ಊಟ ತುಂಬಾ ಖಾರ ಇದೆ… ಚಿಕನ್, ಪಾಸ್ತಾ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ ಕೈದಿ
ಭಾರತದಲ್ಲಿ ಉಗ್ರ ಕೃತ್ಯಗಳಿಗೆ ಜನರನ್ನು ನೇಮಕ ಮಾಡಿ, ತರಬೇತಿ ನೀಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಅಮೆರಿಕನ್ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ.
ದೆಹಲಿಯ ಹೈ-ಸೆಕ್ಯುರಿಟಿ ತಿಹಾರ್ ಜೈಲಿನಲ್ಲಿರೋ ಒಬ್ಬ ಅಮೆರಿಕನ್ ಕೈದಿ, ಕೋರ್ಟ್ ಮೆಟ್ಟಿಲೇರಿ ವಿಚಿತ್ರ ಬೇಡಿಕೆಯೊಂದನ್ನ ಇಟ್ಟಿದ್ದಾನೆ. ಭಾರತದಲ್ಲಿ ಉಗ್ರ ಕೃತ್ಯಗಳಿಗೆ ಜನರನ್ನು ನೇಮಕ ಮಾಡಿ, ತರಬೇತಿ ನೀಡುತ್ತಿದ್ದ ಆರೋಪದ ಮೇಲೆ ಎನ್‌ಐಎಯಿಂದ ಬಂಧಿತನಾಗಿರೋ ಅಮೆರಿಕನ್ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಈ ಬೇಡಿಕೆ ಇಟ್ಟವನು.
ಜೈಲಿನ ಊಟ ತುಂಬಾ ಖಾರ ಮತ್ತು ಎಣ್ಣೆಯಾಗಿದೆ. ಕಳೆದ 50 ದಿನಗಳಿಂದ ಸರಿಯಾಗಿ ಊಟವೇ ಮಾಡಲಾಗುತ್ತಿಲ್ಲ ಎಂದು ಆತ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಅಷ್ಟೇ ಅಲ್ಲ... ಜೈಲಿನಲ್ಲೇ ತಾನೇ ಅಡುಗೆ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾನೆ.ಚಿಕನ್, ಪಾಸ್ತಾ, ಶ್ರಿಂಪ್‌ಗಳಂತಹ ಅಮೆರಿಕನ್ ಶೈಲಿಯ ಸರಳ ಆಹಾರ ತಯಾರಿಸಿಕೊಳ್ಳಲು ಕಚ್ಚಾ ಪದಾರ್ಥಗಳು ಮತ್ತು ಅಡುಗೆ ಸಾಮಗ್ರಿ ನೀಡುವಂತೆ ಕೋರಿದ್ದಾನೆ.
ಆದರೆ ತಿಹಾರ್ ಜೈಲು ನಿಯಮಗಳ ಪ್ರಕಾರ, ಎಲ್ಲ ಕೈದಿಗಳೂ ಜೈಲಿನ ಅಡುಗೆಮನೆಯಲ್ಲೇ ತಯಾರಾಗುವ ಆಹಾರವನ್ನೇ ಸೇವಿಸಬೇಕು. ಈಗ ಕೋರ್ಟ್ ಈ ಬಗ್ಗೆ ಜೈಲು ಆಡಳಿತದ ಬಳಿ ವರದಿ ಕೇಳಿದೆ.
Next Story

