x

ಹೂವಿನಿಂದ ಕಂಗೊಳಿಸಿದ ಕಾಶಿ ವಿಶ್ವನಾಥ

ಸಾವನ್ ಸೋಮವಾರದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನವನ್ನು ವಿವಿಧ ಬಗೆಯ ಹೂವುಗಳಿಂದ ಅದ್ಧೂರಿಯಾಗಿ ಅಲಂಕರಿಸಲಾಗಿದ್ದು, ಭಕ್ತರ ಗಮನ ಸೆಳೆದಿದೆ.


Click the Play button to hear this message in audio format

ಉತ್ತರ ಪ್ರದೇಶದ ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನವು ಸಾವನ್ ಸೋಮವಾರದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಹೂವುಗಳಿಂದ ಅದ್ಧೂರಿಯಾಗಿ ಅಲಂಕಾರಗೊಂಡಿದೆ. ಶಿವಭಕ್ತರ ಆರಾಧನೆಯ ಪ್ರಮುಖ ದಿನವಾದ ಸೋಮವಾರದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣವನ್ನು ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು. ವಿಶೇಷ ಅಲಂಕಾರದ ನಡುವೆ ಭಕ್ತರು ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಸ್ಥಾನದ ಸುಂದರ ಹೂವಿನ ಅಲಂಕಾರದ ದೃಶ್ಯಗಳು ಗಮನ ಸೆಳೆದಿವೆ.

Read More
Next Story