ಅಮೆರಿಕಾದ ಸಾವಿರ ಸಾಮಾಜಿಕ ಮಾಧ್ಯಮ ಖಾತೆ ನಿಷೇಧ
x

ಅಮೆರಿಕಾದ ಸಾವಿರ ಸಾಮಾಜಿಕ ಮಾಧ್ಯಮ ಖಾತೆ ನಿಷೇಧ

ಭಿನ್ನಾಭಿಪ್ರಾಯ ಮತ್ತು ಅಪನಂಬಿಕೆಯನ್ನು ಸೃಷ್ಟಿಸಲು ಇತರ ದೇಶಗಳು ಅಮೆರಿಕನ್ ತಂತ್ರಜ್ಞಾನ ವೇದಿಕೆಗಳನ್ನು ಹೇಗೆ ಬಳಸುತ್ತವೆ ಎಂಬುದನ್ನು ಹೊಸ ನೆಟ್‌ವರ್ಕ್ ಬಹಿರಂಗಪಡಿಸುತ್ತದೆ. ಇದು ಆನ್‌ಲೈನ್‌ನಲ್ಲಿ ಸುಳ್ಳು ಮಾಹಿತಿಯ ಗಮನಾರ್ಹ ಅಪಾಯಗಳನ್ನು ತೋರಿಸುತ್ತದೆ,


ವಾಷಿಂಗ್ಟನ್, ನವೆಂಬರ್ 30 (ಎಪಿ): ಮತದಾರರನ್ನು ರಾಜಕೀಯವಾಗಿ ಧ್ರುವೀಕರಿಸುವ ಉದ್ದೇಶವನ್ನಿಟ್ಟುಕೊಂಡು ರಚಿಸಿದ್ದ ಅಮೆರಿಕದ ಸಾವಿರಾರು ನಕಲಿ ಖಾತೆಗಳನ್ನು ರದ್ದುಪಡಿಸಿರುವುದಾಗಿ ಸಾಮಾಜಿಕ ಜಾಲತಾಣ ಸಂಸ್ಥೆ ಮೆಟಾ ಹೇಳಿದೆ.


ಚೀನಾದಲ್ಲಿ ಈ ಸಾವಿರಾರು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸಲಾಗಿದೆ. ಆದರೆ ಆ ಖಾತೆಗಳನ್ನು ಅಮೆರಿಕನ್ನರದ್ದು ಎಂದು ತೋರುವಂತೆ ವಿನ್ಯಾಸಗೊಳಿಸಲಾಗಿದೆ. ಮುಂದಿನ ಅಮೆರಿಕ ಅಧ್ಯಕ್ಷರ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಧ್ರುವೀಕರಣದ ಉದ್ದೇಶದಿಂದ ಈ ನಕಲಿ ಖಾತೆಗಳನ್ನು ರಚಿಸಲಾಗಿದೆ ಎಂದು ಮೆಟಾ ತಿಳಿಸಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಹೊಂದಿರುವ ಟೆಕ್ ಕಂಪನಿಯು ಫಾಲೋವರ್ಸ್‌ ಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಸುಮಾರು 4,800 ನಕಲಿ ಖಾತೆಗಳ ನೆಟ್‌ವರ್ಕ್ ಅನ್ನು ಪತ್ತೆಹಚ್ಚಿ ತೆಗೆದುಹಾಕಲಾಯಿತು.

ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಮಾನ್ಯ ಅಮೇರಿಕನ್ ಫೇಸ್‌ಬುಕ್ ಬಳಕೆದಾರರಂತೆ ನಟಿಸಲು ಖಾತೆಗಳಲ್ಲಿ ಸುಳ್ಳು ಚಿತ್ರಗಳು, ಗುರುತುಗಳು ಮತ್ತು ಸ್ಥಳಗಳನ್ನು ಬಳಸಿವೆ. ಇತರ ನೆಟ್‌ವರ್ಕ್‌ಗಳಂತೆ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳುವ ಬದಲು, ಈ ಖಾತೆಗಳನ್ನು X ನಿಂದ ವಿಷಯವನ್ನು ಮರುಪೋಸ್ಟ್ ಮಾಡಲು ಬಳಸಲಾಗುತ್ತಿತ್ತು, (X ಅನ್ನು ಈ ಹಿಂದೆ Twitter ಎಂದು ಕರೆಯಲಾಗುತ್ತಿತ್ತು).


ಈ ನಕಲಿ ಖಾತೆಗಳು ಉದಾರವಾದಿ ಮತ್ತು ಸಂಪ್ರದಾಯವಾದಿ ಮೂಲಗಳೆರಡರಿಂದಲೂ ವಿಷಯವನ್ನು ಬಳಸಿಕೊಂಡು ಪೋಸ್ಟ್‌ ಮಾಡುತ್ತಿದ್ದವು. ಹಾಗೆಂದ ಮಾತ್ರಕ್ಕೆ ಅವರ ಉದ್ದೇಶವು ಎರಡೂ ಪಕ್ಷಗಳನ್ನು ಬೆಂಬಲಿಸುವುದು ಅಲ್ಲ. ರಾಜಕೀಯ ಗುಂಪುಗಳ ನಡುವೆ ವಿಭಜನೆ ಮತ್ತು ಧ್ರುವೀಕರಣವನ್ನು ಹೆಚ್ಚಿಸುವ ಉದ್ದೇಶವಾಗಿದೆ ಎನ್ನುವುದನ್ನು ತೋರಿಸುತ್ತದೆ.


ಭಿನ್ನಾಭಿಪ್ರಾಯ ಮತ್ತು ಅಪನಂಬಿಕೆಯನ್ನು ಸೃಷ್ಟಿಸಲು ಇತರ ದೇಶಗಳು ಅಮೆರಿಕನ್ ತಂತ್ರಜ್ಞಾನ ವೇದಿಕೆಗಳನ್ನು ಹೇಗೆ ಬಳಸುತ್ತವೆ ಎಂಬುದನ್ನು ಹೊಸ ನೆಟ್‌ವರ್ಕ್ ಬಹಿರಂಗಪಡಿಸುತ್ತದೆ. ಇದು ಆನ್‌ಲೈನ್‌ನಲ್ಲಿ ಸುಳ್ಳು ಮಾಹಿತಿಯ ಗಮನಾರ್ಹ ಅಪಾಯಗಳನ್ನು ತೋರಿಸುತ್ತದೆ, ವಿಶೇಷವಾಗಿ ಯುಎಸ್, ಭಾರತ, ಮೆಕ್ಸಿಕೊ, ಉಕ್ರೇನ್, ಪಾಕಿಸ್ತಾನ, ತೈವಾನ್ ಮತ್ತು ಇತರವುಗಳನ್ನು ಒಳಗೊಂಡಂತೆ ಮುಂದಿನ ವರ್ಷ ಅನೇಕ ದೇಶಗಳು ಚುನಾವಣೆಗಳನ್ನು ಎದುರಿಸುತ್ತವೆ. ಹಾಗಾಗಿ ಇದು ಎಚ್ಚರಿಕೆಯ ಗಂಟೆಯಾಗಿದೆ.

“ಈ ನೆಟ್‌ವರ್ಕ್‌ಗಳು ಇನ್ನೂ ಪ್ರೇಕ್ಷಕರನ್ನು ಸೆಳೆಯಲು ಹೆಣಗಾಡುತ್ತಿವೆ, ಆದರೆ ಅವುಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕುʼʼ ಎಂದು ಮೆಟಾದ ಪ್ಲಾಟ್‌ಫಾರ್ಮ್‌ಗಳಲ್ಲಿ ಅನಧಿಕೃತ ನಡವಳಿಕೆಯ ತನಿಖೆಯನ್ನು ಮುನ್ನಡೆಸುವ ಬೆನ್ ನಿಮ್ಮೊ ಹೇಳಿದರು.

ಈ ನಕಲಿ ಖಾತೆಗಳು ಚೀನೀ ಸರ್ಕಾರದ ಪ್ರಚಾರ ಮತ್ತು ತಪ್ಪು ಮಾಹಿತಿ ಹರಡುತ್ತಿವೆ. ಜೊತೆಗೆ ಅಮೆರಿಕದಲ್ಲಿ ಪಕ್ಷಪಾತ ಮತ್ತು ಸೈದ್ಧಾಂತಿಕ ವಿಭಜನೆಯನ್ನು ಹೆಚ್ಚಿಸಲು ಪ್ರಯತ್ನಿಸಿದೆ. ಈ ನಕಲಿ ಖಾತೆಗಳಲ್ಲಿ, ಸಾಮಾನ್ಯ ಫೇಸ್‌ಬುಕ್ ಖಾತೆಗಳಂತೆ ಕಾಣಿಸಿಕೊಳ್ಳಲು ಕೆಲವೊಮ್ಮೆ ಫ್ಯಾಷನ್ ಅಥವಾ ಸಾಕುಪ್ರಾಣಿಗಳ ಕುರಿತು ಪೋಸ್ಟ್ ಮಾಡುತ್ತವೆ.‌ ಈ ವರ್ಷದ ಆರಂಭದಲ್ಲಿ, ಖಾತೆಗಳು ತಮ್ಮ ಅಮೇರಿಕನ್ ಹೆಸರುಗಳು ಮತ್ತು ಪ್ರೊಫೈಲ್ ಚಿತ್ರಗಳನ್ನು ಇದ್ದಕ್ಕಿದ್ದಂತೆ ಬದಲಾಯಿಸಿದ್ದು, ಈಗ ಅವರು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಸೂಚಿಸಲಾಗಿದೆ.

ನಕಲಿ ಖಾತೆಗಳು ಆನಂತರ ಟಿಬೆಟ್ ಮತ್ತು ಭಾರತದ ವಿಚಾರದಲ್ಲಿ ಚೀನಾಪರವಾದ ವಿಷಯವನ್ನು ಪ್ರಸಾರ ಮಾಡಲು ಪ್ರಾರಂಭಿಸಿದವು. ಚುನಾವಣಾ ಸಮಗ್ರತೆ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವ ಊದ್ದೇಶದಿಂದ ಮೆಟಾ ಆಗಾಗ ಇಂತಹ ನಕಲಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳನ್ನು ನಿಷೇಧಿಸುತ್ತದೆ

Read More
Next Story