x

6 ದಿನದಲ್ಲೇ 55 ಲಕ್ಷ ಫಾಲೋವರ್ಸ್ ಪಡೆದ 'ರಿಸರ್ವೇಶನ್ ಹಠಾವೋ ಆಂದೋಲನ'

ಕೇವಲ ಆರು ದಿನಗಳಲ್ಲಿ ಸುಮಾರು 55 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿಸಿರುವ ಈ ಇನ್‌ಸ್ಟಾಗ್ರಾಂ ಅಭಿಯಾನ, ದೇಶಾದ್ಯಂತ ಮೀಸಲಾತಿ ನೀತಿ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.


Click the Play button to hear this message in audio format

ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಜೆನ್‌ಜಿ (Gen Z) ಪ್ರತಿಭಟನೆ ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ ಬಳಿಕ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ರೀತಿಯ ವಿಷಯಾಧಾರಿತ ಡಿಜಿಟಲ್ ಚಳವಳಿಗಳು ಒಂದರ ಹಿಂದೆ ಒಂದರಂತೆ ಹುಟ್ಟಿಕೊಳ್ಳುತ್ತಿವೆ. ಅವುಗಳಲ್ಲಿ ಹೆಚ್ಚು ಗಮನ ಸೆಳೆದಿರುವುದು 'ರಿಸರ್ವೇಶನ್ ಹಠಾವೋ ಆಂದೋಲನ' (Reservation Hatao Andolan - RHA).

ಕೇವಲ ಆರು ದಿನಗಳಲ್ಲಿ ಸುಮಾರು 55 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿಸಿರುವ ಈ ಇನ್‌ಸ್ಟಾಗ್ರಾಂ ಅಭಿಯಾನ, ದೇಶಾದ್ಯಂತ ಮೀಸಲಾತಿ ನೀತಿ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.

ರಿಸರ್ವೇಶನ್ ಹಟಾವೋ ಆಂದೋಲನ ಎಂದರೇನು?

ಲಭ್ಯವಿರುವ ಮಾಹಿತಿಯ ಪ್ರಕಾರ, ರಿಸರ್ವೇಶನ್‌ ಹಠಾವೋ ಆಂದೋಲನವನ್ನು ಯಾವುದೇ ಒಬ್ಬ ವ್ಯಕ್ತಿ ಅಥವಾ ರಾಜಕೀಯ ನಾಯಕ ಆರಂಭಿಸಿಲ್ಲ. ಇದು @reservationhataomovement ಎಂಬ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಆರಂಭವಾದ ಯುವಜನರ ನೇತೃತ್ವದ ಡಿಜಿಟಲ್ ಅಭಿಯಾನವಾಗಿದೆ. 2026ರ ಜುಲೈನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಅದರ ಬಳಿಕ ನಡೆದ ಬೆಳವಣಿಗೆಗಳ ನಂತರ ಈ ಅಭಿಯಾನ ವೇಗವಾಗಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ಖಾತೆಯ ಪ್ರೊಫೈಲ್‌ನಲ್ಲಿ "ಸುಧಾರಣೆಗೆ ಧ್ವನಿ ಇರಬೇಕು ಎಂದು ನಂಬುವ ನಾಗರಿಕರ ಬೆಂಬಲದ ಚಳವಳಿ" ಎಂದು ತನ್ನನ್ನು ಪರಿಚಯಿಸಿಕೊಂಡಿದೆ. ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಸಿದ್ಧ ಘೋಷವಾಕ್ಯ "Educate, Agitate, Organize" ಅನ್ನೂ ಬಳಸಲಾಗಿದೆ.

ರಾಜಕೀಯ ಪಕ್ಷಗಳೊಂದಿಗೆ ಸಂಬಂಧವಿಲ್ಲ ಎಂಬ ಸ್ಪಷ್ಟನೆ

ಈ ಅಭಿಯಾನ ನಡೆಸುತ್ತಿರುವವರು ತಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, "ಸರ್ಕಾರ ಬದಲಾದರೆ ಮೀಸಲಾತಿ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಆಗಬಹುದು ಎಂದು ನಾವು ಸೇರಿದಂತೆ ಅನೇಕ ನಾಗರಿಕರು ನಿರೀಕ್ಷಿಸಿದ್ದೆವು. ಆದರೆ ಬಿಜೆಪಿ ಸರ್ಕಾರವೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಆದ್ದರಿಂದ ಇದು ಯಾವುದೇ ಪಕ್ಷದ ವಿರುದ್ಧದ ಹೋರಾಟವಲ್ಲ; ಇದು ನೀತಿ ಬದಲಾವಣೆಗೆ ಸಂಬಂಧಿಸಿದ ನಾಗರಿಕರ ಅಭಿಯಾನ" ಎಂದು ಹೇಳಿದ್ದಾರೆ.

ಪ್ರಮುಖ ಬೇಡಿಕೆಗಳೇನು?

ರಿಸರ್ವೇಶನ್ ಹಠಾವೋ ಆಂದೋಲನವು ಜಾತಿ ಆಧಾರಿತ ಗುರುತಿನ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದು ಒತ್ತಾಯಿಸುತ್ತಿದೆ.

ಅವರ ಪ್ರಕಾರ,

• ಸರ್ಕಾರಿ ಅರ್ಜಿಗಳಲ್ಲಿ ಜಾತಿ ನಮೂದಿಸುವ ಪದ್ಧತಿ ನಿಲ್ಲಬೇಕು.

• ಶಿಕ್ಷಣ ಸಂಸ್ಥೆಗಳ ಪ್ರವೇಶ ಅರ್ಜಿಗಳಲ್ಲಿ ಜಾತಿ ದಾಖಲಿಸುವ ಅವಶ್ಯಕತೆ ಇರಬಾರದು.

• ಸರ್ಕಾರಿ ಉದ್ಯೋಗ ಅರ್ಜಿಗಳಲ್ಲೂ ಜಾತಿ ಮಾಹಿತಿ ಕೇಳಬಾರದು.

• ಸಾರ್ವಜನಿಕ ಜೀವನದಲ್ಲಿ ಜಾತಿಯ ಗುರುತಿಗೆ ಮಾನ್ಯತೆ ನೀಡುವುದನ್ನು ನಿಲ್ಲಿಸಬೇಕು.

Read More
Next Story