ಟ್ರಕ್, ಜೀಪ್, ಮೋಟಾರ್ ಸೈಕಲ್ ಡಿಕ್ಕಿ: 9 ಸಾವು
x

ಟ್ರಕ್, ಜೀಪ್, ಮೋಟಾರ್ ಸೈಕಲ್ ಡಿಕ್ಕಿ: 9 ಸಾವು


ಕೈಮೂರ್ (ಬಿಹಾರ), ಫೆ.25- ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಟ್ರಕ್, ಜೀಪ್ ಮತ್ತು ಮೋಟಾರ್‌ಸೈಕಲ್ ನಡುವಿನ ಡಿಕ್ಕಿಯಲ್ಲಿ

ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ದೇವಕಾಲಿ ಗ್ರಾಮದ ಬಳಿಯ ಜಿ.ಟಿ. ರಸ್ತೆಯಲ್ಲಿ ಘಟನೆ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಜೀಪ್ , ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆಯಿತು. ಜೀಪ್ ಮತ್ತು ಬೈಕ್ ಎರಡೂ ಎದುರಿನ ಲೇನ್‌ಗೆ ತಿರುಗಿದವು. ವೇಗವಾಗಿ ಬಂದ ಟ್ರಕ್ ಈ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಬೈಕ್‌ ಸವಾರ ಸೇರಿದಂತೆ ಒಂಬತ್ತು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ,ʼ ಎಂದು ಮೊಹಾನಿಯಾ ಡಿಎಸ್ಪಿ ದಿಲೀಪ್ ಕುಮಾರ್ ಹೇಳಿದರು.

ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.

ಏತನ್ಮಧ್ಯೆ, ಬಿಹಾರ ಮುಖ್ಯಮಂತ್ರಿಗಳ ಕಚೇರಿ ಭಾನುವಾರ ತಡರಾತ್ರಿ ಬಿಡುಗಡೆ ಮಾ ಡಿರುವ ಹೇಳಿಕೆಯಲ್ಲಿ, ʻಮುಖ್ಯಮಂತ್ರಿ ಮೊಹಾನಿಯಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆʼ ಎಂದು ತಿಳಿಸಿದೆ.

Read More
Next Story