ಅಪರೂಪದ ಪಕ್ಷಿಗಳ ಕಲರವ ನೋಡಿ
ತೂತ್ತುಕುಡಿಯ ಪೆರುಂಗುಳಂ ಕೆರೆಗಳಲ್ಲಿ ಪೇಂಟೆಡ್ ಸ್ಟಾರ್ಕ್, ಗ್ಲಾಸಿ ಐಬಿಸ್, ಪರ್ಪಲ್ ಹೆರಾನ್ ಸೇರಿ ಅಪರೂಪದ ಜಲಪಕ್ಷಿಗಳ ಸಮೂಹ ಪ್ರಕೃತಿ ಪ್ರಿಯರ ಗಮನ ಸೆಳೆದಿದೆ.
ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಪೆರುಂಗುಳಂ ಗ್ರಾಮದ ಕೆರೆಗಳಲ್ಲಿ ಅಪರೂಪದ ಜಲಪಕ್ಷಿಗಳ ಸಮೂಹ ಕಾಣಿಸಿಕೊಂಡಿದೆ. ಆಳವಿಲ್ಲದ ನೀರಿನಲ್ಲಿ ಆಹಾರ ಹುಡುಕುತ್ತಿದ್ದ ಪೇಂಟೆಡ್ ಸ್ಟಾರ್ಕ್, ಗ್ಲಾಸಿ ಐಬಿಸ್, ಪರ್ಪಲ್ ಹೆರಾನ್ ಸೇರಿದಂತೆ ವಿವಿಧ ಜಲಪಕ್ಷಿಗಳು ಪ್ರಕೃತಿ ಪ್ರಿಯರ ಗಮನ ಸೆಳೆದಿವೆ. ಒಂದೇ ಪ್ರದೇಶದಲ್ಲಿ ಹಲವು ಪ್ರಭೇದಗಳ ಪಕ್ಷಿಗಳು ಆಹಾರ ಅರಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೆರುಂಗುಳಂನ ಕೆರೆಗಳ ಜೀವವೈವಿಧ್ಯಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ. Pearl City Nature Trust, Thoothukudi ಸಂಸ್ಥೆಯ ಥಾಮಸ್ ಮಥಿ ಬಾಲನ್ ಅವರು ಈ ಅಪರೂಪದ ಪಕ್ಷಿಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
Next Story

