ಭರೂಚ್‌ ಕ್ಷೇತ್ರ ಎಎಪಿಗೆ: ಅಸಮಾಧಾನ ತೋಡಿಕೊಂಡ ಅಹ್ಮದ್ ಪಟೇಲ್ ರ ಮಕ್ಕಳು
x

ಭರೂಚ್‌ ಕ್ಷೇತ್ರ ಎಎಪಿಗೆ: ಅಸಮಾಧಾನ ತೋಡಿಕೊಂಡ ಅಹ್ಮದ್ ಪಟೇಲ್ ರ ಮಕ್ಕಳು

ಗುಜರಾತಿನಲ್ಲಿ ಭರೂಚ್‌ ಕ್ಷೇತ್ರವನ್ನು ಎಎಪಿಗೆ ಬಿಟ್ಟುಕೊಡಲಾಗಿದ್ದು ಇದು ಆ ಕ್ಷೇತ್ರದ ಶಾಸಕರ ಮಕ್ಕಳ ಅಸಮಾಧಾನಕ್ಕೆ ಕಾರಣವಾಗಿದೆ


ಅಹಮದಾಬಾದ್, ಫೆ 24: ಗುಜರಾತ್‌ನಲ್ಲಿ ಸೀಟು ಹಂಚಿಕೆ ಸೂತ್ರಕ್ಕೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಶನಿವಾರ ಒಪ್ಪಿಗೆ ನೀಡಿದ್ದು, ಅದರ ಅಡಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಯು ಭರೂಚ್ ಮತ್ತು ಭಾವನಗರ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದೆ.

ಈ ನಿರ್ಧಾರವು 1970 ಮತ್ತು 1980 ರ ದಶಕಗಳಲ್ಲಿ ಮೂರು ಬಾರಿ ಭರೂಚ್ ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್ ನಾಯಕ ದಿವಂಗತ ಅಹ್ಮದ್ ಪಟೇಲ್ ಅವರ ಮಗ ಮತ್ತು ಮಗಳಾದ ಫೈಸಲ್ ಪಟೇಲ್ ಮತ್ತು ಮುಮ್ತಾಜ್ ಪಟೇಲ್ ಅವರಿಗೆ ಅಸಮಾಧಾನ ಹುಟ್ಟಿಸಿದೆ.

ಭರೂಚ್‌ನ ಎಎಪಿ ಅಭ್ಯರ್ಥಿ ಚೈತಾರ್ ವಾಸವಾ ಅವರು ಈ ಕ್ಷೇತ್ರದಿಂದ ತಮ್ಮ ಗೆಲುವು ಅಹ್ಮದ್ ಪಟೇಲ್‌ಗೆ ಗೌರವ ಎಂದು ಹೇಳಿದರೆ, ದಿವಂಗತ ನಾಯಕನ ಪುತ್ರ ಫೈಸಲ್ ಪಟೇಲ್ ಅವರು ಐಎನ್‌ಡಿಐಎ ಮೈತ್ರಿ ಒಪ್ಪಂದದಡಿಯಲ್ಲಿ ಸ್ಥಾನವನ್ನು ಬಿಟ್ಟುಕೊಡುವ ನಿರ್ಧಾರವು ಕಾಂಗ್ರೆಸ್ ಕಾರ್ಯಕರ್ತರಿಗೆ ಸಮಾಧಾನ ತಂದಿಲ್ಲ. ಅದಾಗ್ಯೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದು ಫೈಸಲ್ ಪಟೇಲ್ ಹೇಳಿದ್ದಾರೆ.

ಪಕ್ಷದ ಕೇಂದ್ರ ನಾಯಕತ್ವವನ್ನು ಭೇಟಿ ಮಾಡುವುದಾಗಿ ಪ್ರತಿಪಾದಿಸಿದ ಅವರು, "ನಾಮನಿರ್ದೇಶನ ಮತ್ತು ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಇನ್ನೂ ಬಹಳಷ್ಟು ಸಂಗತಿಗಳು ನಡೆಯಬಹುದು. ನನ್ನ ತಂದೆ ಭರೂಚ್ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇದು ನಮ್ಮ ಸ್ಥಾನ. ಕಾರ್ಯಕರ್ತರು ಮತ್ತು ನಾನು ಈ ಮೈತ್ರಿಗೆ ವಿರುದ್ಧವಾಗಿದ್ದೇವೆ ಆದರೆ ಪಕ್ಷ ಏನು ಹೇಳಿದರೂ ನಾವು ಸ್ವೀಕರಿಸುತ್ತೇವೆ ಎಂದು ಫೈಸಲ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದರು.

ಫೈಸಲ್ ಪಟೇಲ್ ಅವರು ಭರೂಚ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದರೆ ತಾವು ಗೆಲ್ಲುವುದಾಗಿ ಹೇಳಿಕೊಂಡಿದ್ದಾರೆ.

ಏತನ್ಮಧ್ಯೆ, ಮುಮ್ತಾಜ್ ಪಟೇಲ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದು, ಪಕ್ಷವನ್ನು ಬಲಪಡಿಸಲು ಮತ್ತೆ ಒಗ್ಗೂಡುವಂತೆ ಕರೆ ನೀಡಿದ್ದಾರೆ.

"ಮೈತ್ರಿಕೂಟದಲ್ಲಿ ಭರೂಚ್ ಲೋಕಸಭಾ ಸ್ಥಾನವನ್ನು ಪಡೆಯಲು ಸಾಧ್ಯವಾಗದಿದ್ದಕ್ಕಾಗಿ ನಮ್ಮ ಜಿಲ್ಲಾ ಕೇಡರ್‌ಗೆ ಆಳವಾದ ಕ್ಷಮೆಯಾಚಿಸುತ್ತೇನೆ. ನಿಮ್ಮ ನಿರಾಶೆಯನ್ನು ನಾನು ಹಂಚಿಕೊಳ್ಳುತ್ತೇನೆ. ಒಟ್ಟಾಗಿ, ಕಾಂಗ್ರೆಸ್‌ ಅನ್ನು ಬಲಪಡಿಸಲು ನಾವು ಮತ್ತೆ ಗುಂಪುಗೂಡುತ್ತೇವೆ. ಅಹಮದ್‌ ಪಟೇಲ್‌ ಅವರ 45 ವರ್ಷಗಳ ಪರಂಪರೆಯನ್ನು ನಾವು ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ದಾರೆ.

ಈ ನಡುವೆ, ಎಎಪಿ ದೇಡಿಯಾಪದ ಶಾಸಕ ವಾಸವ ತನ್ನನ್ನು ಭರೂಚ್‌ನಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು.

"ನಾನು ಕಾಂಗ್ರೆಸ್‌ನ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಧನ್ಯವಾದ ಹೇಳುತ್ತೇನೆ. ನಾನು ಸ್ಥಾನವನ್ನು ಗೆಲ್ಲುತ್ತೇನೆ ಎಂದು ಭರವಸೆ ನೀಡುತ್ತೇನೆ, ಇದು ಅಹ್ಮದ್ ಪಟೇಲ್‌ಗೆ ಗೌರವವಾಗಿದೆ. ನಮ್ಮ ಸಂಪೂರ್ಣ ಪ್ರಯತ್ನ ಬಿಜೆಪಿಯನ್ನು ಸೋಲಿಸುವುದು" ಎಂದು ವಾಸವ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾವನಗರ ಲೋಕಸಭಾ ಕ್ಷೇತ್ರದಿಂದ ಬೋಟಾಡ್ ಶಾಸಕ ಉಮೇಶ್ ಮಕ್ವಾನಾ ಅಭ್ಯರ್ಥಿಯಾಗಲಿದ್ದಾರೆ ಎಂದು ಆಮ್ ಆದ್ಮಿ ಘೋಷಿಸಿದೆ.

2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಎಲ್ಲಾ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಕಾಂಗ್ರೆಸ್ ಮತ್ತು ಎಎಪಿ ನಡುವೆ ಶನಿವಾರ ನಡೆದ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಸಂಘಟನೆಯು ಗುಜರಾತ್‌ನ ಭರೂಚ್ ಮತ್ತು ಭಾವನಗರ ಮತ್ತು ಹರಿಯಾಣದ ಕುರುಕ್ಷೇತ್ರದಿಂದ ಸ್ಪರ್ಧಿಸಲಿದೆ.

ದೆಹಲಿಯ ಏಳು ಸ್ಥಾನಗಳ ಪೈಕಿ ನಾಲ್ಕರಲ್ಲಿ ಎಎಪಿ ಸ್ಪರ್ಧಿಸಲಿದೆ, ಗೋವಾದ ಎರಡೂ ಸ್ಥಾನಗಳಲ್ಲಿ, ಚಂಡೀಗಢದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.

Read More
Next Story