ಹೈದರಾಬಾದ್ ಮಹಿಳೆ ಆಸ್ಟ್ರೇಲಿಯದಲ್ಲಿ ಹತ್ಯೆ
x

ಹೈದರಾಬಾದ್ ಮಹಿಳೆ ಆಸ್ಟ್ರೇಲಿಯದಲ್ಲಿ ಹತ್ಯೆ

ಭಾರತಕ್ಕೆ ಮಗುವಿನೊಂದಿಗೆ ಪತಿ ಪಲಾಯನ


ಬಕ್ಲಿ, ವಿಕ್ಟೋರಿಯಾ: ಹೈದರಾಬಾದ್ ಮೂಲದ ಮಹಿಳೆಯೊಬ್ಬರು ಆಸ್ಟ್ರೇಲಿಯದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯನ್ನು ಪತಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಹೈದರಾಬಾದ್‌ಗೆ ತೆರಳಿರುವ ಪತಿ, ಆಕೆಯ ಪೋಷಕರಿಗೆ ಮಗುವನ್ನು ಒಪ್ಪಿಸಿದ್ದಾರೆ.

ವರದಿಗಳ ಪ್ರಕಾರ, ಮಾರ್ಚ್ 9 ರಂದು ವಿಕ್ಟೋರಿಯಾದ ಬಕ್ಲಿಯಲ್ಲಿ ರಸ್ತೆ ಬದಿಯಲ್ಲಿ ಚೈತನ್ಯ ಮದಗಾನಿ(36) ಅವರ ಶವ ಕಸದ ಬುಟ್ಟಿಯಲ್ಲಿ ಪತ್ತೆಯಾಗಿದೆ. ಅವರು ಪತಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದರು.

ಉಪ್ಪಲ್ ಶಾಸಕ ಬಂಡಾರಿ ಲಕ್ಷ್ಮಾ ರೆಡ್ಡಿ ಅವರ ಪ್ರಕಾರ, ಮೃತರು ತಮ್ಮ ಕ್ಷೇತ್ರದವರಾಗಿದ್ದು, ಭಾನುವಾರ ಆಕೆಯ ಪೋಷಕರನ್ನು ಭೇಟಿ ಮಾಡಿದ್ದೇನೆ. ಆಕೆಯ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ತರಲು ಎಂಇಎಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಈ ಬಗ್ಗೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರ ಕಚೇರಿಗೂ ತಿಳಿಸಲಾಗಿದೆ. ಮಹಿಳೆಯ ಪೋಷಕರು ನೀಡಿದ ಮಾಹಿತಿ ಪ್ರಕಾರ, ಅಳಿಯ ತಮ್ಮ ಮಗಳನ್ನು ಕೊಂದಿರುವುದಾಗಿ ʻತಪ್ಪೊಪ್ಪಿಕೊಂಡಿದ್ದಾನೆʼ ಎಂದು ಶಾಸಕರು ಹೇಳಿದರು.

ವಿಕ್ಟೋರಿಯಾ ಪೊಲೀಸರು ಜಾಲತಾಣದಲ್ಲಿರುವ ಮಾರ್ಚ್ 9 ರ ಹೇಳಿಕೆ ಪ್ರಕಾರ, ʻಬಕ್ಲಿಯಲ್ಲಿ ಶವ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ. ಅನುಮಾನಾಸ್ಪದ ಸಾವು ಎಂದು ಪರಿಗಣಿಸಲಾಗಿದೆʼ.

Read More
Next Story