ಗಡಿಭಾಗದಲ್ಲಿ ಪಾಕಿಸ್ತಾನಿ ಡ್ರೋನ್‌ ಪತ್ತೆ: ರಾಜೌರಿಯಲ್ಲಿ ಹೈ ಅಲರ್ಟ್
x

ರಾಜೌರಿಯ ಬೆಹ್ರೂಟಿ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಡ್ರೋನ್‌ ಚಲನವಲನ ಪತ್ತೆಯಾಗಿದ್ದು, ಗಡಿ ಪ್ರದೇಶದಲ್ಲಿ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದೆ.

ಗಡಿಭಾಗದಲ್ಲಿ ಪಾಕಿಸ್ತಾನಿ ಡ್ರೋನ್‌ ಪತ್ತೆ: ರಾಜೌರಿಯಲ್ಲಿ ಹೈ ಅಲರ್ಟ್

ಡ್ರೋನ್‌ ಬೆಹ್ರೂಟಿ ಪ್ರದೇಶದಿಂದ ಮಂಗಳನಾರ್-ದಬ್ರೋಟೆ ಪ್ರದೇಶದತ್ತ ಸಾಗುತ್ತಿರುವುದನ್ನು ಪಡೆಗಳು ಪತ್ತೆಹಚ್ಚಿ ಅದರ ಚಲನವಲನದ ಮೇಲೆ ನಿಗಾ ಇರಿಸಿವೆ.


Click the Play button to hear this message in audio format

ಜಮ್ಮು-ಕಾಶ್ಮೀರದ ರಾಜೌರಿ ವಲಯದಲ್ಲಿ ಗಡಿಯಾಚೆಯಿಂದ ಶಂಕಿತ ಡ್ರೋನ್‌ ಚಟುವಟಿಕೆ ಪತ್ತೆಯಾಗಿದ್ದು, ನಿಯಂತ್ರಣ ರೇಖೆ (LoC) ಉದ್ದಕ್ಕೂ ಭದ್ರತಾ ಪಡೆಗಳು ಹೈಅಲರ್ಟ್‌ ಘೋಷಿಸಿವೆ. ಆಗಸ್ಟ್‌ 28ರಂದು ರಾತ್ರಿ ಸುಮಾರು 8.05ರ ವೇಳೆಗೆ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್‌ ರಾಜೌರಿಯ ಬೆಹ್ರೂಟಿ ಪ್ರದೇಶದ ಮೇಲೆ ಹಾರಾಟ ನಡೆಸುತ್ತಿರುವುದನ್ನು ಸೇನಾ ಸಿಬ್ಬಂದಿ ಗಮನಿಸಿದ್ದಾರೆ.

ಸೇನಾ ಮೂಲಗಳ ಮಾಹಿತಿ ಪ್ರಕಾರ, ಬೆಹ್ರೂಟಿ ಪ್ರದೇಶವು 22 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ (22 JAK RIF) ಘಟಕದ ಕಾರ್ಯಾಚರಣಾ ವ್ಯಾಪ್ತಿಗೆ ಸೇರಿದೆ. ಡ್ರೋನ್‌ ಬೆಹ್ರೂಟಿ ಪ್ರದೇಶದಿಂದ ಮಂಗಳನಾರ್-ದಬ್ರೋಟೆ ಪ್ರದೇಶದತ್ತ ಸಾಗುತ್ತಿರುವುದನ್ನು ಪಡೆಗಳು ಪತ್ತೆಹಚ್ಚಿ ಅದರ ಚಲನವಲನದ ಮೇಲೆ ನಿಗಾ ಇರಿಸಿವೆ.

ಡ್ರೋನ್‌ ಮೂಲಕ ಶಸ್ತ್ರಾಸ್ತ್ರ, ಮಾದಕ ವಸ್ತುಗಳು ಅಥವಾ ಇತರ ನಿಷೇಧಿತ ವಸ್ತುಗಳನ್ನು ಕೆಳಗೆ ಬೀಳಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದ ಹಿನ್ನೆಲೆಯಲ್ಲಿ ಮುಂಚೂಣಿ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಗಡಿಯುದ್ದಕ್ಕೂ ವೈಮಾನಿಕ ಮತ್ತು ನೆಲಮಟ್ಟದ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಯಾವುದೇ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲು ಭದ್ರತಾ ಪಡೆಗಳು ಸಜ್ಜಾಗಿವೆ. ಘಟನೆಯ ಕುರಿತು ಹೆಚ್ಚಿನ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

Read More
Next Story