ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ ಜಯಂತಮೂರ್ತಿ ಹೆಸರು
x
ಪ್ರೊ. ಜಯಂತ್ ಮೂರ್ತಿ

ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ 'ಜಯಂತಮೂರ್ತಿ' ಹೆಸರು

ಕ್ಷುದ್ರಗ್ರಹಕ್ಕೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಪ್ರೊ. ಜಯಂತ್ ಮೂರ್ತಿ ಅವರ ಹೆಸರನ್ನು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (IAU) ಕ್ಷುದ್ರಗ್ರಹಕ್ಕೆ ಇಡಲಾಗಿದೆ.


Click the Play button to hear this message in audio format

ಹೊಸದಿಲ್ಲಿ: ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (IAU)ವು ಕ್ಷುದ್ರಗ್ರಹಕ್ಕೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಪ್ರೊ. ಜಯಂತ್ ಮೂರ್ತಿ ಅವರ ಹೆಸರು ಇಟ್ಟಿದೆ.

ಐಐಎನ ನಿರ್ದೇಶಕರಾಗಿದ್ದ ವಿಜ್ಞಾನಿ 2021ರಲ್ಲಿ ನಿವೃತ್ತರಾಗಿದ್ದರು. ಈ ಹಿಂದೆ 2005 EX296 ಎಂದು ಹೆಸರಿಸಲಾಗಿದ್ದ ಕ್ಷುದ್ರಗ್ರಹವನ್ನು ಇನ್ನು ಮುಂದೆ ಜಯಂತಮೂರ್ತಿ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ ಎಂದು ಐಎಯು ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರೊ.ಮೂರ್ತಿ, "ಡಾ. ಅಲನ್ ಸ್ಟರ್ನ್ ನೇತೃತ್ವದ ನ್ಯೂ ಹೊರೈಜನ್ಸ್ ತಂಡದಲ್ಲಿ ನನ್ನ ಕೆಲಸವನ್ನು ಗುರುತಿಸಿ, ಕ್ಷುದ್ರಗ್ರಹಕ್ಕೆ ನನ್ನ ಹೆಸರನ್ನು ಇಟ್ಟಿರುವುದರಿಂದ ಸಂತಸಗೊಂಡಿದ್ದೇವೆ. ನಾನು ನ್ಯೂ ಹೊರೈಜನ್ಸ್‌ನಲ್ಲಿ ಆಲಿಸ್‌ನ ಎಕ್ಸ್‌ಟ್ರಾಗ್ಯಾಲಕ್ಟಿಕ್ ಲೈಟ್ ಸೇರಿದಂತೆ ಕಾಸ್ಮಿಕ್ ನೇರಳಾತೀತ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಜಯಂತಮೂರ್ತಿ ತಿಳಿಸಿದ್ದಾರೆ.

Read More
Next Story