Thalapathy Vijay| ದಳಪತಿ ವಿಜಯ್ ಅಭಿನಯದ ಜನ ನಾಯಕನ್ ಕ್ಲಿಪ್ ಸೋರಿಕೆ; ಆಕ್ರೋಶಗೊಂಡ ಅಭಿಮಾನಿಗಳು
x

'ಜನ ನಾಯಕನ್' ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ಪ್ರಮುಖ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಸಿನಿಮಾ ತಂಡ ಹಾಗೂ ಅಭಿಮಾನಿಗಳಲ್ಲಿ ಭಾರೀ ಆತಂಕ ಮೂಡಿಸಿದೆ.

Thalapathy Vijay| ದಳಪತಿ ವಿಜಯ್ ಅಭಿನಯದ 'ಜನ ನಾಯಕನ್' ಕ್ಲಿಪ್ ಸೋರಿಕೆ; ಆಕ್ರೋಶಗೊಂಡ ಅಭಿಮಾನಿಗಳು

ದಲಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಕನ್' ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಚಿತ್ರತಂಡವು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.


Click the Play button to hear this message in audio format

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರು ರಾಜಕೀಯ ಪ್ರವೇಶಿಸಿದ ನಂತರ ಅಭಿನಯಿಸುತ್ತಿರುವ ಕೊನೆಯ ಚಿತ್ರ 'ಜನ ನಾಯಕನ್' ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಬಿಡುಗಡೆಗೂ ಮುನ್ನವೇ ಚಿತ್ರದ ಪ್ರಮುಖ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಸಿನಿಮಾ ತಂಡ ಹಾಗೂ ಅಭಿಮಾನಿಗಳಲ್ಲಿ ಭಾರೀ ಆತಂಕ ಮೂಡಿಸಿದೆ.

ಸೋರಿಕೆಯಾಗಿರುವ ಸುಮಾರು ಐದು ನಿಮಿಷಗಳ ವಿಡಿಯೋ ತುಣುಕಿನಲ್ಲಿ ಚಿತ್ರದ ಆರಂಭದ ಟೈಟಲ್ ಕಾರ್ಡ್‌ಗಳು ಹಾಗೂ ವಿಜಯ್ ಅವರ ಭರ್ಜರಿ ಇಂಟ್ರೊಡಕ್ಷನ್ ದೃಶ್ಯಗಳು ಸೇರಿವೆ ಎನ್ನಲಾಗಿದೆ. ಈ ತುಣುಕುಗಳು ವಿವಿಧ ವೇದಿಕೆಗಳಲ್ಲಿ ವೇಗವಾಗಿ ಹರಡುತ್ತಿದ್ದು, ಇದರಿಂದ ವಿಜಯ್ ಅವರ ವಿದಾಯದ ಚಿತ್ರಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಅಭಿಮಾನಿಗಳು, ಈ ವಿಡಿಯೋಗಳನ್ನು ಹಂಚಿಕೊಳ್ಳದಂತೆ ಪರಸ್ಪರ ಮನವಿ ಮಾಡುತ್ತಿದ್ದಾರೆ. ಅಲ್ಲದೆ, ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಕೂಡಲೇ ಸೈಬರ್ ಕ್ರೈಂ ಮೊರೆ ಹೋಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.

"ಇದು ವಿಜಯ್ ಅವರ ವಿದಾಯದ ಸಿನಿಮಾ, ಈ ರೀತಿ ಸೋರಿಕೆಯಾಗುವ ಮೂಲಕ ಅವರ ವೃತ್ತಿಜೀವನದ ಅಂತ್ಯವನ್ನು ನೋಡುವುದು ಬಹಳ ನೋವಿನ ಸಂಗತಿ" ಎಂದು ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, "ಯಾರೂ ಸೋರಿಕೆಯಾದ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ ಅಥವಾ ಡೌನ್‌ಲೋಡ್ ಮಾಡಬೇಡಿ," ಎಂದು ಮನವಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ.

'ಭಗವಂತ್ ಕೇಸರಿ' ಚಿತ್ರದ ನಕಲು?

ಸೋರಿಕೆಯಾದ ದೃಶ್ಯಗಳನ್ನು ನೋಡಿದ ಕೆಲವು ನೆಟ್ಟಿಗರು ಈ ಸಿನಿಮಾ ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರೀಮೇಕ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. "ಈ ಚಿತ್ರವು ʼಭಗವಂತ್ ಕೇಸರಿʼಯಂತೆ ಕಾಣುತ್ತಿದೆ, ವಿಜಯ್ ಅವರ 'ಐ ಡೋಂಟ್ ಕೇರ್' ಸಂಭಾಷಣೆ ಕೂಡ ಅದನ್ನೇ ನೆನಪಿಸುತ್ತದೆ," ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಸೆನ್ಸಾರ್ ಮಂಡಳಿಯ ತಗಾದೆ

ಜನ ನಾಯಕನ್' ಸಿನಿಮಾ ಜನವರಿ 9 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದಲ್ಲಿರುವ ಕೆಲವು ರಾಜಕೀಯ ಸಂಭಾಷಣೆಗಳು ಮತ್ತು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳ ಮೇಲೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಆಕ್ಷೇಪ ವ್ಯಕ್ತಪಡಿಸಿ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು. ಕಾನೂನು ಹೋರಾಟದ ನಂತರ, ಇದೀಗ ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಲು ಚಿತ್ರತಂಡ ಒಪ್ಪಿಕೊಂಡಿದೆ. ಹೀಗಾಗಿ ಸಿನಿಮಾದ ಹೊಸ ಬಿಡುಗಡೆಯ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

ಹೆಚ್. ವಿನೋದ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು, ವಿಜಯ್ ಅವರ ರಾಜಕೀಯ ಪ್ರವೇಶದ ಮುನ್ನ ಬಿಡುಗಡೆಯಾಗಲಿರುವ ಕೊನೆಯ ಚಿತ್ರ ಇದಾಗಿರುವುದರಿಂದ ದೊಡ್ಡ ಮಟ್ಟದ ನಿರೀಕ್ಷೆಗಳಿವೆ. ವಿಜಯ್ ಅವರ ಹಿಂದಿನ ಚಿತ್ರ 'ಗೋಟ್' ಮಿಶ್ರ ಪ್ರತಿಕ್ರಿಯೆ ಪಡೆದಿದ್ದರಿಂದ, ಅಭಿಮಾನಿಗಳು ಈ ಚಿತ್ರದ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದಾರೆ.ʼ

Read More
Next Story