ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಹತ್ಯೆ; ಸೇವಾ ಬಂದೂಕು ನಾಪತ್ತೆ, ಉಗ್ರರ ಕೈವಾಡದ ಶಂಕೆ
ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಮೃತದೇಹಗಳು ಪತ್ತೆಯಾಗಿವೆ. ರಶ್‌ಪಾಲ್ ಸಿಂಗ್ ಮತ್ತು ಬಾಬಿ ಚಂದ್ ಅವರ ದೇಹಗಳ ಮೇಲೆ ಹಲವು ಗುಂಡಿನ ಗಾಯಗಳಿದ್ದು, ಸೇವಾ ಬಂದೂಕುಗಳೂ ನಾಪತ್ತೆಯಾಗಿವೆ.
ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಮೃತದೇಹಗಳು ಪತ್ತೆಯಾಗಿವೆ. ರಶ್‌ಪಾಲ್ ಸಿಂಗ್ ಮತ್ತು ಬಾಬಿ ಚಂದ್ ಅವರ ದೇಹಗಳ ಮೇಲೆ ಹಲವು ಗುಂಡಿನ ಗಾಯಗಳಿದ್ದು, ಸೇವಾ ಬಂದೂಕುಗಳೂ ನಾಪತ್ತೆಯಾಗಿವೆ. ಅಪಹರಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಉಗ್ರರ ಕೈವಾಡದ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ. ಭದ್ರತಾ ಪಡೆಗಳಿಂದ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
Next Story
