ಭಾರತೀಯ ರಾಯಭಾರಿ ಗುರಿ: ಖಲಿಸ್ತಾನಿಗಳ ಬೆದರಿಕೆ
x

ಭಾರತೀಯ ರಾಯಭಾರಿ ಗುರಿ: ಖಲಿಸ್ತಾನಿಗಳ ಬೆದರಿಕೆ


ಭಾರತದ ರಾಯಭಾರಿಯನ್ನು ಗುರಿ ಮಾಡುವುದಾಗಿ ಪ್ರತ್ಯೇಕತಾವಾದಿ ಸಿಖ್ಸ್ ಫಾರ್ ಜಸ್ಟೀಸ್(ಎಸ್‌ಎಫ್‌ಐ) ಬೆದರಿಕೆ ಹಾಕಿದೆ.

ಎಸ್‌ಎಫ್‌ಜೆ ನಾಯಕ ಗುರುಪತ್‌ವಂತ್ ಪನ್ನುನ್ ಅವರ ಬೆದರಿಕೆಯನ್ನು ಕೆನಡಾದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಭದ್ರತೆ ಬಗ್ಗೆ ನನಗೆ ಭರವಸೆ ನೀಡಿದ್ದಾರೆ ಎಂದು ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಹೇಳಿದರು.

ಕಳೆದ ವರ್ಷ ಖಲಿಸ್ತಾನಿ ಹರ್ದೀಪ್ ಸಿಂಗ್ ನಿಜ್ಜಾರ್ ಅವರು ಸರ್ರೆಯಲ್ಲಿ ಕೊಲೆಯಾದ ನಂತರ ಕೆನಡಾಕ್ಕೆ ಅವರ ಮೊದಲ ಭೇಟಿ ಇದಾಗಿದೆ.

ವರ್ಮಾ ಕಾರ್ಯಕ್ರಮ: ವರ್ಮಾ ಅವರು ರಾಜಧಾನಿ ವಿಕ್ಟೋರಿಯಾ, ವ್ಯಾಂಕೋವರ್ ಮತ್ತು ಸರ್ರೆಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಸರ್ರೆಯ ಮೇಯರ್ ಬ್ರೆಂಡಾ ಲಾಕ್ ಮತ್ತು ಸರ್ರೆ ವ್ಯವಹಾರ ಮಂಡಳಿಯನ್ನು ಭೇಟಿಯಾಗಲಿದ್ದಾರೆ. ಮಾರ್ಚ್ 1 ರಂದು ವರ್ಮಾ ಅವರನ್ನು ಎಸ್‌ಎಫ್‌ಜೆ ಎದುರಿಸಲಿದೆ ಎಂದು ಪನ್ನುನ್ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ʼನಿಜ್ಜರ್ ಹತ್ಯೆಗೆ ಭಾರತ ಕಾರಣ. ಖಲಿಸ್ತಾನ್ ಪರ ಸಿಖ್ಖರು ಸರ್ರೆಯಲ್ಲಿ ನೇರವಾಗಿ ಪ್ರಶ್ನೆ ಮಾಡಲು ಅವಕಾಶ ಹೊಂದಿರುತ್ತಾರೆ. ಅಂದು ಸರ್ರೆಯಲ್ಲಿ ಪ್ರತಿಭಟನೆಯನ್ನೂ ಆಯೋಜಿಸಲಾಗುತ್ತಿದೆʼ ಎಂದು ಹೇಳಿದೆ.

ಖಲಿಸ್ತಾನಿ ಪನ್ನುನ್: ಭಾರತದಲ್ಲಿ ಎಸ್‌ಎಫ್‌ಜೆ ಕಾನೂನುಬಾಹಿರ. ಅದು ತನ್ನ ವಿಷ ತುಂಬಿಸುವ ಪ್ರವೃತ್ತಿಯನ್ನು ಮುಂದುವರಿಸಿದರೆ, ಕೆನಡಾ-ಭಾರತದ ದ್ವಿಪಕ್ಷೀಯ ಸಂಬಂಧಗಳು ಹಳಿ ಹತ್ತುತ್ತವೆ ಎಂದು ವರ್ಮಾ ಹೇಳಿದರು. ʻಅವರು (ಪನ್ನುನ್) ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ವಲ್ಪ ಸಮಯದಿಂದ ಇದನ್ನೆಲ್ಲ ಮಾಡುತ್ತಿದ್ದಾರೆʼ ಎಂದಿದ್ದಾರೆ. ಎಸ್‌ಎಫ್‌ ಜೆಯ ಪ್ರಮುಖ ವ್ಯಕ್ತಿ ನಿಜ್ಜರ್‌ ಅವರನ್ನು ವಿಕ್ಟೋರಿಯನ್ ಪ್ರಾಂತ್ಯದಲ್ಲಿ ಕಳೆದ ಜೂನ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.

ದ್ವಿಪಕ್ಷೀಯ ಸಂಬಂಧಗಳಿಗೆ ಧಕ್ಕೆ: ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಭಾರತೀಯ ಏಜೆಂಟರು ಮತ್ತು ಹತ್ಯೆ ನಡುವೆ ಸಂಭವನೀಯ ಸಂಪರ್ಕವನ್ನು ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತು. ಅಂದಿನಿಂದ, ವರ್ಮಾ ಸೇರಿದಂತೆ ಕೆನಡಾದಲ್ಲಿರುವ ಭಾರತದ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ಎಸ್‌ಎಫ್‌ಜೆ ಪೋಸ್ಟರ್ ಅಭಿಯಾನ ನಡೆಸುತ್ತಿದೆ.

Read More
Next Story