ಪ್ರಜ್ವಲ್‌ ರೇವಣ್ಣ ಸೋಲು | ಹೊಳೆನರಸೀಪುರದಲ್ಲಿ ಪಟಾಕಿ ಹಚ್ಚಿ ಸಂಭ್ರಮಾಚರಣೆ
x
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ಗೆ ಹೀನಾಯ ಸೋಲಾಗಿದೆ.

ಪ್ರಜ್ವಲ್‌ ರೇವಣ್ಣ ಸೋಲು | ಹೊಳೆನರಸೀಪುರದಲ್ಲಿ ಪಟಾಕಿ ಹಚ್ಚಿ ಸಂಭ್ರಮಾಚರಣೆ

ಪ್ರಜ್ವಲ್‌ ರೇವಣ್ಣ ಸೋಲು ಕಂಡ ಬೆನ್ನಲ್ಲೇ ಹೊಳೆನರಸೀಪುರದಲ್ಲಿ ಸಾರ್ವಜನಿಕರು ಸಂಭ್ರಮಚಾರಣೆಯಲ್ಲಿ ತೊಡಗಿದ್ದರು.


Click the Play button to hear this message in audio format

ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಹಾಗೂ ದೇಶದಾದ್ಯಂತ ಸುದ್ದಿಯಾಗಿರುವ ಪೆನ್‌ಡ್ರೈವ್‌ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್‌ ರೇವಣ್ಣ ಸೋಲು ಕಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಜ್ವಲ್‌ ರೇವಣ್ಣ ಕುಟುಂಬದ ಮೂಲ ನೆಲೆಯಾಗಿರುವ ಹೊಳೆನರಸೀಪುರದಲ್ಲಿ ಜನಸಾಮಾನ್ಯರೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಭಾರೀ ಗಮನ ಸೆಳೆದದ್ದು ಹಾಸನ ಲೋಕಸಭಾ ಕ್ಷೇತ್ರ. ಅಲ್ಲಿನ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ಅವರದ್ದು ಎನ್ನಲಾಗಿದ್ದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್‌ ಪ್ರಕರಣ ದೇಶದಾದ್ಯಂತ ಸದ್ದು ಮಾಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸತತ ಒಂದು ತಿಂಗಳು ವಿಚಾರಣೆ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ಬಂಧನ, ಪ್ರತಿಭಟನೆ, ರಾಜಕೀಯ ಜಟಾಪಟಿಗೆ ಹಾಸನ ವೇದಿಕೆಯಾಗಿತ್ತು. ಈ ಕಾರಣದಿಂದಲೇ ಇಲ್ಲಿನ ಫಲಿತಾಂಶ ಇಡೀ ದೇಶದ ಮೇಲೆ ಗಮನ ನೆಟ್ಟಿತ್ತು. ಇದೀಗ ಹಾಸನ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ ಸೋಲು ಅನುಭವಿಸಿದ್ದಾರೆ. ಎರಡು ದಶಕಗಳ ಬಳಿಕ ಕಾಂಗ್ರೆಸ್ ಹಾಸನದಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಅವರು ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಿದ್ದಾರೆ. 2004 ರಲ್ಲಿ ಪುಟ್ಟಸ್ವಾಮಿ ಗೌಡರನ್ನು ದೇವೇಗೌಡರು ಸೋಲಿಸಿದ್ದರು. ಇದೀಗ ಅವರ ಮೊಮ್ಮಗ ಶ್ರೇಯಸ್‌, ದೇವೇಗೌಡರ ಮೊಮ್ಮಗನಿಗೆ ಸೋಲು ಉಣಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ಹೀನಾಯ ಸೋಲು ಕಂಡ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಕುಟುಂಬದ ನೆಲೆಯಾದ ಹೊಳೆನರಸೀಪುರದಲ್ಲಿ ಭಾರೀ ಸಂಭ್ರಮಾಚರಣೆ ನಡೆದಿದೆ. ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಹಂಚಿಕೆ ಸಂಬಂಧಿಸಿದಂತೆ ಎಸ್‌ಐಟಿ ಬಂಧನಕ್ಕೊಳಗಾಗಿದ್ದ ನವೀನ್ ಗೌಡ ಹಾಗೂ ಚೇತನ್‌ ಕೂಡ ಸಂಭ್ರಮಚಾರಣೆಯಲ್ಲಿ ತೊಡಗಿಕೊಂಡಿದ್ದಾರೆ. ಪಟಾಕಿ ಹೊಡೆದು ಪ್ರಜ್ವಲ್‌ ಸೋಲನ್ನು ಸಂಭ್ರಮಿಸುತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ​ ಅಶ್ಲೀಲ ವಿಡಿಯೋ ಪೆನ್​ಡ್ರೈವ್​ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಗೌಡ ಹಾಗೂ ಚೇತನ್​ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಹೊರಬಂದಿದ್ದರು.

Read More
Next Story