ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ | ಸೋಂಕಿನಿಂದ  ನಾಲ್ವರು ಮಕ್ಕಳ ಸಾವು
x
ಮೆದುಳು ಜ್ವರ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ | ಸೋಂಕಿನಿಂದ ನಾಲ್ವರು ಮಕ್ಕಳ ಸಾವು

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ ಮಕ್ಕಳು ಸಾವನ್ನಪ್ಪುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಮೂರು ಮಕ್ಕಳು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ.


ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನಿಂದ ಮಕ್ಕಳು ಸಾವನ್ನಪ್ಪುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಮೂವರು ಮಕ್ಕಳು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದೀಗ 14 ವರ್ಷ ಬಾಲಕನಿಗೆ ಈ ಸೋಂಕು ದೃಢಪಟ್ಟಿದ್ದು, ಈ ಮೂಲಕ ಎರಡು ತಿಂಗಳ ಅವಧಿಯಲ್ಲಿ ನಾಲ್ವರಿಗೆ ಮೆದುಳು ಜ್ವರ ಕಾಣಿಸಿಕೊಂಡಿದೆ.

ಉತ್ತರ ಕೇರಳ ಪ್ರದೇಶದ ಕೋಳಿಕ್ಕೋಡ್‌ನ ಪಯ್ಯೋಲಿಯದ 14 ವರ್ಷದ ಬಾಲಕಿಗೆ ಮೆದುಳುಜ್ವರ ಕಾಣಿಸಿಕೊಂಡಿದೆ. ಜುಲೈ 1 ರಂದು ಬಾಲಕ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ಸುಧಾರಿಸುತ್ತಿದೆ. ಸೋಂಕನ್ನು ತ್ವರಿತವಾಗಿ ಗುರುತಿಸಲಾಗಿದ್ದು, ವಿದೇಶಿ ಔಷಧಗಳು ಸೇರಿದಂತೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೇರಳದಲ್ಲಿ ಮೇ ತಿಂಗಳಿನಿಂದ ಮೆದುಳು ಜ್ವರ ಕಾಣಿಸಿಕೊಳ್ಳುತ್ತಿದ್ದು, ಇಲ್ಲಿಯವರೆಗೆ ನಾಲ್ಕು ಮಕ್ಕಳಲ್ಲಿ ಈ ಸೋಂಕು ದೃಢಪಟ್ಟಿದೆ. ಈಗಾಗಲೇ ಸೋಂಕು ದೃಢಪಟ್ಟ ಮೂವರು ಸಾವನ್ನಪ್ಪಿದ್ದಾರೆ. ಬುಧವಾರವಷ್ಟೇ ಅಮೀಬಾ ಮೆದುಳು ಸೋಂಕಿನಿಂದ 14 ವರ್ಷದ ಬಾಲಕ ಮೃತಪಟ್ಟಿರುವುದು ವರದಿಯಾಗಿತ್ತು. ಮಲಪ್ಪುರಂನ ಐದು ವರ್ಷದ ಬಾಲಕಿ ಮತ್ತು ಕಣ್ಣೂರಿನ 13 ವರ್ಷದ ಬಾಲಕಿ ಅಪರೂಪದ ಮೆದುಳಿನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ತುರ್ತು ಸಭೆ ನಡೆಸಿದ ಕೇರಳದ ಸಿ.ಎಂ

ಕೇರಳದಲ್ಲಿ ಮೆದುಳು ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನದಿ, ಕೆರೆ ಹಾಗೂ ಜಲಮೂಲಗಳಲ್ಲಿ ಸ್ನಾನ ಮಾಡುವಾಗ ಎಚ್ಚರಿಕೆ ವಹಿಸುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಸಿದ್ದಾರೆ.

ಪಿಣರಾಯಿ ವಿಜಯನ್ ಶುಕ್ರವಾರ ಸಭೆ ನಡೆಸಿದ್ದು, ಅಗತ್ಯ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಂಕು ಹರಡದಂತೆ ತಡೆಯಲು ಕಲುಷಿತ ನೀರಿನಲ್ಲಿ (ಜಲಮೂಲಗಳಲ್ಲಿ) ಸ್ನಾನ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಈಜುಕೊಳದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ಮಕ್ಕಳಲ್ಲಿ ಮೆದುಳು ಸೋಂಕು ದೃಢಪಡುತ್ತಿರುವುದರಿಂದ ಮಕ್ಕಳು ಈಜಲು ಹೋಗುವಾಗ ಎಚ್ಚರಿಕೆ ವಹಿಸಬೇಕು. ಈಜುಕೊಳದಲ್ಲಿ ಈಜುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಏನಿದು ಮೆದುಳು ಸೋಂಕು

ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಎನ್ನುವ ಅಪರೂಪದ ಮಿದುಳು ಸೋಂಕು ಕಲುಷಿತ ನೀರಿನಲ್ಲಿ ಕಂಡುಬರುವ ಅಮೀಬಾದಿಂದ ಬರುತ್ತದೆ. ಅಮೀಬಾ ಬ್ಯಾಕ್ಟೀರಿಯಾಗಳು ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಸಂಭವಿಸುತ್ತದೆ. 2023 ಮತ್ತು 2017ರಲ್ಲಿ ಕೇರಳದ ಕರಾವಳಿ ಅಲಪ್ಪುಳ ಜಿಲ್ಲೆಯಲ್ಲಿ ಈ ಸೋಂಕು ದೃಢಪಟ್ಟಿತ್ತು.

Read More
Next Story