ನಕಲಿ ಬಂದೂಕು, ಅಂಗರಕ್ಷಕಗಳೊಂದಿಗೆ ತಿರುಗಾಡುತ್ತಿದ್ದ  ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸ್ರರ್‌ ಬಂಧನ
x
ಬಂಧಿತ ಜೆ.ಪಿ.ನಗರದ ಅರುಣ್ ಕಠಾರೆ

ನಕಲಿ ಬಂದೂಕು, ಅಂಗರಕ್ಷಕ'ಗಳೊಂದಿಗೆ ತಿರುಗಾಡುತ್ತಿದ್ದ ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸ್ರರ್‌ ಬಂಧನ

ಬಂಧಿತ ಜೆ.ಪಿ.ನಗರದ ಅರುಣ್ ಕಠಾರೆ, ಮೂಲತಃ ಚಿತ್ರದುರ್ಗದವರಾಗಿದ್ದು, ಜೂನ್ 9 ರಂದು ನಕಲಿ ಗನ್ ಹಿಡಿದು ಅಂಗರಕ್ಷಕರಂತೆ ವೇಷ ಧರಿಸಿದ್ದ ಕೆಲವರೊಂದಿಗೆ ಚೊಕ್ಕನಹಳ್ಳಿಯ ಹೋಟೆಲ್‌ವೊಂದರಲ್ಲಿ ಸುತ್ತಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.


ಎಕೆ-47ಹೋಲುವ ನಕಲಿ ಬಂದೂಕುಗಳನ್ನು ಬಳಸಿ ತನ್ನ ‘ಅಂಗರಕ್ಷಕ’ರೊಂದಿಗೆ ಸಾರ್ವಜನಿಕವಾಗಿ ಸಂಚರಿಸಿ ಭಯ ಹುಟ್ಟಿಸಿದ್ದ 26 ವರ್ಷದ ‘ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸ್ರರ್‌ʼನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಜೆ.ಪಿ.ನಗರದ ಅರುಣ್ ಕಠಾರೆ, ಮೂಲತಃ ಚಿತ್ರದುರ್ಗದವರಾಗಿದ್ದು, ಜೂನ್ 9 ರಂದು ನಕಲಿ ಗನ್ ಹಿಡಿದು ಅಂಗರಕ್ಷಕರಂತೆ ವೇಷ ಧರಿಸಿದ್ದ ಕೆಲವರೊಂದಿಗೆ ಚೊಕ್ಕನಹಳ್ಳಿಯ ಹೋಟೆಲ್‌ವೊಂದರಲ್ಲಿ ಸುತ್ತಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ಆತನನ್ನು ಬಂಧಿಸಿದ್ದಾರೆ.

ಅರುಣ್ ಕಠಾರೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುವ ‘ಇನ್‌ಸ್ಟಾಗ್ರಾಂ ಇನ್‌ಪ್ಲ್ಯುನರ್‌ ಆಗಿದ್ದು, ನಕಲಿ ಆಭರಣ, ನಕಲಿ ಗನ್‌ಗಳು, ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ಮತ್ತು ಎಕೆ -47 ನಂತೆ ಕಾಣುವ ಆಟಿಕೆ ಗನ್‌ಗಳನ್ನು ಬಳಸಿಕೊಂಡು ಅಂಗರಕ್ಷಕರಂತೆ ವೇಷ ಧರಿಸಿದ್ದ ಕೆಲವರೊಂದಿಗೆ ರೀಲ್ಸ್‌ ಮಾಡುತ್ತಿದ್ದರು. ಜೂನ್ 9 ರಂದು ಸ್ಟಾರ್ ಹೋಟೆಲ್‌ಗೆ ಭೇಟಿ ನೀಡಿ ರೀಲ್ಸ್‌ಗಳನ್ನು ಚಿತ್ರೀಕರಿಸಲು ಪ್ರಯತ್ನಿಸಿದರು ಆದರೆ ಅಲ್ಲಿ ಅವರಿಗೆ ಅವಕಾಶ ನೀಡದ ಕಾರಣ ಭಾರತೀಯ ನಗರದ ಉದ್ಯಾನವನದ ಬಳಿ ಹೋಗಿ ರೀಲ್ ಮಾಡಿದ್ದಾರೆ. ಅದನ್ನೇ ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ರೀಲ್ ಗಳನ್ನು ಅಪ್ ಲೋಡ್ ಮಾಡುವ ಮೂಲಕ ತಿಂಗಳಿಗೆ ಸುಮಾರು 25 ಸಾವಿರದಿಂದ 30 ಸಾವಿರ ಆದಾಯ ಪಡೆಯುತ್ತಿದ್ದ ಎಂದು ಆತ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರವಾಸಿ ತಾಣಗಳಲ್ಲಿ ಚಿತ್ರೀಕರಿಸಿದ ರೀಲ್‌ಗಳಲ್ಲಿ ಕಠಾರೆ ಅವರೊಂದಿಗೆ ನಟಿಸಲು ವಿದೇಶಿಯರನ್ನು ಸಹ ನೇಮಿಸಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಈತನನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದು, ಈತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 290 (ಸಾರ್ವಜನಿಕ ತೊಂದರೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Read More
Next Story