ಮುಂಬೈನಲ್ಲಿ ಚಲಿಸುತ್ತಿದ್ದ ಆಟೊ ರಿಕ್ಷಾದ ಮೇಲೆ ಮೆಟ್ರೋ ಸ್ಲ್ಬಾಬ್ ಕುಸಿದು ​​ಮೂವರ ಸ್ಥಿತಿ ಗಂಭೀರ?
x

ಮುಂಬೈನಲ್ಲಿ ಚಲಿಸುತ್ತಿದ್ದ ಆಟೊ ರಿಕ್ಷಾದ ಮೇಲೆ ಮೆಟ್ರೋ ಸ್ಲ್ಬಾಬ್ ಕುಸಿದು ​​ಮೂವರ ಸ್ಥಿತಿ ಗಂಭೀರ?

ದೊಡ್ಡ ಗಾತ್ರದ ಸ್ಲ್ಯಾಬ್ ಎತ್ತರದಿಂದ ಉದುರಿಬಿದ್ದ ಕಾರಣ ಕಾರೊಂದು ಜಖಂಗೊಂಡಿದ್ದು ಅದರೊಳಗಿದ್ದ ಕೆಲವರಿಗೂ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.


Click the Play button to hear this message in audio format

ವಾಣಿಜ್ಯ ನಗರಿ ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ನ ಸಿಮೆಂಟ್ ಸ್ಲ್ಯಾಬ್ ಕುಸಿದು, ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ಕನಿಷ್ಠ 3 ರಿಂದ 4 ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಆಟೋ ಸಂಪೂರ್ಣ ಜಖಂಗೊಂಡಿದ್ದು, ಪಕ್ಕದಲ್ಲೇ ಇದ್ದ ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ .

ಮುಂಬೈನ ಮುಲುಂಡ್ (Mulund) ಪ್ರದೇಶದ ಎಲ್‌ಬಿಎಸ್ ರಸ್ತೆಯಲ್ಲಿರುವ ಜಾನ್ಸನ್ ಆ್ಯಂಡ್​ ಜಾನ್ಸನ್ ಕಾರ್ಖಾನೆಯ ಎದುರು, ಶನಿವಾರ ಮಧ್ಯಾಹ್ನ 12:20ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮೆಟ್ರೋ ಲೈನ್-4ರ ಕಾಮಗಾರಿ ನಡೆಯುತ್ತಿದ್ದಾಗ, ಮೇಲಿದ್ದ ಸಿಮೆಂಟ್ ಬ್ಲಾಕ್ ಏಕಾಏಕಿ ಕಳಚಿ ಕೆಳಗೆ ಬಿದ್ದಿದೆ. ದುರದೃಷ್ಟವಶಾತ್, ಆ ಸಮಯದಲ್ಲೇ ಕೆಳಗೆ ಹೋಗುತ್ತಿದ್ದ ಆಟೋ ರಿಕ್ಷಾ ಇದರ ಅಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ .

ರಕ್ಷಣಾ ಕಾರ್ಯ ಚುರುಕು

ಘಟನೆ ನಡೆದ ತಕ್ಷಣ ಮುಂಬೈ ಅಗ್ನಿಶಾಮಕ ದಳ (MFB), ಸ್ಥಳೀಯ ಪೊಲೀಸರು ಮತ್ತು 108 ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. "ಪಿಲ್ಲರ್‌ನ ಒಂದು ಭಾಗ ಕುಸಿದು ಬಿದ್ದಿದ್ದರಿಂದ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೂರರಿಂದ ನಾಲ್ಕು ಜನರಿಗೆ ಗಾಯಗಳಾಗಿವೆ ಎಂದು ಶಂಕಿಸಲಾಗಿದೆ," ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಎಂಆರ್‌ಡಿಎ ಸ್ಪಷ್ಟನೆ

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಮೆಟ್ರೋಪಾಲಿಟನ್ ರೀಜನ್ ಡೆವಲಪ್‌ಮೆಂಟ್ ಅಥಾರಿಟಿ (MMRDA), "ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ಮಾಹಿತಿ ಪ್ರಕಾರ ಇಬ್ಬರು ಗಾಯಗೊಂಡಿದ್ದಾರೆ," ಎಂದು ಹೇಳಿದೆ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಗಾಯಾಳುಗಳ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದೆ. ಈ ಘಟನೆ ಮೆಟ್ರೋ ಕಾಮಗಾರಿಯ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ .

Read More
Next Story