ಗುಜರಾತ್: ಬಿಜೆಪಿಗೆ ಕಡ್ವಾ ಪಟೇಲ್‌ ಸಮುದಾಯ ಮುಖ್ಯ ಏಕೆ ?
x
ಗುಜರಾತ್‌

ಗುಜರಾತ್: ಬಿಜೆಪಿಗೆ ಕಡ್ವಾ ಪಟೇಲ್‌ ಸಮುದಾಯ ಮುಖ್ಯ ಏಕೆ ?

ಗುಜರಾತ್‌ನಲ್ಲಿ ಕಡ್ವಾ ಪಟೇಲ್‌ ಸಮುದಾಯ ಬಿಜೆಪಿಯ ಮತ ಬ್ಯಾಂಕ್‌


ಗುಜರಾತ್‌ನಲ್ಲಿ ಕಡ್ವಾ ಪಟೇಲ್‌ ಸಮುದಾಯವನ್ನು ಮೆಚ್ಚಿಸಲು ಬಿಜೆಪಿ ಹರಸಾಹಸ ಮುಂದುವರಿಸಿದೆ. ಆಗಿದ್ದರೆ ಗುಜರಾತ್‌ನಲ್ಲಿ ಕಡ್ವಾ ಪಟೇಲ್‌ ಸಮುದಾಯ ಯಾಕೆ ಅಷ್ಟು ಮುಖ್ಯ ಎನ್ನುವುದು ಈ ಲೇಖನದಲ್ಲಿದೆ.

ಗುಜರಾತ್‌ನ ಶೇ.15ರಷ್ಟು ಮತದಾರರು ಕಡ್ವಾ ಪಾಟೇಲ್‌ ಸಮುದಾಯಕ್ಕೆ ಸೇರಿದ್ದಾರೆ. ಗುಜರಾತ್‌ ಚುನಾವಣೆಯಲ್ಲಿ ಕಡ್ವಾ ಪಟೇಲ್‌ ಸಮುದಾಯ ಪ್ರಮುಖ ಪಾತ್ರ ವಹಿಸಿದೆ.

ಹೀಗಾಗಿ, ಗುಜರಾತ್ ಸಿ.ಎಂ ಭೂಪೇಂದ್ರ ಪಟೇಲ್ ಸೇರಿದಂತೆ ಹಲವು ಬಿಜೆಪಿ ನಾಯಕರು ಅಹಮದಾಬಾದ್‌ನಲ್ಲಿ ಪಟೇಲ್‌ ಸಮುದಾಯ ಹೆಚ್ಚು ಗುರುತಿಸಿಕೊಂಡಿರುವ ವಿಶ್ವ ಉಮಿಯಾ ಫೌಂಡೇಶನ್ (ವಿಯುಎಫ್) ಸಂಸ್ಥೆಯೊಂದಿಗೆ ಒಡನಾಟ ಬೆಳೆಸಿಕೊಳ್ಳುತ್ತಿದ್ದಾರೆ.

ವಿಶ್ವ ಉಮಿಯಾ ಫೌಂಡೇಶನ್‌ ಕಳೆದ ಹಲವು ವರ್ಷಗಳಿಂದ ಕಡ್ವಾ ಪಟೇಲರ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಉನ್ನತಿಗಾಗಿ ಶ್ರಮಿಸುತ್ತಿದೆ.

ಪಟೇಲ್‌ ಸಮುದಾಯವನ್ನು ಗುಜರಾತ್‌ನಲ್ಲಿ ಕಡ್ವಾ ಮತ್ತು ಲೆಯುವಾ ಎಂದು ಎರಡು ಮುಖ್ಯ ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಗುಜರಾತ್‌ನಲ್ಲಿ ಈ ಎರಡು ಸಮುದಾಯಕ್ಕೆ ಸೇರಿದ ಮತದಾರರ ಪ್ರಮಾಣ 15-16 ಪ್ರತಿ ಇದೆ.

182 ಶಾಸಕರ ಸಂಖ್ಯಾ ಬಲವಿರುವ ಗುಜರಾತ್‌ ವಿಧಾನಸಭೆಯಲ್ಲಿ 50ಕ್ಕೂ ಹೆಚ್ಚು ಶಾಸಕರು ಇದೇ ಸಮುದಾಯಕ್ಕೆ ಸೇರಿದ್ದಾರೆ.

ಉತ್ತರ ಗುಜರಾತ್‌ನಲ್ಲಿ ಕಡ್ವಾ ಪಟೇಲ್‌ ಸಮುದಾಯ ಪ್ರಾಬಲ್ಯ ಹೊಂದಿದೆ. ಲೆಯುವಾ ಪಟೇಲ್‌ ಸಮುದಾಯದಲ್ಲಿ ಎರಡು ಸಣ್ಣ ಉಪ-ಜಾತಿಗಳಾದ - ಚೌಧರಿಗಳು ಮತ್ತು ಅಂಜನಾ ಸಮುದಾಯ ಇದೆ.

ಕಡ್ವಾ ಸಮುದಾಯಕ್ಕೆ ಸೇರಿದವರು ಹೆಚ್ಚಾಗಿ ವಜ್ರಗಳು ಮತ್ತು ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಲೆಯುವಾ ಸಮುದಾಯಕ್ಕೆ ಸೇರಿದವರು ಬಹುತೇಕ ಮಧ್ಯಮ ವರ್ಗಕ್ಕೆ ಸೇರಿದ್ದಾರೆ.

ಗುಜರಾತ್‌ನ ಮಾಜಿ ಮುಖ್ಯಮಂತ್ರಿಗಳಾದ ಕೇಶುಭಾಯಿ ಪಟೇಲ್ ಮತ್ತು ಆನಂದಿಬೆನ್ ಪಟೇಲ್ ಮತ್ತು ಮಾಜಿ ಸಚಿವ ಸೌರವ್ ಪಟೇಲ್ ಸೇರಿದಂತೆ ಹಲವು ನಾಯಕರು ಲೇವಾ ಪಟೇಲದ ಉಪಜಾತಿಗೆ ಸೇರಿದ್ದಾರೆ.

ಕಡ್ವಾ ಪಟೇಲರು ಬಿಜೆಪಿಯೊಂದಿಗೆ ಹೆಚ್ಚು ಗುರುತಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ವರ್ಷದ ವರೆಗೆ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿರಲಿಲ್ಲ.

ಪಟೇಲ ಸಮುದಾಯದ ಹೋರಾಟ

2016ರಲ್ಲಿ ಉತ್ತರ ಗುಜರಾತ್‌ನ ಕಡ್ವಾ ಪಟೇಲ್‌ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಆಂದೋಲನದ ನಂತರ ಗುಜರಾತ್‌ನಲ್ಲಿ ಪಟೇಲ್ ಸಮುದಾಯದ ಮತವನ್ನು ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದೆ.

2016ರಲ್ಲಿ ಮೊದಲ ಬಾರಿಗೆ ಕಡ್ವಾ ಪಾಟೇಲ್‌ ಸಮುದಾಯ ಬಿಜೆಪಿಯಿಂದ ಅಂತರ ಕಾಪಾಡಿಕೊಂಡಿತ್ತು. ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದ್ದರು.

ಗುಜರಾತ್‌ನ ರಾಜಕೀಯ ವಿಶ್ಲೇಷಕ ಮಣಿಹಿ ಜಾನಿ ಅವರ ಪ್ರಕಾರ, 2017ರ ಚುನಾವಣೆಯ ಸಮಯದಲ್ಲಿ ಬಿಜೆಪಿಯು ಕಡ್ವಾ ಪಾಟೇಲ್‌ದಾರರ ಪ್ರಭಾವವನ್ನು ತಪ್ಪಾಗಿ ಅಂದಾಜಿಸಿತ್ತು.

ಆದರೆ, ಕೂಡಲೇ ಎಚ್ಚೆತ್ತುಕೊಂಡಿತ್ತು. ಈ ನಡುವೆ 2017ರ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಸಂಖ್ಯಾಬಲ 99ಕ್ಕೆ ಇಳಿದಿತ್ತು. ಪಟೇಲ್‌ ಸಮುದಾಯದ ಮತದಾರರು ಬಿಜೆಪಿಯಿಂದ ದೂರ ಸರಿದಿದ್ದೇ ಇದಕ್ಕೆ ಕಾರಣವಾಗಿತ್ತು.

ಐದು ವರ್ಷಗಳ ನಂತರ ಅಂದರೆ 2022ರ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೧೫೦ ಜನ ಶಾಸಕರು ಗೆದಿದ್ದರು.

ಪಟೇಲ್‌ ಸಮುದಾಯದಲ್ಲಿನ ಬಡವರಿಗೆ (ಆರ್ಥಿಕವಾಗಿ ಹಿಂದುಳಿದವರಿಗೆ) ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವ ಮೂಲಕ ಈ ಸಮುದಾಯವನ್ನು ಬಿಜೆಪಿ ತನ್ನತ್ತ ಸೆಳೆಯಿತು.

ಇನ್ನು 2022ರ ಚುನಾವಣೆಯಲ್ಲಿ ಗೆದ್ದ ನಂತರ ಭೂಪೇಂದ್ರ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರವು ಜಾಮ್‌ನಗರ ಜಿಲ್ಲೆಯ ಕಡ್ವಾ ಪಾಟೇಲ್‌ ಸಮುದಾಯದ ಆರಾಧನಾ ಸ್ಥಳವಾದ ಉಮಿಯಾಧಾಮ್‌ನ ಅಭಿವೃದ್ಧಿಗೆ ₹ 18.25 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ.

Read More
Next Story