ಆಂಧ್ರಪ್ರದೇಶ: ವೈದ್ಯೆ ಕಮರಿಗೆ ಬಿದ್ದು ಸಾವು
x

ಆಂಧ್ರಪ್ರದೇಶ: ವೈದ್ಯೆ ಕಮರಿಗೆ ಬಿದ್ದು ಸಾವು


ಆಸ್ಟ್ರೇಲಿಯದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದಆಂಧ್ರ ಮೂಲದ ಯು ವೈದ್ಯೆಯೊಬ್ಬರು ಕಾಲು ಜಾರಿ ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ.

ಕೃಷ್ಣಾ ಜಿಲ್ಲೆಯ ಡಾ.ಉಜ್ವಲಾ ವೇಮುರು (23), ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ನಲ್ಲಿರುವ ಬಾಂಡ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಬಿಎಸ್ ಮುಗಿಸಿ, ರಾಯಲ್ ಬ್ರಿಸ್ಬೇನ್ ಮಹಿಳಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸ್ನಾತಕೋತ್ತರ ಅಧ್ಯಯನ ಮುಂದುವರಿಸಲು ಯೋಜಿಸಿದ್ದರು.

ಆಕೆಯ ಪೋಷಕರಾದ ವೇಮುರು ಮೈಥಿಲಿ ಮತ್ತು ವೆಂಕಟೇಶ್ವರ್ ರಾವ್ ಅವರು ಹಲವು ವರ್ಷಗಳಿಂದ ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಉಜ್ವಲಾ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಹೋಗಿದ್ದರು. ಫೋಟೋ ತೆಗೆಯುವಾಗ ಟ್ರೈಪಾಡ್‌ ಕಟ್ಟೆ ಮೇಲೆ ಬಿದ್ದಿತು. ಟ್ರೈಪಾಡ್ ತೆಗೆಯುವ ಪ್ರಯತ್ನದಲ್ಲಿ ಜಾರಿ ಕಣಿವೆಗೆ ಬಿದ್ದರು. ರಕ್ಷಣಾ ತಂಡಗಳು ಆರು ಗಂಟೆಗಳ ಕಾಲ ಶ್ರಮಿಸಿ, ಅವರ ಶವ ತೆಗೆದರು.

ಆಕೆಯ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ಆಂಧ್ರದ ಉಂಗುಟುರು ಮಂಡಲದ ಎಲುಕಪಾಡುವಿನ ಅಜ್ಜಿಯ ಮನೆಗೆ ತರಲಾಗುತ್ತಿದೆ.

Read More
Next Story