ದೆಹಲಿ ಜಲ ಮಂಡಳಿ ಪ್ರಕರಣ: ಇಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು
x

ದೆಹಲಿ ಜಲ ಮಂಡಳಿ ಪ್ರಕರಣ: ಇಡಿ ವಿಚಾರಣೆಗೆ ಕೇಜ್ರಿವಾಲ್‌ ಗೈರು


ದೆಹಲಿ ಜಲ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಮುಖ್ಯಮಂತ್ರಿ ಕೇಜ್ರಿವಾಲ್‌ ಗೈರು ಹಾಜರಾಗಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಎರಡು ಪ್ರಕರಣಗಳಲ್ಲಿ ಕೇಜ್ರಿವಾಲ್‌ ಕಳೆದ ವಾರ ಜಾಮೀನು ಪಡೆದಿದ್ದರು. ಆಮ್ ಆದ್ಮಿ ಪಕ್ಷ (ಎಎಪಿ) ಸಮನ್ಸ್ ಅನ್ನು ʻಕಾನೂನುಬಾಹಿರʼ ಎಂದಿದ್ದು, ಬಿಜೆಪಿ ಸರ್ಕಾರವು ಕೇಜ್ರಿವಾಲ್ ಅವರನ್ನು ಗುರಿಯಾಗಿಸಲು ಇಡಿಯನ್ನು ಬಳಸುತ್ತಿದೆ ಎಂದು ಆರೋಪಿಸಿದೆ.

ಅಬಕಾರಿ ನೀತಿ ಪ್ರಕರಣ: ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಇದುವರೆಗೆ ಎಂಟು ಸಮನ್ಸ್‌ಗಳಿಗೂ ವಿಚಾರಣೆಗೆ ಹಾಜರಾಗಿಲ್ಲ. ಒಂಬತ್ತನೇ ನೋಟಿಸ್ ನೀಡಿದ್ದು, ಮಾರ್ಚ್ 21 ರಂದು ಇಡಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಿದೆ. ಸಮನ್ಸ್‌ಗಳನ್ನು ತಪ್ಪಿಸಿದ್ದಕ್ಕೆ ಕೇಜ್ರಿವಾಲ್ ವಿರುದ್ಧ ಇಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ದೆಹಲಿಯ ರೂಸ್ ಅವೆನ್ಯೂ ಕೋರ್ಟ್, ಕೇಜ್ರಿವಾಲ್‌ ಅವರಿಗೆ ಎರಡು ಪ್ರಕರಣಗಳಲ್ಲಿ 15,000 ರೂ. ಜಾಮೀನು ಬಾಂಡ್ ಮತ್ತು 1 ಲಕ್ಷ ರೂ. ಶೂರಿಟಿ ಮೇಲೆ ಕಳೆದ ಶನಿವಾರ ಜಾಮೀನು ಮಂಜೂರು ಮಾಡಿದೆ.

Read More
Next Story