ಭಾರತ್‌ ಜೋಡೋ ನ್ಯಾಯ ಯಾತ್ರೆ ಒಂದು ವಾರ ಸ್ಥಗಿತ, ಕಾರಣವೇನು ?
x
ಭಾರತ್‌ ಜೋಡೋ ನ್ಯಾಯ ಯಾತ್ರೆ

ಭಾರತ್‌ ಜೋಡೋ ನ್ಯಾಯ ಯಾತ್ರೆ ಒಂದು ವಾರ ಸ್ಥಗಿತ, ಕಾರಣವೇನು ?

ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ ತಾತ್ಕಾಲಿಕ ಸ್ಥಗಿತ


ಕಾಂಗ್ರೆಸ್‌ ಮುಖಂಡ ಹಾಗೂ ಸಂಸದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆ ಒಂದು ವಾರದ ವರೆಗೆ ಸ್ಥಗಿತವಾಗಲಿದೆ.

ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.

ರಾಹುಲ್ ಗಾಂಧಿ ಅವರು ಅಲ್ಮಾ ಮೇಟರ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎರಡು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ. ಅಲ್ಲದೇ ನವದೆಹಲಿಯಲ್ಲಿ ನಡೆಯಲಿರುವ ಪ್ರಮುಖ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬುಧವಾರ ಕಾನ್ಪುರದ ಪಾದಯಾತ್ರೆ ಮುಗಿದ ನಂತರ ಮಾತನಾಡಿದ ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಫೆಬ್ರವರಿ 22 ಮತ್ತು 23 ರಂದು ವಿಶ್ರಾಂತಿ ಇರಲಿದೆ. ಫೆಬ್ರವರಿ 24ರ ಬೆಳಿಗ್ಗೆ ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ

ಯಾತ್ರೆ ಪುನರಾರಂಭವಾಗಲಿದೆ. ನಂತರ ರಾಜಸ್ಥಾನದ ಧೋಲ್‌ಪುರಕ್ಕೆ ಆಗಮಿಸುವ ಮೊದಲು ಸಂಭಾಲ್, ಅಲಿಗಢ, ಹತ್ರಾಸ್ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಯಾತ್ರೆ ಸಾಗಲಿದೆ ಎಂದು ರಮೇಶ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರು ಅಲ್ಮಾ ಮೇಟರ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ (ಯುಕೆ) ಫೆಬ್ರವರಿ 27 ಮತ್ತು ಫೆಬ್ರವರಿ 28 ರಂದು ಎರಡು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ. ಮಾರ್ಚ್ 2ರಂದು ಮಧ್ಯಾಹ್ನ 2 ಗಂಟೆಗೆ ಧೋಲ್‌ಪುರದಿಂದ ಪುನರಾರಂಭಗೊಳ್ಳಲಿದೆ ಎಂದಿದ್ದಾರೆ.

ಭಾರತ್‌ ಜೋಡೋ ನ್ಯಾಯ ಯಾತ್ರೆಯು 15 ರಾಜ್ಯಗಳ ಮೂಲಕ 6,700 ಕಿಲೋಮೀಟರ್ ಸಾಗುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

Read More
Next Story