
ತಿರುವನಂತಪುರಂ ವಿಮಾನ ನಿಲ್ದಾಣವನ್ನು 1932ರಲ್ಲಿ ಸ್ಥಾಪಿಸಿದಾಗಿನಿಂದಲೂ, ವರ್ಷಕ್ಕೆ ಎರಡು ಬಾರಿ (ಅಲ್ಪಾಸಿ ಮತ್ತು ಪೈಂಕುನಿ ಉತ್ಸವಗಳ ವೇಳೆ) ಈ ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ.
ವಿಮಾನ ನಿಲ್ದಾಣದ ರನ್‌ವೇಯಲ್ಲಿ ದೇವರ ಮೆರವಣಿಗೆ: ಐದು ಗಂಟೆಗಳ ಕಾಲ ವಿಮಾನ ಸಂಚಾರ ಸ್ಥಗಿತ
ತಿರುವನಂತಪುರಂ ವಿಮಾನ ನಿಲ್ದಾಣವನ್ನು 1932ರಲ್ಲಿ ಸ್ಥಾಪಿಸಿದಾಗಿನಿಂದಲೂ, ವರ್ಷಕ್ಕೆ ಎರಡು ಬಾರಿ (ಅಲ್ಪಾಸಿ ಮತ್ತು ಪೈಂಕುನಿ ಉತ್ಸವಗಳ ವೇಳೆ) ಈ ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ.
ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಪ್ರಸಿದ್ಧ 'ಪೈಂಕುನಿ ಆರಾಟ್ಟು' (Painkuni Arattu) ಮೆರವಣಿಗೆಯ ಹಿನ್ನೆಲೆಯಲ್ಲಿ, ಏಪ್ರಿಲ್ 2ರಂದು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ದೇವರ ಮೆರವಣಿಗೆಯು ಸುಗಮವಾಗಿ ವಿಮಾನ ನಿಲ್ದಾಣದ ರನ್‌ವೇಯನ್ನು ದಾಟಿ ಪವಿತ್ರ ಸ್ನಾನಕ್ಕಾಗಿ ಶಂಖುಮುಖಂ ಕಡಲತೀರಕ್ಕೆ ತೆರಳಲು ಅನುಕೂಲವಾಗುವಂತೆ, ಸಂಜೆ 4. 45 ರಿಂದ ರಾತ್ರಿ 9 ಗಂಟೆಯವರೆಗೆ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಈ ಸಂಬಂಧ ವಿಮಾನ ನಿಲ್ದಾಣ ಪ್ರಾಧಿಕಾರವು ಪ್ರಯಾಣಿಕರ ಮತ್ತು ಮೆರವಣಿಗೆಯ ಸುರಕ್ಷತೆಯ ಹಿತದೃಷ್ಟಿಯಿಂದ ಮುಂಚಿತವಾಗಿಯೇ ಅಧಿಕೃತ ನೋಟಾಮ್ (NOTAM) ಹೊರಡಿಸಿತ್ತು.
ರಾಜರ ಕಾಲದ ಐತಿಹಾಸಿಕ ಸಂಪ್ರದಾಯದ ಮುಂದುವರಿಕೆ
ತಿರುವನಂತಪುರಂ ವಿಮಾನ ನಿಲ್ದಾಣವನ್ನು 1932ರಲ್ಲಿ ಸ್ಥಾಪಿಸಿದಾಗಿನಿಂದಲೂ, ವರ್ಷಕ್ಕೆ ಎರಡು ಬಾರಿ (ಅಲ್ಪಾಸಿ ಮತ್ತು ಪೈಂಕುನಿ ಉತ್ಸವಗಳ ವೇಳೆ) ಈ ಸಂಪ್ರದಾಯವನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯಾದ ಅದಾನಿ ಗ್ರೂಪ್ ವಹಿಸಿಕೊಂಡಿದ್ದರೂ, ತಿರುವಾಂಕೂರು ರಾಜರು ಹುಟ್ಟುಹಾಕಿದ್ದ ಈ ಪುರಾತನ ಪರಂಪರೆಯನ್ನು ಅದೇ ಗೌರವದಿಂದ ಮುಂದುವರಿಸಲಾಗುತ್ತಿದೆ. ಆಧುನಿಕ ಯುಗದಲ್ಲೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೊಂದು ದೇವರ ಉತ್ಸವಕ್ಕಾಗಿ ತನ್ನ ಗಡಿಯೊಳಗೆ ಅನುವು ಮಾಡಿಕೊಡುವುದು ಕೇರಳದ ಸಾಂಸ್ಕೃತಿಕ ನಿರಂತರತೆಗೆ ಸಾಕ್ಷಿಯಾಗಿದೆ.
ರನ್‌ವೇಯಲ್ಲಿ ಗಜಪಡೆ ಮತ್ತು ಆಕರ್ಷಕ ದೃಶ್ಯವೈಭವ
ಹೊರಬಂದಿರುವ ವಿಡಿಯೋ ತುಣುಕುಗಳಲ್ಲಿ, ಮಳೆಯಿಂದ ಕೊಂಚ ಒದ್ದೆಯಾದ ರನ್‌ವೇ ಮೇಲೆ ಸಂಜೆಯ ಹೊತ್ತಿನಲ್ಲಿ ಸಾಗಿದ ಈ ಭವ್ಯ ಮೆರವಣಿಗೆಯ ಅದ್ಭುತ ದೃಶ್ಯಗಳು ಸೆರೆಯಾಗಿವೆ. ದೇವರ ಮೂರ್ತಿಗಳನ್ನು ಹೊತ್ತ ಶೃಂಗಾರಗೊಂಡ ಆನೆಗಳು, ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಅರ್ಚಕರು ಹಾಗೂ ಕುದುರೆಯನ್ನೇರಿದ ಪೊಲೀಸರು ರನ್‌ವೇಯಲ್ಲಿ ರಾಜಗಾಂಭೀರ್ಯದಿಂದ ಸಾಗಿದ್ದು ವಿಶೇಷವಾಗಿತ್ತು. ಈ ಪವಿತ್ರ ಮೆರವಣಿಗೆಗೆ ವಿಮಾನ ನಿಲ್ದಾಣದ ಅಗ್ನಿಶಾಮಕ ವಾಹನಗಳು ಬೆಂಗಾವಲಾಗಿ ಸಾಗಿದೆ.

