ಗ್ರಾಹಕರಿಗೆ ಬಿಸಿ ಮತ್ತು ಆರೋಗ್ಯಕರ ಆಹಾರ ನೀಡದ ರೆಸ್ಟೋರೆಂಟ್‌ಗೆ 7000 ರೂ ದಂಡ!
x
ಉಡುಪಿ ಗಾರ್ಡನ್ ರೆಸ್ಟೋರೆಂಟ್‌ಗೆ 7,000 ರೂಪಾಯಿ ದಂಡ ವಿಧಿಸಲಾಗಿದೆ.

ಗ್ರಾಹಕರಿಗೆ ಬಿಸಿ ಮತ್ತು ಆರೋಗ್ಯಕರ ಆಹಾರ ನೀಡದ ರೆಸ್ಟೋರೆಂಟ್‌ಗೆ 7000 ರೂ ದಂಡ!

ಬೆಂಗಳೂರು ನಗರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಬಳಿಯ ರೆಸ್ಟೋರೆಂಟ್‌ನಲ್ಲಿ ಮಹಿಳಾ ಗ್ರಾಹಕರಿಗೆ ಬಿಸಿ ಮತ್ತು ಆರೋಗ್ಯಕರ ಆಹಾರವನ್ನು ನೀಡಲು ವಿಫಲವಾದ ಕಾರಣಕ್ಕಾಗಿ ದಂಡ ವಿಧಿಸಲಾಗಿದೆ.


Click the Play button to hear this message in audio format

ಬೆಂಗಳೂರು ನಗರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಬಳಿಯ ರೆಸ್ಟೋರೆಂಟ್‌ನಲ್ಲಿ ಮಹಿಳಾ ಗ್ರಾಹಕರಿಗೆ ಬಿಸಿ ಮತ್ತು ಆರೋಗ್ಯಕರ ಆಹಾರವನ್ನು ನೀಡಲು ವಿಫಲವಾದ ಕಾರಣಕ್ಕಾಗಿ ದಂಡ ವಿಧಿಸಲಾಗಿದೆ.

ಗ್ರಾಹಕರಿಗೆ ಬಿಸಿ ಮತ್ತು ಆರೋಗ್ಯಕರ ಆಹಾರವನ್ನು ನೀಡಲು ವಿಫಲವಾದ ಕಾರಣ ಮೊದಲ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಆಯೋಗವು ತನ್ನ ತೀರ್ಪಿನಲ್ಲಿ ಗ್ರಾಹಕ ಹಕ್ಕು ಮತ್ತು ಸೇವಾ ಗುಣಮಟ್ಟದ ಬಗ್ಗೆ ತೀರ್ಪು ನೀಡಿದ್ದು, ಜೂನ್ 19 ರಂದು ತನ್ನ ಆದೇಶದಲ್ಲಿ ಬೆಂಗಳೂರು ನಗರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಉಡುಪಿ ಗಾರ್ಡನ್ ರೆಸ್ಟೋರೆಂಟ್‌ಗೆ 7,000 ರೂಪಾಯಿ ದಂಡ ವಿಧಿಸಿದೆ.

ಘಟನೆಯ ವಿವರ

ಬೆಂಗಳೂರಿನ ಕೋರಮಂಗಲದ ನಿವಾಸಿ 56 ವರ್ಷದ ತಹರಾ ಎಂಬ ಮಹಿಳೆ ಈ ಪ್ರಕರಣವನ್ನು ಹೊರ ತಂದಿದ್ದಾರೆ. ತಹರಾ ಜುಲೈ 30, 2022 ರಂದು ಕುಟುಂಬ ಪ್ರವಾಸಕ್ಕಾಗಿ ಹಾಸನಕ್ಕೆ ತೆರಳುತ್ತಿದ್ದರು. ಈ ವೇಳೆ ಉಡುಪಿ ಗಾರ್ಡನ್‌ ರೆಸ್ಟೋರೆಂಟ್‌ಗೆ ಉಪಹಾರಕ್ಕಾಗಿ ತೆರಳಿದ್ದರು. ಅಲ್ಲಿ ಅವರಿಗೆ ನೀಡಿದ ಆಹಾರ ಬಿಸಿ ಇರಲಿಲ್ಲ ಹಾಗೂ ತಾಜಾವಾಗಿಲ್ಲ ಎಂದು ಆರೋಪಿಸಿ ಬದಲಿ ಊಟ ನೀಡುವಂತೆ ಮನವಿ ಮಾಡಿದ್ದರು. ಆದರೆ ರೆಸ್ಟೋರೆಂಟ್‌ ಸಿಬ್ಬಂದಿ ಅದೇ ರೀತಿ ನೀಡಲಾಗುವುದಿಲ್ಲ ಎಂದು ಅಸಭ್ಯವಾಗಿ ಹೇಳಿದ್ದಾರೆ. ತನಗೆ ಅಧಿಕ ರಕ್ತದೊತ್ತಡವಿದ್ದು, ರೆಸ್ಟೊರೆಂಟ್‌ನಲ್ಲಿ ಆಹಾರ ಸಿಗದ ಕಾರಣ ಔಷಧವನ್ನೂ ಸೇವಿಸಲು ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣದ ಅಧ್ಯಕ್ಷತೆ ವಹಿಸಿದ್ದ ಆಯೋಗದ ಅಧ್ಯಕ್ಷ ಬಿ ನಾರಾಯಣಪ್ಪ, ಉಡುಪಿ ಗಾರ್ಡನ್ ರೆಸ್ಟೋರೆಂಟ್ ಸೇವಾ ಪೂರೈಕೆಯಲ್ಲಿ ಲೋಪ ಎಸಗಿದೆ ಎಂದು ವರದಿ ತಿಳಿಸಿದೆ. ಸೇವಾ ಗುಣಮಟ್ಟದಲ್ಲಿನ ಲೋಪಕ್ಕಾಗಿ ₹ 5,000 ದಂಡ ಮತ್ತು ವ್ಯಾಜ್ಯ ವೆಚ್ಚವನ್ನು ಸರಿದೂಗಿಸಲು ಹೆಚ್ಚುವರಿ ₹ 2,000 ಉಡುಪಿ ರೆಸ್ಟೋರೆಂಟ್‌ಗೆ ವಿಧಿಸಲಾಗಿದೆ.

Read More
Next Story