ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸ ಮೈ ಮೇಲೆ ಸಗಣಿ ಸುರಿದುಕೊಂಡು ರೈತರ ಪ್ರತಿಭಟನೆ
ಹಾಲು ಪ್ರೋತ್ಸಾಹಧನ ಬಾಕಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ರೈತರು ಮೈಗೆ ಸೆಗಣಿ ಸುರಿದುಕೊಂಡು ಸೋಮವಾರ ( ಜೂನ್ 24) ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ರೈತರು ಮೈಮೇಲೆ ಸಗಣಿ ಸುರಿದುಕೊಂಡು ಸೋಮವಾರ (ಜೂ.24) ಪ್ರತಿಭಟನೆ ನಡೆಸಿದ್ದಾರೆ.
ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಸಾವಿರಾರು ರೈತರು ಮುಂದಾಗಿದ್ದು, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪಾದಯಾತ್ರೆಗೆ ಚಾಲನೆ ನೀಡಿದರು. ಕನಕಪುರ ರೋಡ್ ನಿಂದ ಪಾದಯಾತ್ರೆ ಮೂಲಕ ಕೆಜಿ ರೋಡ್ ನಲ್ಲಿರುವ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಸಾವಿರಾರು ರೈತರು ಎತ್ತಿನ ಗಾಡಿಗಳ ಮೂಲಕ ಪಾದಯಾತ್ರೆ ಮಾಡಿದ್ದಾರೆ.
ರೈತರ ಬೇಡಿಕೆಗಳೇನು?
- ಬೆಂಗಳೂರು ದಕ್ಷಿಣ ತಾಲೂಕಿನ 30 ಗ್ರಾಮಗಳಲ್ಲಿ ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಸಾಗುವಳಿ ಜಮೀನುಗಳನ್ನು ಪೋಡಿ, ದುರಸ್ತಿ ಮಾಡಿಕೊಟ್ಟು ರೈತರಿಗೆ ತಮ್ಮ ಜಮೀನುಗಳ ಮೇಲೆ ಸಂಪೂರ್ಣ ಹಕ್ಕನ್ನು ಕೊಡಬೇಕು.
- ಸೋಮನಹಳ್ಳಿ ಬಳಿ ನಿರ್ಮಿಸುತ್ತಿರುವ ಟೋಲ್ ನಲ್ಲಿ ಸ್ಥಳೀಯ ವಾಹನ ಸವಾರರಿಗೆ ಸರ್ವಿಸ್ ರಸ್ತೆ ನೀಡಬೇಕು ಅಥವಾ ಟೋಲನ್ನು ಕಗ್ಗಲೀಪುರ ಬೈಪಾಸ್ ಗೆ ಸ್ಥಳಾಂತರಿಸಬೇಕು
- ಕಗ್ಗಲಿಪುರ, ಸಾಲುಹುಣಸೆ ಉದಿಪಾಳ್ಯ ಬೈಪಾಸ್ ರಸ್ತೆ ನಿರ್ಮಿಸಿ ಸ್ಥಳೀಯರಿಗೆ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆಯನ್ನು ತಪ್ಪಿಸುವುದು
- ಅರಣ್ಯ ಇಲಾಖೆ ರೈತರನ್ನು ಒಕ್ಕಲೆಸಬೇಕೆಂದು ನೀಡುತ್ತಿರುವ ಕಿರುಕುಳದಿಂದ ಮುಕ್ತಿ ಕೂಡಿಸಬೇಕು
- 45 ವರ್ಷಗಳಿಂದ ಸಾಕಮ್ಮ ಬಡಾವಣೆಯಲ್ಲಿ ವಾಸಿಸುತ್ತಿರುವ ಗುಡಿಸಲು ನಿವಾಸಿಗಳಿಗೆ ಮನೆ ಭಾಗ್ಯ ಕಲ್ಪಿಸಬೇಕು.
- ಪಟ್ಟರೆಡ್ಡಿ ಪಾಳ್ಯ ಗ್ರಾಮಕ್ಕೆ ಪರ್ಯಾಯ ರಸ್ತೆ ನಿರ್ಮಿಸಬೇಕು.
- 7 ತಿಂಗಳಿನಿಂದ ತಡೆ ಹಿಡಿದಿರುವ ಹಾಲು ಉತ್ಪಾದಕ ರೈತರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.
- ಹೆಚ್ಚಿನ ಮಳೆಯಾದಾಗ ನದಿಗಳಿಗೆ ಹರಿದು ಹೋಗುತ್ತಿರುವ ಅಪಾರ ಪ್ರಮಾಣದ ನೀರನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲ ಹೆಚ್ಚಿಸಬೇಕು
Next Story