Rajya sabha members|HDD, ಖರ್ಗೆ ಸೇರಿದಂತಡ ರಾಜ್ಯಸಭೆಯ 59 ಸದಸ್ಯರಿಗೆ ಪ್ರಧಾನಿ ಮೋದಿ ಭಾವಪೂರ್ವ ವಿದಾಯ
x
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

Rajya sabha members|HDD, ಖರ್ಗೆ ಸೇರಿದಂತಡ ರಾಜ್ಯಸಭೆಯ 59 ಸದಸ್ಯರಿಗೆ ಪ್ರಧಾನಿ ಮೋದಿ ಭಾವಪೂರ್ವ ವಿದಾಯ

ರಾಜ್ಯಸಭೆಯ 59 ಸದಸ್ಯರ ನಿವೃತ್ತಿ ಹಿನ್ನೆಲೆ ಪ್ರಧಾನಿ ಮೋದಿ ಭಾವಪೂರ್ಣ ವಿದಾಯ ಕೋರಿದರು. ಹೆಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಮತ್ತು ಶರದ್ ಪವಾರ್ ಅವರ ಸಂಸದೀಯ ಅನುಭವವನ್ನು ಶ್ಲಾಘಿಸಿದರು.


Click the Play button to hear this message in audio format

ಏಪ್ರಿಲ್ ಮತ್ತು ಜುಲೈ ನಡುವೆ ನಿವೃತ್ತರಾಗಲಿರುವ ರಾಜ್ಯಸಭೆಯ 59 ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಭಾವಪೂರ್ಣ ವಿದಾಯ ಕೋರಿದರು. ಸಂಸತ್ತನ್ನು "ಒಂದು ಮುಕ್ತ ವಿಶ್ವವಿದ್ಯಾಲಯ" ಎಂದು ಬಣ್ಣಿಸಿದ ಅವರು, ನಿವೃತ್ತರಾಗುತ್ತಿರುವ ಸದಸ್ಯರು ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು. ಮೇಲ್ಮನೆಯಲ್ಲಿ ನಡೆದ ದ್ವೈವಾರ್ಷಿಕ ವಿದಾಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂತಹ ಕ್ಷಣಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆಸುತ್ತವೆ ಎಂದರು.

ರಾಜಕೀಯದಲ್ಲಿ ಪೂರ್ಣವಿರಾಮ ಎಂಬುದಿಲ್ಲ

ಸದನಕ್ಕೆ ಮರಳದ ಸದಸ್ಯರಿಗೆ ಧೈರ್ಯ ತುಂಬಿದ ಮೋದಿಯವರು, "ರಾಜಕೀಯ ಜೀವನದಲ್ಲಿ ಪೂರ್ಣವಿರಾಮ ಎಂಬುದು ಇರುವುದಿಲ್ಲ. ಭವಿಷ್ಯ ನಿಮಗಾಗಿ ಕಾಯುತ್ತಿದೆ ಮತ್ತು ನಿಮ್ಮ ಅನುಭವವು ರಾಷ್ಟ್ರೀಯ ಜೀವನದ ಅಳಿಸಲಾಗದ ಭಾಗವಾಗಿ ಉಳಿಯುತ್ತದೆ," ಎಂದು ಭರವಸೆ ನೀಡಿದರು.

ದೇವೇಗೌಡರು, ಖರ್ಗೆ ಮತ್ತು ಪವಾರ್‌ಗೆ ವಿಶೇಷ ಗೌರವ

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಂತಹ ಹಿರಿಯ ನಾಯಕರನ್ನು ವಿಶೇಷವಾಗಿ ಶ್ಲಾಘಿಸಿದರು. ಈ ಮೂವರು ದಿಗ್ಗಜರು ತಮ್ಮ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಸಂಸದೀಯ ನಡಾವಳಿಗಳಲ್ಲಿ ಕಳೆದಿದ್ದಾರೆ ಎಂದು ಸ್ಮರಿಸಿದ ಪ್ರಧಾನಿ, ಇಂದಿಗೂ ಅವರು ಸದನಕ್ಕೆ ತೋರುತ್ತಿರುವ ಅಚಲ ಸಮರ್ಪಣಾ ಮನೋಭಾವವು ಅದ್ಭುತವಾದುದು ಮತ್ತು ಹೊಸ ಸಂಸದರು ಅವರಿಂದ ಕಲಿಯುವುದು ಸಾಕಷ್ಟಿದೆ ಎಂದು ಹಾಡಿ ಹೊಗಳಿದರು.

ಉಪಸಭಾಪತಿ ಹರಿವಂಶ್ ಮತ್ತು ಅಠಾವಳೆ ಬಗ್ಗೆ ಮಾತು

ನಿವೃತ್ತರಾಗುತ್ತಿರುವ ಉಪಸಭಾಪತಿ ಹರಿವಂಶ್ ಅವರನ್ನು "ಮೃದು ಸ್ವಭಾವದ ಆದರೆ ಕಠಿಣ ಪರಿಶ್ರಮಿ" ಎಂದು ಪ್ರಧಾನಿ ಬಣ್ಣಿಸಿದರು. ಅವರು ಬಿಡುವಿನ ವೇಳೆಯಲ್ಲೂ ದೇಶಾದ್ಯಂತ ಪ್ರವಾಸ ಮಾಡಿ ಯುವಕರೊಂದಿಗೆ ಸಂವಹನ ನಡೆಸುತ್ತಿರುವುದನ್ನು ಮೋದಿ ಸ್ಮರಿಸಿದರು.

ಇದೇ ವೇಳೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ಬಗ್ಗೆ ತಮಾಷೆಯಾಗಿ ಮಾತನಾಡಿದ ಪ್ರಧಾನಿ, "ನಮ್ಮ ಅಠಾವಳೆ ಅವರು ಎಂದಿಗೂ ಎವರ್‌ಗ್ರೀನ್. ಅವರು ಸದನದಿಂದ ನಿರ್ಗಮಿಸುತ್ತಿದ್ದರೂ, ಅವರ ಅನುಪಸ್ಥಿತಿ ಯಾರಿಗೂ ಕಾಡುವುದಿಲ್ಲ ಎಂಬ ಭರವಸೆ ನನಗಿದೆ. ಅವರು ಸದಾ ಕ್ರಿಯಾಶೀಲರಾಗಿರುತ್ತಾರೆ," ಎಂದಾಗ ಸದನದಲ್ಲಿ ನಗೆಯ ಅಲೆ ಎದ್ದಿತು.

ಸಂಸತ್‌ನ ದ್ವಿಸದನ ವ್ಯವಸ್ಥೆಯ ಮಹತ್ವ

ಶಾಸನ ರಚನೆಯ ಪ್ರಕ್ರಿಯೆಯನ್ನು ವಿವರಿಸಿದ ಮೋದಿ, ಲೋಕಸಭೆ ಮತ್ತು ರಾಜ್ಯಸಭೆಗಳ ನಡುವಿನ ಸಂಬಂಧವನ್ನು "ಸೆಕೆಂಡ್ ಒಪಿನಿಯನ್" ಪಡೆಯುವ ಪ್ರಕ್ರಿಯೆಗೆ ಹೋಲಿಸಿದರು. "ಒಂದು ಸದನದಲ್ಲಿ ತೆಗೆದುಕೊಂಡ ನಿರ್ಧಾರವು ಮತ್ತೊಂದು ಸದನಕ್ಕೆ ಹೋಗುವುದು ಚರ್ಚೆಗೆ ಹೊಸ ದಿಕ್ಕನ್ನು ನೀಡುತ್ತದೆ ಮತ್ತು ಪ್ರಜಾಪ್ರಭುತ್ವದ ನಿರ್ಧಾರಗಳನ್ನು ಬಲಪಡಿಸುತ್ತದೆ," ಎಂದು ಅವರು ಅಭಿಪ್ರಾಯಪಟ್ಟರು.

Read More
Next Story