ಸಿಎಎ ಬಗ್ಗೆ ಭಯ ಬೇಡ: ಮೌಲಾನಾ ಶಹಾಬುದ್ದೀನ್ ರಜ್ವಿ
x

ಸಿಎಎ ಬಗ್ಗೆ ಭಯ ಬೇಡ: ಮೌಲಾನಾ ಶಹಾಬುದ್ದೀನ್ ರಜ್ವಿ


ಉತ್ತರಪ್ರದೇಶ: ಸಿಎಎ ಬಗ್ಗೆ ಮುಸ್ಲಿಮರು ಆತಂಕಪಡುವ ಅಗತ್ಯವಿಲ್ಲ ಎಂದು ಬರೇಲಿ ಮೂಲದ ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ.

ಮಾರ್ಚ್ 11 ರಂದು ಕೇಂದ್ರ ಸರ್ಕಾರ ಸಿಎಎ ಕಾನೂನಿನ ನಿಯಮಗಳ ಅಧಿಸೂಚನೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಎಕ್ಸ್‌ ನಲ್ಲಿ ಪ್ರತಿಕ್ರಿಯಿಸಿದ ಅಖಿಲ ಭಾರತ ಮುಸ್ಲಿಂ ಜಮಾತ್ ಮುಖ್ಯಸ್ಥ ಮತ್ತು ಅಖಿಲ ಭಾರತ ತಂಝೀಮ್ ಉಲಮಾ-ಎ-ಇಸ್ಲಾಂನ ಪ್ರಧಾನ ಕಾರ್ಯದರ್ಶಿ ರಜ್ವಿ, ಕಾನೂನಿಗೆ ಆತಂಕಪಡಬೇಕಿಲ್ಲ ಎಂದು ಹೇಳಿದರು.

ಸಿಎಎ ಜಾರಿಯನ್ನು ಸ್ವಾಗತಿಸಿ, ʻದೇಶದ ಪ್ರತಿಯೊಬ್ಬ ಮುಸ್ಲಿಮ್‌ ಕೂಡ ಅದನ್ನು ಸ್ವಾಗತಿ ಸಬೇಕು. ಕಾನೂನು ಪೌರತ್ವವನ್ನು ನೀಡುತ್ತದೆ ಮತ್ತು ವಾಪಸ್‌ ತೆಗೆದುಕೊಳ್ಳುವುದಿಲ್ಲ. ಮುಸ್ಲಿಮರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲʼ.

ಎಕ್ಸ್‌ ನಲ್ಲಿ ಹಾಕಿರುವ ವಿಡಿಯೋದಲ್ಲಿ, ʻಸಿಎಎಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ ಮತ್ತು ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಕಾನೂನು ಜಾರಿಗೊಳಿಸುವುದನ್ನು ಸ್ವಾಗತಿಸುತ್ತೇನೆ. ಕಾನೂನಿನ ಬಗ್ಗೆ ಮುಸ್ಲಿಮರಲ್ಲಿ ಸಾಕಷ್ಟು ತಪ್ಪು ತಿಳಿವಳಿಕೆ ಇದೆʼ ಎಂದಿದ್ದಾರೆ.


Read More
Next Story