ಲಂಡನ್‌ನಲ್ಲಿ ವಲಸೆ ಹಗರಣ: ಭಾರತ ಸಂಜಾತ ಉದ್ಯೋಗಿಗೆ ಹುಡುಕಾಟ
ಬ್ರಿಟಿಷ್ ಏರ್ವೇಸ್ ಉದ್ಯೋಗಿಯಿಂದ ಕಾನೂನಿನಲ್ಲಿನ ಲೋಪದೋಷ ಬಳಸಿಕೊಂಡು ವಂಚನೆ
ಸುಮಾರು ಐದು ವರ್ಷಗಳಿಂದ ವಲಸೆ ಹಗರಣ ನಡೆಸಿ ಸಿಕ್ಕಿಬಿದ್ದನಂತರ ಭಾರತಕ್ಕೆ ಪಲಾಯನ ಮಾಡಿದ್ದಾನೆ ಎನ್ನಲಾದ ಬ್ರಿಟಿಷ್ ಏರ್‌ವೇಸ್ ಮೇಲ್ವಿಚಾರಕನಿಗಾಗಿ ಹುಡುಕಾಟ ನಡೆಯುತ್ತಿದೆ.
24 ವರ್ಷ ವಯಸ್ಸಿನ ಶಂಕಿತ(ಹೆಸರು ಬಹಿರಂಗಪಡಿಸಿಲ್ಲ) ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದ ಟರ್ಮಿನಲ್ 5 ರಲ್ಲಿ ಕೆಲಸ ಮಾಡಿದ್ದರು. ಸಮರ್ಪಕ ವೀಸಾ ದಾಖಲೆಗಳಿಲ್ಲದೆ ಬ್ರಿಟಿಷ್ ಏರ್ವೇಸ್ ನಲ್ಲಿ ಪ್ರಯಾಣ ಮಾಡುವವರಿಗೆ ಅನುಕೂಲ ಮಾಡಿಕೊಟ್ಟು ಪ್ರತಿ ವ್ಯಕ್ತಿಯಿಂದ 25,000 ಪೌಂಡ್ ಪಡೆದುಕೊಳ್ಳುತ್ತಿದ್ದರು ಎಂದು ಏರ್ವೇಸ್ ದೂರಿದೆ. ಬಂಧನದ ನಂತರ ಜಾಮೀನು ಪಡೆದು, ಪಾಲುದಾರನೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ಸನ್ ಟ್ಯಾಬ್ಲಾಯ್ಡ್ ವರದಿ ಮಾಡಿದೆ. ಆತನಿಗೆ ಭಾರತ ಮೂಲದ ಅಧಿಕ ಗ್ರಾಹಕರಿದ್ದು,ಬೇರೆಡೆಗೆ ಸಂಚರಿಸಲು ತಾತ್ಕಾಲಿಕ ವೀಸಾ ಮಾಡಿಕೊಡುತ್ತಿದ್ದರು.
ಕೆನಡಾದಿಂದ ಸೂಚನೆ: ಟೊರೊಂಟೊ ಅಥವಾ ವ್ಯಾಂಕೋವರ್‌ಗೆ ಬಿಎ ವಿಮಾನಗಳಲ್ಲಿ ಆಗಮಿಸುವವರು ತಕ್ಷಣ ಆಶ್ರಯಕ್ಕಾಗಿ ಪ್ರಯತ್ನಿಸುವುದು ಸಾಮಾನ್ಯವಾದ ಬಳಿಕ ಕೆನಡಾದ ಅಧಿಕಾರಿಗಳು ಎಚ್ಚರಿಸಿದ್ದರು. ಆಯ್ಕೆ ಮಾಡಿದ ದೇಶವನ್ನು ಪ್ರವೇಶಿಸಲು ಪ್ರಯಾಣಿಕರು ಇಟಿಎ( ಎಲೆಕ್ಟ್ರಾನಿಕ್ ಟ್ರಾವೆಲ್ ದೃಢೀಕರಣ)ವನ್ನು ಹೊಂದಿದ್ದಾರೆಯೇ ಎಂಬುದನ್ನುಅದೇ ವ್ಯಕ್ತಿ ಪರಿಶೀಲಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇಟಿಎಗೆ ಪ್ರಯಾಣಿಕರು ತಮ್ಮ ದೇಶದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಭಾರತಕ್ಕೆ ಪಲಾಯನ: ಶಂಕಿತನನ್ನು ಜನವರಿ 6 ರಂದು ಬಂಧಿಸಲಾಗಿದ್ದು, ಆತ ಜಾಮೀನು ಪಡೆದು ಹೀಥ್ರೂದಿಂದ ಭಾರತಕ್ಕೆ ತೆರಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆತ ವ್ಯವಸ್ಥೆಯಲ್ಲಿನ ʻಲೋಪದೋಷವನ್ನು ಬಳಸಿಕೊಂಡರುʼ. ತಪ್ಪು ಮಾಹಿತಿ ನಮೂದಿಸಿ ಮತ್ತು ಇಟಿಎ ದಾಖಲೆಗಳು ಸಮರ್ಕಪವಾಗಿವೆ ಎಂದು ಹೇಳಿ ದೇಶಗಳಿಗೆ ಜನರನ್ನು ಕಳಿಸುವಲ್ಲಿ ಯಶಸ್ವಿಯಾದರು. ಇದೊಂದು ʻಚತುರ ಯೋಜನೆʼ ಆಗಿದ್ದು, ಆತ ಅಪಾರ ಹಣ ಸಂಪಾದಿಸಿದ್ದಾನೆ. ಆತ ಏನು ಮಾಡಿದನೆಂಬ ಪೂರ್ಣ ಮಾಹಿತಿ ಯಾರಿಗೂ ತಿಳಿದಿಲ್ಲ ಎಂದು ವರದಿಗಳು ತಿಳಿಸಿವೆ.