ಕೇದಾರನಾಥ ಧಾಮದಲ್ಲಿ ಮೊದಲ ಹಿಮಪಾತ; ಹಿಮದ ಹೊದಿಕೆಯಲ್ಲಿ ಕಂಗೊಳಿಸಿದ ಮಹಾದೇವನ ಸನ್ನಿಧಿ!
ಕೇದಾರನಾಥ ಧಾಮದಲ್ಲಿ ಈ ಋತುವಿನ ಮೊದಲ ಹಿಮಪಾತ ಸಂಭವಿಸಿದೆ. ಹಿಮದ ಬಿಳಿ ಹೊದಿಕೆಯಲ್ಲಿ ಕಂಗೊಳಿಸುತ್ತಿರುವ ದೇವಾಲಯದ ಸುಂದರ ದೃಶ್ಯಗಳು ಭಕ್ತರು ಮತ್ತು ಪ್ರವಾಸಿಗರ ಗಮನ ಸೆಳೆದಿವೆ.
ಉತ್ತರಾಖಂಡದ ಪ್ರಸಿದ್ಧ ಪುಣ್ಯಕ್ಷೇತ್ರ ಕೇದಾರನಾಥ ಧಾಮದಲ್ಲಿ ಈ ಋತುವಿನ ಮೊದಲ ಹಿಮಪಾತ ಸಂಭವಿಸಿದೆ. ಹಿಮದ ಬಿಳಿ ಹೊದಿಕೆಯಲ್ಲಿ ಕಂಗೊಳಿಸುತ್ತಿರುವ ಕೇದಾರನಾಥ ದೇವಾಲಯದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಭಕ್ತರು ಮತ್ತು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಆಕಾಶದಿಂದ ಸುರಿಯುವ ಹಿಮದ ಪ್ರತಿಯೊಂದು ಕಣವೂ ಮಹಾದೇವನ ಆಶೀರ್ವಾದದಂತೆ ಭಾಸವಾಗುತ್ತಿದೆ. ಹಿಮಾಲಯದ ಮಡಿಲಿನಲ್ಲಿ ನೆಲೆಸಿರುವ ಕೇದಾರನಾಥದ ಈ ದಿವ್ಯ ಸೌಂದರ್ಯ ಭಕ್ತರಲ್ಲಿ ಆಧ್ಯಾತ್ಮಿಕ ಸಂಭ್ರಮ ಮೂಡಿಸಿದೆ. ಹಿಮವೃಷ್ಠಿಯ ಸುಂದರ ದೃಶ್ಯಗಳು, ಹಿಮದ ಹೊದಿಕೆಯಲ್ಲಿ ಕಂಗೊಳಿಸುವ ದೇವಾಲಯ ಮತ್ತು ಪ್ರಕೃತಿಯ ಅದ್ಭುತ ವೈಭವವನ್ನು ಕಣ್ತುಂಬಿಕೊಳ್ಳಿ.
Next Story
