ತಮಿಳುನಾಡಿಗೆ ನೀರು | ಕಾವೇರಿ ನೀರು ನಿರ್ವಹಣಾ ಸಮಿತಿ ನಿರ್ದೇಶನ: ತುರ್ತು ಸಭೆ ಕರೆದ ಸಿದ್ದರಾಮಯ್ಯ
x
ಕಾವೇರಿ ನದಿ

ತಮಿಳುನಾಡಿಗೆ ನೀರು | ಕಾವೇರಿ ನೀರು ನಿರ್ವಹಣಾ ಸಮಿತಿ ನಿರ್ದೇಶನ: ತುರ್ತು ಸಭೆ ಕರೆದ ಸಿದ್ದರಾಮಯ್ಯ

ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಜಲಸಂಪನ್ಮೂಲ ಇಲಾಖೆಯ ತುರ್ತು ಸಭೆ ಕರೆದಿದ್ದಾರೆ.


Click the Play button to hear this message in audio format

ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಜಲಸಂಪನ್ಮೂಲ ಇಲಾಖೆಯ ತುರ್ತು ಸಭೆ ಕರೆದಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಇಲಾಖೆಯ ಹಿರಿಯ ಅಧಿಕಾರಿಗಳು, ಕಾವೇರಿ ಕಣಿವೆ ಸಚಿವರು ಭಾಗವಹಿಸಲಿದ್ದಾರೆ.

ಈ ಹಿಂದೆ, ತೀವ್ರ ನೀರಿನ ಕೊರತೆ ಎದುರಿಸಿದ ಹಿನ್ನಲೆ ಕರ್ನಾಟಕ ಸರ್ಕಾರವು, ತಮಿಳುನಾಡಿಗೆ ನೀರು ಬಿಡುವಂತೆ ಕೇಳಿದರೂ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಕಾವೇರಿ ನದಿಯಿಂದ ತಮಿಳುನಾಡಿಗೆ ಸರ್ಕಾರ ನೀರು ಬಿಡುತ್ತಿದೆ ಎಂಬ ಬಿಜೆಪಿ ಆರೋಪವನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ "ಬಿಜೆಪಿ ಹೇಳುತ್ತಿರುವುದೆಲ್ಲ ಸುಳ್ಳು, ನೀರಿದ್ದರೆ ಮಾತ್ರ ನೀರು ಬಿಡಬಹುದು. ಅದು ಸುಳ್ಳು.. ನಮಗೇ ನೀರಿಲ್ಲ ತಮಿಳುನಾಡಿಗೆ ಒಂದೇ ಒಂದು ಹನಿ ನೀರು ಕೊಡುವುದಿಲ್ಲ ಅಥವಾ ತಮಿಳುನಾಡು ಕೂಡ ನೀರು ಕೇಳಿಲ್ಲ. ನಮ್ಮಲ್ಲಿ ಬಿಡಲು ನೀರಿಲ್ಲ, ನೀರು ಬಿಡುವ ಪ್ರಶ್ನೆಯೇ ಇಲ್ಲ, ತಮಿಳುನಾಡು ಕೇಳಿದರೂ ಅಥವಾ ಕೇಂದ್ರ ನಮಗೆ ನೀರು ಬಿಡುವಂತೆ ಹೇಳಿದರೂ ನಾವು ಬಿಡುವುದಿಲ್ಲ, ಯಾರೇ ಆಗಲಿ ನೀರು ಕೊಡುವುದಿಲ್ಲ" ಎಂದು ಆಗ ಹೇಳಿದ್ದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಸುದೀರ್ಘ ಹಗ್ಗಜಗ್ಗಾಟ ನಡೆಸಿವೆ. ನದಿಯು ಎರಡೂ ರಾಜ್ಯಗಳ ಜನರಿಗೆ ಜೀವನಾಧಾರದ ಪ್ರಮುಖ ಮೂಲವಾಗಿದೆ. ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಪುದುಚೇರಿ ನಡುವಿನ ನೀರಿನ ಹಂಚಿಕೆ ಸಾಮರ್ಥ್ಯದ ಬಗ್ಗೆ ವಿವಾದಗಳನ್ನು ನಿರ್ಣಯಿಸಲು ಕೇಂದ್ರವು ಜೂನ್ 2, 1990 ರಂದು ಕಾವೇರಿ ಜಲ ವಿವಾದಗಳ ನ್ಯಾಯಾಧಿಕರಣವನ್ನು (CWDT) ರಚಿಸಿತ್ತು.

Read More
Next Story