ಸಿಂಘು, ಟಿಕ್ರಿ ಗಡಿಗಳು ಭಾಗಶಃ ಮುಕ್ತ
x

ಸಿಂಘು, ಟಿಕ್ರಿ ಗಡಿಗಳು ಭಾಗಶಃ ಮುಕ್ತ


ನವದೆಹಲಿ, ಫೆ. 24)- ರೈತರ 'ದೆಹಲಿ ಚಲೋ' ಮೆರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಎರಡು ವಾರ ಕಾಲ ಮುಚ್ಚಿದ್ದ ಹರಿಯಾಣದ ಸಿಂಘು ಮತ್ತು ಟಿಕ್ರಿ ಗಡಿಗಳನ್ನು ಭಾಗಶಃ ಪುನಃ ತೆರೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸಿಂಘು ಗಡಿ ಮತ್ತು ಟಿಕ್ರಿ ಗಡಿಯಲ್ಲಿ ಒಂದು ಮಾರ್ಗ ತೆರೆಯಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಿಂಘು ಮತ್ತು ಟಿಕ್ರಿ ಗಡಿಗಳನ್ನು ತೆರೆಯುವುದರಿಂದ ದೆಹಲಿಯಿಂದ ಹರಿಯಾಣಕ್ಕೆ ಪ್ರಯಾಣಿಸುವವರಿಗೆ ನೆಮ್ಮದಿ ಸಿಗಲಿದೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ರೈತರು 'ದೆಹಲಿ ಚಲೋ' ಮೆರವಣಿಗೆಯನ್ನು ಪ್ರಾರಂಭಿಸಿದ್ದರಿಂದ, ಫೆಬ್ರವರಿ 13 ರಂದು ಎರಡು ಗಡಿಗಳನ್ನು ಮುಚ್ಚಲಾಯಿತು. ದೆಹಲಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಅಂಬಾಲಾ ಬಳಿಯ ಪಂಜಾಬ್-ಹರಿಯಾಣ ಗಡಿಯಲ್ಲಿ ಸಾವಿರಾರು ರೈತರು ಮೊಕ್ಕಾಂ ಹೂಡಿದ್ದಾರೆ.

Read More
Next Story