
ಬಿಡೆನ್ ಬದಲು ಮಿಶೆಲ್ ಒಬಾಮಾ ಸೂಕ್ತ ಆಯ್ಕೆ: ಜನಾಭಿಪ್ರಾಯ ಸಮೀಕ್ಷೆ
ಜೋ ಬಿಡೆನ್ ಬದಲು ಮಿಶೆಲ್ ಒಬಾಮಾ ಅಧ್ಯಕ್ಷೀಯ ಚುನಾವಣೆಗೆ ಡೆಮೋಕ್ರಾಟ್ ಗಳ ಪ್ರಥಮ ಆಯ್ಕೆಯಾಗಿ ಹೊಮ್ಮಿದ್ದಾರೆ ಎಂದು ರಾಸ್ಮುಸೆನ್ ರಿಪೋರ್ಟ್ಸ್ ಸಮೀಕ್ಷೆ ಬಹಿರಂಗಪಡಿಸಿದೆ.
ಮಿಶೆಲ್ ಶೇ. 20 ರಷ್ಟು ಮತ ಪಡೆದಿದ್ದು, ಇದು ಕಣದಲ್ಲಿರುವ ಸ್ಪರ್ಧಿಗಳ ಪೈಕಿ ಅತ್ಯಧಿಕ. ಬಿಡೆನ್(81) ಬದಲಿಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಶೇ.15 ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಶೇ. 12ರಷ್ಟು ಮತ ಗಳಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಶೇ.48 ರಷ್ಟು ಡೆಮೋಕ್ರಾಟ್‌ಗಳು ʻಜೋ ಬಿಡೆನ್ ಬದಲಿಗೆ ಇನ್ನೊಬ್ಬ ಅಭ್ಯರ್ಥಿಯನ್ನು ಹುಡುಕಬೇಕುʼ ಎಂಬ ಆಶಯ ವ್ಯಕ್ತಪಡಿಸಿದ್ದಾರೆ, ಶೇ.33 ರಷ್ಟು ಜನರು ಬದಲಾವಣೆ ಆಗಲಿದೆ ಎಂದುಕೊಂಡಿದ್ದಾರೆ. ಜೋ ಬಿಡೆನ್ ವಿರುದ್ಧ ಡೊನಾಲ್ಡ್ ಟ್ರಂಪ್ ಸ್ಪರ್ಧೆ ನಡೆಯಲಿದೆ ಎಂದು ಹೆಚ್ಚಿನವರು ಅಂದುಕೊಂಡಿದ್ದಾರೆ. ಬಿಡೆನ್ ಅವರು ಅರ್ಹ ಅಭ್ಯರ್ಥಿಯಾಗಿದ್ದರೂ, ಅವರ ವಯಸ್ಸು ಮತದಾರರನ್ನು ಚಿಂತೆಗೀಡುಮಾಡಿದೆ ಎಂದು ಸಮೀಕ್ಷೆ ಸೂಚಿಸುತ್ತದೆ.
ಟ್ರಂಪ್ ಅಚಲ:
ಡೊನಾಲ್ಡ್ ಟ್ರಂಪ್ ಅವರು ತಪ್ಪಿತಸ್ಥರೆಂದು ಸಾಬೀತಾಗಿ ಹಲವಾರು ವರ್ಷ ಕಾಲ ಜೈಲಿಗೆ ಹೋಗುವ ಸಾಧ್ಯತೆಯಿದ್ದರೂ, ತಾವು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹಠ ಹಿಡಿದಿದ್ದಾರೆ. ಮಿಶೆಲ್ ಒಬಾಮಾ ಅವರು ಪ್ರಥಮ ಮಹಿಳೆಯಾಗಿದ್ದಾಗ ಅಸಂಖ್ಯಾತ ಅನುಯಾಯಿಗಳನ್ನು ಹೊಂದಿದ್ದರು ಮತ್ತು ಒಬಾಮಾ ಅಧ್ಯಕ್ಷ ಅವಧಿ ಮುಗಿದ ಬಳಕವೂ ಅವರ ಜನಪ್ರಿಯತೆ ಕುಸಿದಿರಲಿಲ್ಲ.
ಮಿಶೆಲ್ ಕಳೆದ ತಿಂಗಳು ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಆತಂಕ ಮೂಡಿಸುತ್ತಿದೆ ಎಂದು ಹೇಳಿದ್ದರು. ತಮ್ಮನ್ನು ಕಾಡುತ್ತಿದೆ. ಅಮೆರಿಕದ ಜನ ಪ್ರಜಾಪ್ರಭುತ್ವವನ್ನು ಲಘುವಾಗಿ ತೆಗೆದುಕೊಂಡಿದ್ದಾರೆ ಮತ್ತು ಹಾಗೆ ಮಾಡಬಾರದು ಎಂದು ಹೇಳಿದ್ದರು.
ಮಿಶೆಲ್ ಈಗ ಮೆಲಿಂಡಾ ಫ್ರೆಂಚ್ ಗೇಟ್ಸ್ ಮತ್ತು ಅಮಲ್ ಕ್ಲೂನಿ ಅವರೊಟ್ಟಿಗೆ ಬಾಲ್ಯವಿವಾಹಗಳನ್ನು ಕೊನೆಗೊಳಿಸುವ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.