ರಾಜ್ಯಸಭೆ:  ಎನ್‌ಡಿಎ ಬಹುಮತಕ್ಕೆ ನಾಲ್ಕು ಸ್ಥಾನ ಕೊರತೆ
x

ರಾಜ್ಯಸಭೆ: ಎನ್‌ಡಿಎ ಬಹುಮತಕ್ಕೆ ನಾಲ್ಕು ಸ್ಥಾನ ಕೊರತೆ


ರಾಜ್ಯಸಭೆ ಚುನಾವಣೆಗಳಲ್ಲಿ ಇತ್ತೀಚಿನ ಗೆಲುವಿನ ಬಳಿಕ ಎನ್‌ಡಿಎಗೆ ಬಹುಮತಕ್ಕೆ 4 ಸ್ಥಾನಗಳ ಕೊರತೆ ಇದೆ. ರಾಜ್ಯಸಭೆಯಲ್ಲಿ ಬಹುಮತಕ್ಕೆ 121 ಸ್ಥಾನ ಬೇಕಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚುವರಿ ಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಅನಿರೀಕ್ಷಿತ ಸ್ಥಾನ ಸೇರಿದಂತೆ 10 ರಾಜ್ಯಸಭೆ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಈ ಹಿಂದೆ ಬಿಜೆಪಿ 20 ರಾಜ್ಯಸಭೆ ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. 240 ರಾಜ್ಯಸಭೆ ಸ್ಥಾನಗಳಲ್ಲಿ 56 ಏಪ್ರಿಲ್‌ನಲ್ಲಿ ತೆರವಾದವು.

ನಾಲ್ಕು ಕಡಿಮೆ: 56 ಸದಸ್ಯರ ಪ್ರಮಾಣ ವಚನದ ಬಳಿಕ ಮೇಲ್ಮನೆಯಲ್ಲಿ ಎನ್‌ಡಿಎ ಬಲ 117 ಕ್ಕೆ ತಲುಪುತ್ತದೆ. ಬಿಜೆಪಿಯ ಸ್ವತಃ ಬಲ 97. ಬಿಜೆಪಿ ರಾಜ್ಯಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ 29 ಸದಸ್ಯರೊಂದಿಗೆ ಎರಡನೇ ಸ್ಥಾನದಲ್ಲಿದೆ. ಜಮ್ಮು ಮತ್ತು ಕಾಶ್ಮೀರದ ನಾಲ್ಕು ಸೇರಿದಂತೆ ರಾಜ್ಯಸಭೆಯಲ್ಲಿ ಐದು ಸ್ಥಾನಗಳು ಖಾಲಿ ಇವೆ.

ಅಡ್ಡ ಮತದಾನ: ಮೂರು ರಾಜ್ಯಗಳಲ್ಲಿ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 10 ಸ್ಥಾನ, ಕಾಂಗ್ರೆಸ್ ಮೂರು ಮತ್ತು ಸಮಾಜವಾದಿ ಪಕ್ಷ ಎರಡು ಸ್ಥಾನ ಗೆದ್ದಿದೆ. ಚುನಾವಣೆಯಲ್ಲಿ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ, ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಸೋಲುಂಡರು. ಬಿಜೆಪಿಯ ಹರ್ಷ್ ಮಹಾಜನ್ ಮತ್ತು ಸಿಂಘ್ವಿ ಇಬ್ಬರೂ 34 ಮತ ಗಳಿಸಿದ್ದರು. ಡ್ರಾದಲ್ಲಿ ಹರ್ಷ್ ಮಹಾಜನ್ ವಿಜೇತರಾದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಎಂಟು ಹಾಗೂ ಸಮಾಜವಾದಿ ಪಕ್ಷ ಎರಡು ಸ್ಥಾನ ಗೆದ್ದಿದೆ. ಕರ್ನಾಟಕದಲ್ಲಿ ನಿರೀಕ್ಷಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಮೂರು ಹಾಗೂ ಬಿಜೆಪಿ ಒಂದು ಸ್ಥಾನ ಗೆದ್ದುಕೊಂಡಿದೆ. ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದರು.

Read More
Next Story