ಕುನೋದಲ್ಲಿ ಚಿರತೆ ಜನ್ಮ ನೀಡಿದ್ದು 6 ಮರಿಗಳಿಗೆ : ಸಚಿವ
x

ಕುನೋದಲ್ಲಿ ಚಿರತೆ ಜನ್ಮ ನೀಡಿದ್ದು 6 ಮರಿಗಳಿಗೆ : ಸಚಿವ


ಆಫ್ರಿಕಾದ ಚಿರತೆ ಗಾಮಿನಿ ಆರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ.

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನ(ಕೆಎನ್‌ಪಿ)ದಲ್ಲಿ ದಕ್ಷಿಣ ಆಫ್ರಿಕಾದ ಚಿರತೆ ಗಾಮಿನಿ(5) ಆರು ಮರಿಗಳಿಗೆ ಜನ್ಮ ನೀಡಿದೆ ಎಂದು ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಅವರು ಗಾಮಿನಿ 5 ಮರಿಗಳಿಗೆ ಜನ್ಮ ನೀಡಿದೆ ಎಂದು ಹೇಳಿದ್ದರು. ಇದರೊಂದಿಗೆ ಕುನೋದಲ್ಲಿ 14 ಮರಿಗಳು ಸೇರಿದಂತೆ ಚಿರತೆಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.

ಸಾವಿನ ಸರಣಿ: ಕಳೆದ ಮಾರ್ಚ್‌ನಲ್ಲಿ ಚಿರತೆ ಜ್ವಾಲಾ (ನಮೀಬಿಯಾದ ಹೆಸರು ಸಿಯಾಯಾ) ಜನ್ಮ ನೀಡಿದ್ದ ನಾಲ್ಕು ಮರಿಗಳಲ್ಲಿ ಒಂ ದು ಮಾತ್ರ ಬದುಕುಳಿದಿತ್ತು. ಆನಂತರ ಜ್ವಾಲಾ ಜನವರಿಯಲ್ಲಿ ಎರಡು ಹಾಗೂ ಆಶಾ ಮೂರು ಮರಿಗಳಿಗೆ ಜನ್ಮ ನೀಡಿದವು. ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ನಮೀಬಿಯಾದಿಂದ ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಸೆಪ್ಟೆಂಬರ್ 17, 2022 ರಂದು ಕಿನೋದಲ್ಲಿ ಬಿಡುಗಡೆ ಮಾಡಲಾಯಿತು. ಫೆಬ್ರವರಿ 2023 ರಲ್ಲಿ ದಕ್ಷಿಣ ಆಫ್ರಿಕದಿಂದ ಗಾಮಿನಿ ಸೇರಿದಂತೆ 12 ಚಿರತೆಗಳನ್ನು ತರಲಾಯಿತು.

2023ರ ಮಾರ್ಚ್‌ನಿಂದ ಜ್ವಾಲಾಗೆ ಜನಿಸಿದ ಮೂರು ಮರಿ ಸೇರಿದಂತೆ 10 ಚಿರತೆಗಳು ಕುನೋದಲ್ಲಿ ಸಾವಿಗೀಡಾಗಿವೆ.

Read More
Next Story