ವಯನಾಡು ಸಂತ್ರಸ್ತರಿಗೆ ಮನೆ; ಪ್ರಿಯಾಂಕಾ ಪರಿಶೀಲನೆ
ವಯನಾಡಿನ ಕಲ್ಪೆಟ್ಟದಲ್ಲಿ ಭೂಕುಸಿತ ಸಂತ್ರಸ್ತರಿಗಾಗಿ ನಿರ್ಮಿಸಲಾಗುತ್ತಿರುವ ಪುನರ್ವಸತಿ ಟೌನ್‌ಶಿಪ್ ಕಾಮಗಾರಿಯನ್ನು ಸಂಸದೆ ಪ್ರಿಯಾಂಕಾ ಗಾಂಧಿ ಪರಿಶೀಲಿಸಿದರು.
ಕೇರಳದ ವಯನಾಡಿನ ಕಲ್ಪೆಟ್ಟದಲ್ಲಿ ಭೂಕುಸಿತ ಸಂತ್ರಸ್ತರಿಗಾಗಿ ನಿರ್ಮಿಸಲಾಗುತ್ತಿರುವ ಪುನರ್ವಸತಿ ಟೌನ್‌ಶಿಪ್ ಕಾಮಗಾರಿಯನ್ನು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಪರಿಶೀಲಿಸಿದರು. 2024ರ ಮುಂಡಕ್ಕೈ–ಚೂರಲ್‌ಮಲ ಭೂಕುಸಿತದಿಂದ ಸಂತ್ರಸ್ತರಾದ ಕುಟುಂಬಗಳ ಪುನರ್ವಸತಿಗಾಗಿ ಎಲ್ಸ್ಟನ್ ಎಸ್ಟೇಟ್‌ನಲ್ಲಿ ಟೌನ್‌ಶಿಪ್ ನಿರ್ಮಿಸಲಾಗುತ್ತಿದೆ. ಟೌನ್‌ಶಿಪ್‌ನ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಸುಮಾರು 150 ಮನೆಗಳನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸುವ ಗುರಿ ಇದೆ. ಅಂಗನವಾಡಿ, ಪ್ರಾಥಮಿಕ ಆರೋಗ್ಯ ಉಪಕೇಂದ್ರ, ಸಾರ್ವಜನಿಕ ಶೌಚಾಲಯ, ಫುಟ್‌ಬಾಲ್ ಕೋರ್ಟ್ ಸೇರಿದಂತೆ ಇತರೆ ಕಾಮಗಾರಿಗಳನ್ನೂ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಪ್ರಿಯಾಂಕಾ ಗಾಂಧಿ ಅಧಿಕಾರಿಗಳೊಂದಿಗೆ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದರು.
Next Story

