ಮುಂಬೈನಲ್ಲಿ ಸರಣಿ ಅಪಘಾತ: 5 ಮಂದಿಗೆ ಗಾಯ
x

ಮುಂಬೈನ ವಡಾಲಾ ಆರ್‌ಟಿಒ ಸಮೀಪ ಎರಡು ಬಸ್‌ಗಳು ಹಾಗೂ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಐವರು ಗಾಯಗೊಂಡಿದ್ದಾರೆ. ಸಾಕು ನಾಯಿಗೂ ಗಾಯಗಳಾಗಿವೆ.

ಮುಂಬೈನಲ್ಲಿ ಸರಣಿ ಅಪಘಾತ: 5 ಮಂದಿಗೆ ಗಾಯ

ಡಿಕ್ಕಿಯ ರಭಸಕ್ಕೆ ಸರಣಿ ಅಪಘಾತ ಸಂಭವಿಸಿದ್ದು, ಎರಡೂ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಮುಂಭಾಗದಲ್ಲಿದ್ದ ಕಾರು ಬೆಸ್ಟ್ ಬಸ್‌ನ ಹಿಂಭಾಗದ ಕೆಳಗೆ ಸಿಲುಕಿಕೊಂಡಿದೆ.


Click the Play button to hear this message in audio format

ಮಹಾರಾಷ್ಟ್ರದ ಮುಂಬೈನಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಗಾಯಗೊಂಡಿದ್ದಾರೆ. ಎರಡು ಸಾರ್ವಜನಿಕ ಸಾರಿಗೆ ಬಸ್‌ಗಳು ಹಾಗೂ ಕಾರುಗಳ ನಡುವೆ ನಡೆದ ಈ ಅಪಘಾತದಲ್ಲಿ ಸಾಕು ನಾಯಿಯೂ ಗಾಯಗೊಂಡಿದೆ. ವಡಾಲಾ ಆರ್‌ಟಿಒ (RTO) ಸಮೀಪದ ಭಕ್ತಿ ಪಾರ್ಕ್ ಟ್ರಾಫಿಕ್ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಬೆಸ್ಟ್ (BEST) ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋಲಾಬಾ ಡಿಪೋದಿಂದ ಗವಂಗಾವ್ ಕಡೆಗೆ ಸಂಚರಿಸುತ್ತಿದ್ದ ಬೆಸ್ಟ್ ಬಸ್ ಭಕ್ತಿ ಪಾರ್ಕ್ ಸಿಗ್ನಲ್‌ನಲ್ಲಿ ಕೆಂಪು ದೀಪದ ಕಾರಣಕ್ಕೆ ನಿಂತಿತ್ತು. ಅದರ ಹಿಂದೆ ಎರಡು ಕಾರುಗಳು ಕೂಡ ನಿಂತಿದ್ದವು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಚಲೋ (Chalo) ಖಾಸಗಿ ನಿರ್ವಾಹಕರ ಬಸ್, ಕೊನೆಯಲ್ಲಿದ್ದ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಸರಣಿ ಅಪಘಾತ ಸಂಭವಿಸಿದ್ದು, ಎರಡೂ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಮುಂಭಾಗದಲ್ಲಿದ್ದ ಕಾರು ಬೆಸ್ಟ್ ಬಸ್‌ನ ಹಿಂಭಾಗದ ಕೆಳಗೆ ಸಿಲುಕಿಕೊಂಡಿದೆ. ಕಾರಿನಲ್ಲಿದ್ದ ಪ್ರಯಾಣಿಕರು ವಾಹನದ ಅವಶೇಷಗಳ ನಡುವೆ ಸಿಲುಕಿ ಗಾಯಗೊಂಡಿದ್ದಾರೆ.

ಕ್ರೇನ್ ಬಳಸಿ ಸಿಲುಕಿದ್ದವರ ರಕ್ಷಣೆ

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕ್ರೇನ್‌ಗಳ ಸಹಾಯದಿಂದ ಜಖಂಗೊಂಡ ವಾಹನಗಳನ್ನು ಬೇರ್ಪಡಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕಾರುಗಳಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಅಪಘಾತದಲ್ಲಿ ಒಟ್ಟು ಐವರು ಹಾಗೂ ಒಂದು ಸಾಕು ನಾಯಿ ಗಾಯಗೊಂಡಿವೆ. ಘಟನೆಯ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಬೆಸ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Read More
Next Story