
ಅರುಣಾಚಲ ಪ್ರದೇಶ: ಕಾಂಗ್ರೆಸ್- ಎನ್‌ಪಿಪಿ ಶಾಸಕರು ಬಿಜೆಪಿ ಸೇರ್ಪಡೆ
ಇಟಾನಗರ, ಫೆ.25- ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಯ ತಲಾ ಇಬ್ಬರು ಶಾಸಕರು ಭಾನುವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
60 ಸದಸ್ಯರ ವಿಧಾನಸಭೆಯಲ್ಲಿ ಈಗ ಕಾಂಗ್ರೆಸ್ ಮತ್ತು ಎನ್‌ಪಿಪಿ ತಲಾ ಇಬ್ಬರು ಶಾಸಕರನ್ನು ಹೊಂದಿವೆ. ಇಲ್ಲಿಯ ಪ್ರಧಾನ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಕೇಂದ್ರ ಸಚಿವ ನಿನೊಂಗ್ ಎರಿಂಗ್ ಮತ್ತು ವಾಂಗ್ಲಿನ್ ಲೋವಾಂಗ್‌ಡಾಂಗ್ ಮತ್ತು ಎನ್‌ಪಿಪಿಯ ಮುಚು ಮಿಥಿ ಮತ್ತು ಗೋಕರ್ ಬಾಸರ್ ಅವರು ಬಿಜೆಪಿಯನ್ನು ಸೇರಿದರು. ಮುಖ್ಯಮಂತ್ರಿ ಪೇಮಾ ಖಂಡು, ರಾಜ್ಯ ಬಿಜೆಪಿ ಅಧ್ಯಕ್ಷ ಬಿಯೂರಾಮ್ ವಾಗೆ ಉಪಸ್ಥಿತರಿದ್ದರು.
ಈ ವರ್ಷಾಂತ್ಯ ಈಶಾನ್ಯ ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಯಲಿವೆ.
Next Story