
ಬಿಹಾರದ ನಳಂದಾ ಜಿಲ್ಲೆಯ ಶೀತಲಾಷ್ಟಮಿ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 8 ಮಹಿಳಾ ಭಕ್ತರು ಸಾವನ್ನಪ್ಪಿದ್ದಾರೆ.
Bihar Stampede| ಬಿಹಾರದಲ್ಲಿ ಭೀಕರ ಕಾಲ್ತುಳಿತ: ಎಂಟು ಮಹಿಳಾ ಭಕ್ತರ ಸಾವು, ಹಲವರಿಗೆ ಗಾಯ
ಬಿಹಾರದ ನಳಂದಾ ಜಿಲ್ಲೆಯ ಶೀತಲಾಷ್ಟಮಿ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 8 ಮಹಿಳಾ ಭಕ್ತರು ಸಾವನ್ನಪ್ಪಿದ್ದಾರೆ. ಚೈತ್ರ ಮಾಸದ ಕೊನೆಯ ಮಂಗಳವಾರದ ದರ್ಶನದ ವೇಳೆ ಈ ದುರಂತ ನಡೆದಿದೆ.
ಬಿಹಾರದ ನಳಂದಾ ಜಿಲ್ಲೆಯ ಶೀತಲಾಷ್ಟಮಿ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 8 ಮಹಿಳಾ ಭಕ್ತರು ಮೃತಪಟ್ಟಿದ್ದಾರೆ. ಚೈತ್ರ ಮಾಸದ ಕೊನೆಯ ಮಂಗಳವಾರದ ದರ್ಶನದ ವೇಳೆ ಈ ದುರಂತ ನಡೆದಿದೆ.
ಬಿಹಾರದ ನಳಂದಾ ಜಿಲ್ಲೆಯ ಬಿಹಾರ್ ಶರೀಫ್ ಸಮೀಪದ ಮಘ್ರಾ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಭೀಕರ ದುರಂತ ಸಂಭವಿಸಿದೆ. ಇಲ್ಲಿನ ಸುಪ್ರಸಿದ್ಧ ಶೀತಲಾಷ್ಟಮಿ ದೇವಸ್ಥಾನದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಎಂಟು ಮಹಿಳಾ ಭಕ್ತರು ಸಾವನ್ನಪ್ಪಿದ್ದಾರೆ ಮತ್ತು ಹನ್ನೆರಡಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ ಶೀತಲಾ ಮಾತಾ ದರ್ಶನಕ್ಕಾಗಿ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಮುಂಜಾನೆಯೇ ಭಕ್ತರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಘಟನಾ ಸ್ಥಳದಿಂದ ಬಂದಿರುವ ದೃಶ್ಯಗಳು ಅತ್ಯಂತ ವಿಘಾತಕವಾಗಿದ್ದು, ಹತ್ತಾರು ಮಹಿಳೆಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಸ್ಥಳದಲ್ಲಿ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ.
ಆಡಳಿತ ಮಂಡಳಿಯ ವೈಫಲ್ಯದ ಬಗ್ಗೆ ಭಕ್ತರ ಆಕ್ರೋಶ: ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಟ್ನಾದಿಂದ ಬಂದಿದ್ದ ಭಕ್ತರೊಬ್ಬರು, "ಪ್ರತಿ ಮಂಗಳವಾರ ಇಲ್ಲಿ ಭಾರಿ ಜನಸಂದಣಿ ಇರುತ್ತದೆ. ಆದರೆ ಇಂದು ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ ಜನಸಾಗರವೇ ಹರಿದುಬಂದಿತ್ತು. ಸರಿಯಾದ ವ್ಯವಸ್ಥೆ ಮತ್ತು ಆಡಳಿತದ ಕೊರತೆಯಿಂದಾಗಿ ಈ ಕಾಲ್ತುಳಿತ ಸಂಭವಿಸಿದೆ. ಆಂಬ್ಯುಲೆನ್ಸ್ ತಡವಾಗಿ ತಲುಪಿದೆ, ಘಟನೆ ನಡೆದಾಗ ಪೊಲೀಸರ ನಿಯೋಜನೆ ಇರಲಿಲ್ಲ" ಎಂದು ಆರೋಪಿಸಿದ್ದಾರೆ.
ಸದ್ಯ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಜಿಲ್ಲಾಡಳಿತವು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿದೆ. ಸ್ಥಳೀಯರು ಮತ್ತು ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

