ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ
x
ಕಾಲೇಜು ಸ್ನೇಹಿತನನ್ನು ಕೊಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ.

ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

ಸ್ನೇಹಿತನನ್ನೇ ನಾಲ್ವರು ಯುವಕರು ಕೊಲೆ ಮಾಡಿ ಶವವನ್ನು ಹೊಲದಲ್ಲಿ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


Click the Play button to hear this message in audio format

ಸ್ನೇಹಿತನನ್ನೇ ನಾಲ್ವರು ಯುವಕರು ಕೊಲೆ ಮಾಡಿ ಶವವನ್ನು ಹೊಲದಲ್ಲಿ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ಯಶ್‌ ಮಿತ್ತಲ್‌ ಎಂದು ಗುರುತಿಸಲಾಗಿದ್ದು, ಈತ ಉದ್ಯಮಿಯ ಮಗ ಹಾಗೂ ನೋಯ್ಡಾ ಮೂಲದ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ.

ಸೋಮವಾರ ಹಾಸ್ಟೆಲ್‌ನಿಂದ ನಾಪತ್ತೆಸ್ನೇಹಿತನನ್ನೇ ನಾಲ್ವರು ಯುವಕರು ಕೊಲೆ ಮಾಡಿ ಶವವನ್ನು ಹೊಲದಲ್ಲಿ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಯಾದ ಯಶ್‌ ಮಿತ್ತಲ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ತನ್ನ ಮಗನ ಬಿಡುಗಡೆಗೆ 6 ಕೋಟಿ ರೂಪಾಯಿ ಬೇಡಿಕೆಯ ಸಂದೇಶ ತಂದೆಗೆ ಬಂದ ನಂತರ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.

ಕ್ಯಾಂಪಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯಶ್ ಅವರು ಸೋಮವಾರ ವಿಶ್ವವಿದ್ಯಾಲಯದಿಂದ ಫೋನಿನಲ್ಲಿ ಮಾತನಾಡುತ್ತಾ ಹೊರಹೋಗುತ್ತಿರುವುದು ಕಂಡುಬಂದಿದೆ. ಅವರ ಕಾಲ್‌ ರೆಕಾರ್ಡ್‌ಗಳನ್ನು ಪರಿಶೀಲಿಸಿದಾಗ ಅದು ತನ್ನ ಸ್ನೇಹಿತ ರಚಿತ್‌ಗೆ ಹೋಗಿತ್ತು. ಶಿವಂ, ಸುಶಾಂತ್ ಮತ್ತು ಶುಭಂ ಎಂದು ತಿಳಿದುಬಂದಿದೆ.

ಫೆಬ್ರವರಿ 26 ರಂದು ನಾಲ್ವರು ಸ್ನೇಹಿತರು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಗಜ್ರೌಲಾ ಕ್ಷೇತ್ರಕ್ಕೆ ಪಾರ್ಟಿಗಾಗಿ ಯಶ್‌ನನ್ನು ಕರೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸಾದ್ ಮಿಯಾ ಖಾನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಲ್ಲಿ ಜಗಳ ನಡೆದು ನಾಲ್ವರು ಯಶ್‌ನನ್ನು ಕೊಂದು ಶವವನ್ನು ಹೂತು ಹಾಕಿದ್ದಾರೆ. ರಚಿತ್ ಸ್ಥಳವನ್ನು ಗುರುತಿಸಿದ ನಂತರ ನಾವು ದೇಹವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಧಿಕಾರಿ ಖಾನ್ ಹೇಳಿದರು.

ಪಶ್ಚಿಮ ಉತ್ತರ ಪ್ರದೇಶದ ದಾದ್ರಿಯಲ್ಲಿಯೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಶುಭಂ ಪರಾರಿಯಾಗಿದ್ದಾನೆ. ಆದರೆ ಶೀಘ್ರದಲ್ಲೇ ಆತನನ್ನು ಹಿಡಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಯಶ್ ಅವರ ಕುಟುಂಬವನ್ನು ದಾರಿತಪ್ಪಿಸಲು ಸುಲಿಗೆ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಆರೋಪಿಗಳು ಹೇಳಿದ್ದಾರೆ ಎಂದು ಅಧಿಕಾರಿ ಹೇಳಿದರು.

ಯಶ್ ನೋಯ್ಡಾ ವಿಶ್ವವಿದ್ಯಾನಿಲಯದಲ್ಲಿ ಬಿಸಿನೆಸ್‌ ಅಡ್ಮಿನಿಸ್ಟ್ರೇಶನ್‌ ಪದವಿ ಓದುತ್ತಿದ್ದರು.

Read More
Next Story