್ದಾರೆ.

ನವಲಪರಸಿ ಜಿಲ್ಲೆಯವರಾದ ಸುರೇಂದ್ರ ಮತ್ತು ಮೂಲತಃ ಲಾಮ್‌ಜಂಗ್ ಜಿಲ್ಲೆಯವರಾದ ಮಾಯಾ ಅವರ ಕುಟುಂಬಗಳ ಒಪ್ಪಿಗೆಯೊಂದಿಗೆ ಸಾಂಪ್ರದಾಯಿಕ ವಿವಾಹವನ್ನು ಮಾಡಿಕೊಂಡಿದ್ದು, ಕಳೆದ ಆರು ವರ್ಷಗಳಿಂದ ಅವರು ವಿವಾಹಿತ ದಂಪತಿಗಳಾಗಿ ಸಹಜೀವನ ನಡೆಸುತ್ತಿದ್ದಾರೆ.

Read More
Next Story