x

ಕೂಕುರ್ ತಿಹಾರ್‌ ಸಂಭ್ರಮ.. ನಾಯಿಗಳಿಗೆ ಪೂಜೆ ಸಲ್ಲಿಸಿದ ಜನರು

ನೇಪಾಳದ ಕಠ್ಮಂಡುವಿನಲ್ಲಿ ಕೂಕುರ್ ತಿಹಾರ್ ಸಂಭ್ರಮ ಮನೆಮಾಡಿದೆ. ಪ್ರವಾಸಿಗರು, ಸ್ಥಳೀಯರು ಹಾಗೂ ಪೊಲೀಸರು ನಾಯಿಗಳಿಗೆ ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ ಗೌರವಿಸಿದ್ದಾರೆ.


Click the Play button to hear this message in audio format

ನೇಪಾಳದ ಕಠ್ಮಂಡುವಿನಲ್ಲಿ ತಿಹಾರ್ ಹಬ್ಬದ ಎರಡನೇ ದಿನವಾದ ಕೂಕುರ್ ತಿಹಾರ್‌ ಅನ್ನು ಸಂಭ್ರಮದಿಂದ ಆಚರಿಸಲಾಗಿದೆ. ಈ ವಿಶೇಷ ದಿನದಂದು ವಿದೇಶಿ ಪ್ರವಾಸಿಗರು, ಸ್ಥಳೀಯರು ಹಾಗೂ ನೇಪಾಳ ಪೊಲೀಸರು ನಾಯಿಗಳಿಗೆ ಪೂಜೆ ಸಲ್ಲಿಸಿ, ಹೂವಿನ ಹಾರ ಹಾಕಿ ಗೌರವ ಸಮರ್ಪಿಸಿದ್ದಾರೆ. ಮನುಷ್ಯನ ನಿಷ್ಠಾವಂತ ಸ್ನೇಹಿತನಾದ ನಾಯಿಗೆ ವಿಶೇಷ ಸ್ಥಾನ ನೀಡುವ ಈ ಸಂಪ್ರದಾಯ ಎಲ್ಲರ ಗಮನ ಸೆಳೆದಿದೆ.

Read More
Next Story