ಬಾಳೆ ನಾರಿನ ಉತ್ಪನ್ನ: ಎಂಟೆಕ್‌ ಪದವೀಧರೆಯ ಸಾಧನೆಗೆ ಪ್ರಧಾನಿ ಮೆಚ್ಚುಗೆ
x

ಬಾಳೆ ನಾರಿನ ಉತ್ಪನ್ನ: ಎಂಟೆಕ್‌ ಪದವೀಧರೆಯ ಸಾಧನೆಗೆ ಪ್ರಧಾನಿ ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ ನ ಭಾನುವಾರದ ಸಂಚಿಕೆಯಲ್ಲಿ, ರೈತ ಮಹಿಳೆಯ ಈ ಸಾಹಸ ಹಲವು ಜನರಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.


ಬೆಂಗಳೂರು(ಪಿಟಿಐ): ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಎಂಟೆಕ್ ಪದವೀಧರೆಯೊಬ್ಬರು ತಮ್ಮ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನಿಂದ ಪ್ರೇರಿತರಾಗಿ ಬಾಳೆ ಕಾಂಡದಿಂದ ಉತ್ಪನ್ನಗಳನ್ನು ತಯಾರಿಸುವ ಉದ್ಯಮವನ್ನು ಪ್ರಾರಂಭಿಸಿ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಒಳಗಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ ನ ಭಾನುವಾರದ ಸಂಚಿಕೆಯಲ್ಲಿ, ರೈತ ಮಹಿಳೆಯ ಈ ಸಾಹಸ ಹಲವು ಜನರಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿಯವರ ಹಿಂದಿನ ರೇಡಿಯೋ ಕಾರ್ಯಕ್ರಮದ ಸಂಚಿಕೆಯಿಂದ ಪ್ರೇರಿತರಾದ ಚಾಮರಾಜನಗರದ ವರ್ಷಾ ಅವರು ಬಾಳೆ ಗಿಡದಿಂದ ಗೊಬ್ಬರ ಉತ್ಪಾದಿಸುವ ವ್ಯವಹಾರವನ್ನು ಪ್ರಾರಂಭಿಸಿದ್ದರು.

ರೈತ ಮಹಿಳೆ ವರ್ಷಾ ಅವರ ಕಸದಿಂದ ರಸ ಮಾಡುವ ಮೂಲಕ ತಮ್ಮ ಕಾಲಿನ ಮೇಲೆ ನಿಲ್ಲುವಂತೆ ಪ್ರೇರೇಪಿಸಿದ್ದು ಮನ್ ಕಿ ಬಾತ್' ಕಾರ್ಯಕ್ರಮ. ಇಂತಹದ್ದೊಂದು ಸ್ವಾವಲಂಬನೆಯ ಸಾಧನೆಗೆ ಕಾರಣವಾದ ಸಾರ್ಥಕತೆ ಮನ್‌ ಕಿ ಬಾತ್‌ ಕಾರ್ಯಕ್ರಮದ್ದು ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದ ಸಂಚಿಕೆಯಿಂದ ಪ್ರೇರಿತಳಾದ ಆಕೆ ಬಾಳೆಹಣ್ಣಿನಿಂದ ಜೈವಿಕ ಗೊಬ್ಬರ ತಯಾರಿಸಲು ಆರಂಭಿಸಿದರು. ಪ್ರಕೃತಿಯನ್ನು ಪ್ರೀತಿಸುವ ವರ್ಷಾ ಅವರ ಈ ಉಪಕ್ರಮವು ಇತರರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ನೀಡಿದೆ ಎಂದು ಮೋದಿ ಹೇಳಿದರು.

ಚಾಮರಾಜನಗರದ ಉಮ್ಮತ್ತೂರಿನವರಾದ ವರ್ಷಾ ಅವರು ತಮ್ಮ ಆಕೃತಿ ಪರಿಸರ ಸ್ನೇಹಿ ಎಂಟರ್‌ಪ್ರೈಸಸ್ ಮೂಲಕ, ಬಾಳೆ ದಿಂಡಿನ ಫೈಬರ್ ಬಳಸಿ ಮ್ಯಾಟ್ಸ್, ಮೊಬೈಲ್ ಸ್ಟ್ಯಾಂಡ್‌ಗಳು, ಪೆನ್ ಸ್ಟ್ಯಾಂಡ್‌ಗಳು, ಟೋಪಿಗಳು ಮತ್ತು ಫ್ರಿಜ್ ಕವರ್‌ಗಳಂತಹ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ದುಡಿಮೆಯ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವರ್ಷಾ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 'ಮನ್ ಕಿ ಬಾತ್' ಸಂಚಿಕೆಗಳಲ್ಲಿ ಪ್ರಧಾನಿಯವರ ಮಾತುಗಳನ್ನು ಕೇಳಿ ಸ್ಫೂರ್ತಿ ಪಡೆದಿದ್ದೇನೆ.

ತಮಿಳುನಾಡು ಮೂಲದ ಉದ್ಯಮಿಯೊಬ್ಬರು ತಮ್ಮ ಹಲವಾರು ವ್ಯವಹಾರಗಳು ಕೋವಿಡ್‌ ನಿಂದಾಗಿ ಸ್ಥಗಿತಗೊಂಡಾಗ ಬಾಳೆ ನಾರು ಬಳಸಿ ಹೊಸ ಉದ್ಯಮವನ್ನು ಪ್ರಾರಂಭಿಸಿದ ಬಗ್ಗೆ ಪ್ರಧಾನಿ ಆಗಿನ ತಮ್ಮ ಮನ್‌ ಕಿ ಬಾತ್‌ ನಲ್ಲಿ ಪ್ರಸ್ತಾಪಿಸಿದ್ದರು. ಅದರಿಂದ ಪ್ರೇರಣೆ ಪಡೆದು ನಾನೂ ಯಾಕೆ ಅಂತಹ ಪ್ರಯತ್ನ ಮಾಡಬಾರದು ಎಂದು ಈ ಪ್ರಯೋಗಕ್ಕೆ ಮುಂದಾಗಿದ್ದೆ ಎಂದು ಅವರು ಹೇಳಿದ್ದರು.

“ಪ್ರಧಾನಿಯವರು ನನ್ನ ಕೆಲಸವನ್ನು ಗುರುತಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ಈಗ ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರು ಪ್ರೇರಣೆಯಾಗಿದ್ದಾರೆ" ಎಂದು ವರ್ಷಾ ಹೇಳಿದರು.

Read More
Next Story