ಗುಜರಾತ್ ಕಾಂಗ್ರೆಸ್‌ : ಭರತ್ ಸೋಲಂಕಿ ಸ್ಪರ್ಧೆಗೆ ನಿರಾಕರಣೆ
x
ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಭರತ್ ಸೋಲಂಕಿ̤

ಗುಜರಾತ್ ಕಾಂಗ್ರೆಸ್‌ : ಭರತ್ ಸೋಲಂಕಿ ಸ್ಪರ್ಧೆಗೆ ನಿರಾಕರಣೆ


ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಭರತ್ ಸೋಲಂಕಿ ತಾವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾರ್ಚ್ 12 ರಂದು ಎಕ್ಸ್ ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಿರಿಯ ಸಹೋದ್ಯೋಗಿಗಳನ್ನು ಮನವೊಲಿಸಲು ಪ್ರಯತ್ನಿಸುತ್ತಿ ದ್ದಾರೆ. ಪಕ್ಷದ ಮೂಲಗಳ ಪ್ರಕಾರ, ಸೋಲಂಕಿ ಅವರನ್ನು ಗುಜರಾತ್‌ನ ಆನಂದ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಖರ್ಗೆ ಮತ್ತು ರಾಹುಲ್ ಒತ್ತಾಯಿಸಿದ್ದಾರೆ. ನಿನ್ನೆ ನಡೆದ ಚುನಾವಣಾ ಸಮಿತಿ ಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಲಾಗಿದೆ.

ಸೋಲಂಕಿ ತಮ್ಮ ಪೋಸ್ಟ್‌ನಲ್ಲಿ,ʻಕಾಂಗ್ರೆಸ್‌ ಪಕ್ಷ ತಮ್ಮ ಕುಟುಂಬಕ್ಕೆ ಮತ್ತು ತಮಗೆ ಸಾಕಷ್ಟು ನೀಡಿದೆ. ತಾವು ಜಮ್ಮು ಮತ್ತು ಕಾಶ್ಮೀರದ ಎಐಸಿಸಿ ಉಸ್ತುವಾರಿಯಾಗಿದ್ದು, ಗುಜರಾತಿನಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಸಾಧ್ಯವಾಗಲೆಂದು ಚುನಾವಣೆಯಲ್ಲಿ ಸ್ಪರ್ಧಿಸದಿರುವ ನನ್ನ ಇಚ್ಛೆಯನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ನಾಯಕತ್ವದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ, ʼ ಎಂದು ಬರೆದಿದ್ದಾರೆ.

ಭರತ್ ಸೋಲಂಕಿ ಅವರು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ದಿವಂಗತ ಮಾಧವಸಿಂಹ ಸೋಲಂಕಿ ಅವರ ಮಗ. ಆನಂದ್‌ ಲೋಕಸಭೆ ಕ್ಷೇತ್ರದಿಂದ 2004 ಮತ್ತು 2009 ರಲ್ಲಿ ಗೆದ್ದಿದ್ದರು ಮತ್ತು ಯುಪಿಎ-2 ರ ಅವಧಿಯಲ್ಲಿ ರಾಜ್ಯ ಸಚಿವರಾಗಿದ್ದರು.

Read More
Next Story